ಶ್ರೀ ಕೃಷ್ಣನ ಉಯ್ಯಾಲೋತ್ಸವ ಮನಸ್ಸಿಗೆ ಪರಮಾನಂದ ನೀಡುವ ಪದ್ಧತಿಯಾಗಿದೆ: ಬಿಕೆ ದಾನೇಶ್ವರಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.28-ಶ್ರೀ ಕೃಷ್ಣನ ಉಯ್ಯಾಲೋತ್ಸವ ಮನಸ್ಸಿಗೆ ಪರಮಾನಂದ ನೀಡುವ ಪದ್ಧತಿಯಾಗಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ಬಿಕೆ ದಾನೇಶ್ವರಿ ರವರು ತಿಳಿಸಿದರು.
ಅವರು ಋಗ್ವೇದಿ ಯೂಥ್ ಕ್ಲಬ್ ಹಾಗೂ ಜೈ ಹಿಂದ್ ಪ್ರತಿμÁ್ಠನ ಋಗ್ವೇದಿ ಕುಟೀರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜಯಂತಿ ಹಾಗೂ ಉಯ್ಯಾಲೋತ್ಸವ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಉಯ್ಯಾಲೆ ತೂಗುವ ಮೂಲಕ ಮಾತನಾಡಿ, ಶ್ರೀ ಕೃಷ್ಣನ ಉಯ್ಯಾಲೋತ್ಸವ ಮನಸ್ಸಿಗೆ ಪರಮಾನಂದ ನೀಡುವ ಪದ್ಧತಿಯಾಗಿದ್ದು, ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಜೆ ಶ್ರೀ ಕೃಷ್ಣನ ಉಯ್ಯಾಲೋತ್ಸವ, ಡೋಲೋತ್ಸವ, ಮಡಿಕೆ ಹೊಡೆಯುವ ಉತ್ಸವ, ಕೃಷ್ಣ ಮೆರವಣಿಗೆ, ವಿಶೇಷ ಪೂಜೆ ಪ್ರತಿಯೊಂದು ಪ್ರಕ್ರಿಯೆಯು ಭಾರತದ ವಿವಿಧ ಭಾಗದಲ್ಲಿ ವಿವಿಧ ರೀತಿಯಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.
ಶ್ರೀ ಕೃಷ್ಣನ ಅವತಾರ ಎಲ್ಲದರ ಮೂಲವಾಗಿದೆ. ಲೋಕದಲ್ಲಿ ದುಷ್ಟಶಕ್ತಿಯ ಪ್ರಾಬಲ್ಯ ಹೆಚ್ಚಾದಾಗ ನಾಶಗೊಳಿಸಲು ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಕೃಷ್ಣನ ಅವತಾರವು ಬಹು ಮುಖ್ಯವಾದದ್ದು. ಶ್ರಾವಣ ಮಾಸದ ಅಷ್ಟಮಿಯ ದಿನ ಮಧ್ಯರಾತ್ರಿ ಜನಿಸಿದ ಶ್ರೀ ಕೃಷ್ಣನ ಜೀವನವೇ ಒಂದು ರೀತಿಯ ಆತ್ಮಾವಲೋಕನದ ರಹಸ್ಯವಾಗಿದೆ. ಶ್ರೀ ಕೃಷ್ಣ ಪ್ರಜ್ಞೆಯನ್ನು ಮೂಡಿಸಿಕೊಳ್ಳುವ ಮೂಲಕ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳೋಣ. ಮನಸಿನಲ್ಲಿರುವ ದುಷ್ಟ ಗುಣಗಳನ್ನು ಸಂಹಾರ ಮಾಡುವ ಮೂಲಕ ಭಗವಂತನ ಸಂಕೀರ್ತನೆಯ ಮೂಲಕ ದಿವ್ಯ ಜ್ಞಾನವನ್ನು ರಾಜಯೋಗವನ್ನು ಪಡೆಯೋಣ. ಋಗ್ವೇದಿ ಕುಟೀರದಲ್ಲಿ ಹಮ್ಮಿಕೊಂಡಿರುವ ಉಯ್ಯಾಲೋಸವವು ಬಹಳ ಸಂತೋಷದ ಧಾರ್ಮಿಕ ಕಾರ್ಯಕ್ರಮವಾಗಿದೆ. ಆಧ್ಯಾತ್ಮಿಕ ಚಟುವಟಿಕೆಗಳು ಪ್ರತಿ ಮನೆಯಲ್ಲೂ ನಿರಂತರವಾಗಿ ಜರಗಿದಾಗ ಭಗವಂತ ನೆಲೆಸುತ್ತಾನೆ ಎಂದರು.
