ಮುಬಾರಕ್‌ಗೆ ಎನ್‌ಡಿಎ ಬೆಂಬಲವಿರಲಿಲ್ಲ
ಕೋಲಾರ,ಆ,೨೮- ನಗರಸಭಾ ಚುನಾವಣೆಗೆ ಜೆ.ಡಿ.ಎಸ್. ಅಥಾವ ಬಿಜೆಪಿ ಪಕ್ಷದಿಂದ ಯಾವೂದೇ ಅಭ್ಯರ್ಥಿಯನ್ನು ಸ್ವರ್ಧೆಗೆ ಬೆಂಬಲಿಸಿರಲಿಲ್ಲ ಎಂದು ನಗರಸಭಾ ಮಾಜಿ ಉಪಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಪ್ರವೀಣ್ ಗೌಡ ತಿಳಿಸಿದರು,
ಮಾದ್ಯಮದವರೊಂದಿಗೆ ಅವರು ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗೆ ವಿರುದ್ದವಾಗಿ ಸ್ವರ್ಧಿಸಿದ್ದ ಮಾಜಿ ಅಧ್ಯಕ್ಷ ಬಿ.ಎಂ.ಮುಬಾರಕ್ ಅವರು ಕಾಂಗ್ರೇಸ್ ಪಕ್ಷದಿಂದ ಆಯ್ಕೆಯಾಗಿದ್ದವರು. ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ದವಾಗಿ ಜೆ.ಡಿ.ಎಸ್. ಪರ ಕಾರ್ಯನಿರ್ವಹಿಸಿದರು, ಲೋಕಸಭೆ ಚುನಾವಣೆಯಲ್ಲಿ ಜೆ.ಡಿ.ಎಸ್. ವಿರುದ್ದವಾಗಿ ಕಾಂಗ್ರೇಸ್ ಪರ ಕೆಲಸ ಮಾಡಿದರು.
ಹಾಗಾಗಿ ಅವರು ಯಾವೂದೇ ಪಕ್ಷದಲ್ಲಿ ವಿಶ್ವಾಸ ಉಳಿಸಿ ಕೊಂಡಿಲ್ಲ ಅವಕಾಶವಾದಿ ರಾಜಕಾರಣಿಯಷ್ಟೆ. ಸುಳ್ಳು ಹೇಳುವುದರಲ್ಲಿ ನಿಸ್ಸಿಮರು, ಕಾಂಗ್ರೇಸ್ ಪಕ್ಷಕ್ಕೆ ಮುಖಭಂಗ ಮಾಡುವುದಾಗಿ ಮಾಜಿ ಸಚಿವರಾದ ವರ್ತೂರು ಪ್ರಕಾಶ್ ಅವರ ಬೆಂಬಲ ಪಡೆದು ಕೊಂಡಿದ್ದರು. ಇದು ಅವರ ವೈಯುಕ್ತಿಕ ಬೆಂಬಲ ಹೊರತಾಗಿ ಬಿಜೆಪಿ ಪಕ್ಷದಿಂದ ಬೆಂಬಲ ನೀಡಿಲ್ಲ ಎಂದು ಸ್ವಷ್ಟ ಪಡೆಸಿದರು,
ಜೆ.ಡಿ.ಎಸ್ ಮತ್ತು ಬಿಜೆಪಿ ಪಕ್ಷದವರು ಸಂಖ್ಯಾ ಬಲ ಕೊರತೆಯ ಹಿನ್ನಲೆಯಲ್ಲಿ ಚುನಾವಣೆಗೆ ಸ್ವರ್ಧಿಸಲಿಲ್ಲ. ಅನೈತಿಕ ಬೆಂಬಲ ಪಡೆದು ಸ್ವರ್ಧಿಸಲು ಪ್ರಯತ್ನಿಸಿ ವಿಫಲರಾಗಿದ್ದು ಮುಖಭಂಗವನ್ನು ತಪ್ಪಿಸಿ ಕೊಳ್ಳಲು ನಾಮಪತ್ರ ವಾಪಾಸ್ ಪಡೆದು ಅವಿರೋಧ ಆಯ್ಕೆಗೆ ಸಹಕಾರ ನೀಡುತ್ತಿರುವುದಾಗಿ ಘೋಷಿಸಿದ್ದಾರೆ ಎಂದು ತಿಳಿಸಿದರು
ಇವರಿಗೆ ಲೋಕಸಭಾ ಸದಸ್ಯರಾದ ಮಲ್ಲೇಶ್ ಬಾಬು. ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರುಗಳು ಅಧಿಕೃತವಾಗಿ ಬೆಂಬಲ ನೀಡಿಲ್ಲ ಎಂದರು.