ಜೈಲಿನಿಂದ ಬಿಡುಗಡೆಗೊಂಡು ಮತ್ತೆ ಕಳ್ಳತನ ಮಾಡುತ್ತಿದ್ದ ಕಳ್ಳನ ಬಂಧನ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.28- ಜೈಲಿನಿಂದ ಹೊರಬಂದರೂ ಬುದ್ಧಿ ಕಲಿಯದೇ 12 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಚಾಮರಾಜನಗರ ಪೆÇಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಡಾ. ಬಿ.ಟಿ.ಕವಿತಾ ಅವರು ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಾಮರಾಜನಗರ ತಾಲೂಕಿನ ಮೇಗಲಹುಂಡಿ ಗ್ರಾಮದ ಸುರೇಶ್ ಬಂಧಿತ ಆರೋಪಿ.
ಸುರೇಶ್ ಬೇರೆ ಬೇರೆ ಕಳವು ಪ್ರಕರಣಗಳಲ್ಲಿ ಜೈಲುಪಾಲಾಗಿ ಬಂದ ಕೆಲವೇ ತಿಂಗಳುಗಳಲ್ಲಿ ಪುನಃ 12 ಕಡೆ ಕಳವು ಮಾಡಿ ಈಗ ಮತ್ತೆ ಪೆÇಲೀಸ್ ಅತಿಥಿಯಾಗಿದ್ದಾನೆ. ಬೈಕ್‍ನಲ್ಲೇ ದಿನದ ಬಹುತೇಕ ಸಮಯ ಕಳೆಯುವ ಈತ, ಅಗತ್ಯ ವಸ್ತುಗಳನ್ನು ಬೈಕ್‍ನಲ್ಲೇ ಇಟ್ಟುಕೊಂಡಿರುತ್ತಿದ್ದ. ವಿಳಾಸ, ನೀರು ಕೇಳುವ ನೆಪ, ಜಮೀನು ಖರೀದಿ ಹೀಗೆ ಒಂಟಿ ಮಹಿಳೆಯರನ್ನು ಮಾತನಾಡಿಸಿ ನಂತರ ಚಾಕು ತೋರಿಸಿ ಹೆದರಿಸಿ ಸರ ಎಗರಿಸಿ ಪರಾರಿಯಾಗುತ್ತಿದ್ದ.
ಇದೇ ರೀತಿ ಕಳೆದ ಆ.23 ರಂದು ಚಾಮರಾಜನಗರ ತಾಲೂಕಿನ ಕಣ್ಣೇಗಾಲ ಗ್ರಾಮದ ಮಂಜುಳಾ ಎಂಬವರು ಬಹಿರ್ದೆಸೆಗೆ ತೆರಳಿ ಹಿಂತಿರುಗುವಾಗ ಅಡ್ಡಹಾಕಿದ ಈತ, ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿ ನಾಲ್ಕು ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ. ಬಳಿಕ, ಅಂದೇ ಚಾಮರಾಜನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲೂ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಅವರು ತಿಳಿಸಿದರು.
ಪೆÇಲೀಸರು ಇಂದು ಮುಂಜಾನೆ ಮನೆ ಹಿಂಭಾಗದಲ್ಲಿ ಅಡಗಿದ್ದ ಸರಗಳ್ಳ ಸುರೇಶ್‍ನನ್ನು ಗಾಳಿಯಲ್ಲಿ ಗುಂಡು ಹಾರಿಸಿ, ಹೊರ ಬರುವಂತೆ ಮಾಡಿ ಬಂಧಿಸಿದ್ದಾರೆ. ಬಂಧಿತ ಸುರೇಶ್‍ನನ್ನು ವಿಚಾರಣೆಗೆ ಒಳಪಡಿಸಿದಾಗ ಸರಗಳ್ಳತನ, ಹುಂಡಿಗೆ ಕನ್ನ, ಬೈಕ್ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಣ್ಣೇಗಾಲ ಗ್ರಾಮದ ಮಂಜುಳ ಎಂಬವರು ಸಂತೇಮರಹಳ್ಳಿ ಪೆÇಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲು ಮಾಡಿದ್ದರು. ಈ ಸಂಬಂಧ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಸೋಮವಾರ ಸುರೇಶ್ ಅಲಿಯಾಸ್ ಸೂರಪ್ಪನನ್ನು ಮೇಗಲಹುಂಡಿ ಗ್ರಾಮದಲ್ಲಿ ಬಂಧಿಸಿ, ಆತನಿಂದ ಕಬ್ಬಿಣದ ರಾಡು, ಚಾಕು, 72 ಚಿನ್ನದ ಗುಂಡುಗಳು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.ಸುರೇಶ್‍ನನ್ನು ಬಂಧಿಸಿದ ಪೆÇಲೀಸ್ ತಂಡಕ್ಕೆ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಡಾ. ಬಿ.ಟಿ.ಕವಿತಾ 25 ಸಾವಿರ ರೂ. ನಗದು ಬಹುಮಾನ ಘೋಷಿಸಿ, ಪ್ರಶಂಸೆ ಪತ್ರ ನೀಡಿದ್ದಾರೆ.