ಶ್ರೀ ಕೃಷ್ಣ ಪ್ರತಿμÁ್ಠನದ ಅಧ್ಯಕ್ಷರು ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕøತರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ, ಶ್ರೀ ಕೃಷ್ಣನ ಜಯಂತಿಯ ಮೂಲಕ ಪ್ರತಿಯೊಬ್ಬರು ಭಗವದ್ಗೀತೆಯ ಸಂದೇಶಗಳನ್ನು ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವ ಕಾರ್ಯ ಮಾಡಬೇಕಿದೆ. ಶ್ರೀಕೃಷ್ಣನ ಜೀವನ ನಿರಂತರ ಕಷ್ಟಗಳಿಂದ ಕೂಡಿದ್ದರು ಸಮಾಜಕ್ಕೆ ಪೂರ್ಣವಾದ ಶ್ರೇಷ್ಠ ಮಾರ್ಗವನ್ನು ನೀಡಿದವರು ಶ್ರೀಕೃಷ್ಣ ಪರಮಾತ್ಮ. ಭಾರತದ ಸಂಸ್ಕೃತಿ ಪರಂಪರೆ ಇತಿಹಾಸಕ್ಕೆ ಶ್ರೀರಾಮ ಮತ್ತು ಶ್ರೀ ಕೃಷ್ಣದೇ ಆಧಾರ ಸ್ಥಂಭಗಳು. ಮಹಾ ಕಾವ್ಯಗಳು ಮನುಷ್ಯ ಜನ್ಮದ ಪರಿಪೂರ್ಣತೆಗೆ ಇರುವ ದಿವ್ಯ ಸಂದೇಶದ ಸಾಹಿತ್ಯವಾಗಿದೆ.
ಉಯ್ಯಾಲೋಸವವು ಶ್ರೀಕೃಷ್ಣ ಜಯಂತಿಯ ವಿಶೇಷ ಪೂಜಾ ಕಾರ್ಯಕ್ರಮ. ಉಯ್ಯಾಲೆ ಮನುಷ್ಯ ಜೀವನದ ಸಂಕೇತ. ಸುಖ ದುಃಖ ಎಲ್ಲವನ್ನು ಮೈಗೂಡಿಸಿಕೊಂಡು ಸುಖವಾಗಿ ಬದುಕಿ ಸನ್ಮಾರ್ಗದಲ್ಲಿ ಜೀವನ ನಡೆಸಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವುದೇ ಆಗಿದೆ ಎಂದರು.
ಋಗ್ವೇದಿ ಯೂಥ್ ಕ್ಲಬ್ ಅಧ್ಯಕ್ಷೆ ಶರಣ್ಯ ಋಗ್ವೇದಿ ಮಾತನಾಡಿ, ಶ್ರೀ ಕೃಷ್ಣ ನಗುವಿನ ಪ್ರೀತಿಯ ಸಂಕೇತ. ಶ್ರೀ ಕೃಷ್ಣನ ನಾಮಸ್ಮರಣೆಯು ನಮ್ಮೆಲ್ಲರಲ್ಲಿ ಹೆಚ್ಚು ಶಕ್ತಿಯನ್ನು, ಚೈತನ್ಯವನ್ನು, ಸ್ಪೂರ್ತಿಯನ್ನು ನೀಡುತ್ತದೆ ಎಂದರು.
ಶಾರದಾ ಭಜನಾ ಮಂಡಳಿಯ ವತ್ಸಲಾ ರಾಜಗೋಪಾಲ್, ಸರಸ್ವತಿ ಮಾಲಾ, ವಾಣಿಶ್ರೀ, ಪಾರ್ವತಿ ಮೇಘನಾ, ಕುಸುಮ, ಶ್ರಾವ್ಯ, ಬಿಕೆ ಆರಾಧ್ಯ, ನಾಗರಾಜು ಉಪಸ್ಥಿತರಿದ್ದರು.