ತಡೆಯಾಜ್ಞೆ ಮೀರಿ ಅತಿಕ್ರಮ ಪ್ರವೇಶ
ಕೋಲಾರ,ಆ.೨೮- ಕೋರ್ಟು ತಡೆಯಾಜ್ಞೆ ಇದ್ದರೂ ಮಧ್ಯರಾತ್ರಿಯಲ್ಲಿ ವಿವಾದಿತ ಜಮೀನಿನಲ್ಲಿ ಇದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಇರುವ ಫ್ಲೆಕ್ಸ್ ಬೋರ್ಡುಗಳನ್ನು ಪೊಲೀಸರ ಎದುರಲ್ಲಿಯೇ ಕಿತ್ತು ಹಾಕಿ ಅವಮಾನಿಸಿ ಅಡ್ಡ ಬಂದ ಮಹಿಳೆಯರು ವೃದ್ಧರ ಮೇಲೆ ದೌರ್ಜನ್ಯ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಂಬೇಡ್ಕರ್ ಭಾವಚಿತ್ರ ಇರುವ ಫ್ಲೆಕ್ಸ್ ಕಿತ್ತುಹಾಕಿ ಅಕ್ರಮವಾಗಿ ಪ್ರವೇಶ ಮಾಡಿ ಕಟ್ಟಡ ನಿರ್ಮಾಣಕ್ಕೆ ನಿಲ್ಲಿಸಿ ತಮಗೆ ನ್ಯಾಯ ನ್ಯಾಯ ಬೇಕೆಂದು ಒತ್ತಾಯಿಸಿ ನೊಂದ ಕುಟುಂಬಗಳ ಸದಸ್ಯರು ಕೋಲಾರ ನಗರದ ಟೇಕಲ್ ಮುಖ್ಯ ರಸ್ತೆ ವಿವಾಹಿತ ಸ್ಥಳದಲ್ಲೇ ಧರಣಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಕೋಲಾರ ತಾಲೂಕು ಕಸಬಾ ಹೋಬಳಿ ಪೇಟೆಚಾಮನಹಳ್ಳಿ ಗ್ರಾಮದ ಸರ್ವೆ ನಂಬರ್ ೨೮/೨ ಸರ್ವೇ ನಂಬರ್ ೨೮/೧ಚಿ೧ ಈ ಜಮೀನಿಗೆ ಸಂಬಂಧಿಸಿದಂತೆ ಕೋಲಾರ ಸಹಾಯಕ ಕಮಿಷನರ್ ಉಪ ವಿಭಾಗ ಎಸಿ ಕೋರ್ಟ್ ನಿಂದ ಡಿಸೆಂಬರ್ ೫. ೨೦೨೪ರ ರಂದು ವಿಚಾರಣೆ ಇರುವುದರಿಂದ ಅದುವರೆಗೂ ಈ ಸ್ಥಳದಲ್ಲಿ ಎರಡು ಕಡೆಯವರು ಯಾವುದೇ ಪ್ರವೇಶ ಮಾಡಿದಂತೆ ತಡೆಯಾಜ್ಞೆ ನೀಡಲಾಗಿದೆ.
ಈ ಬಗ್ಗೆ ವಿವಾದಿತ ಸ್ಥಳದಲ್ಲಿ ಬೋರ್ಡ್ ಅನ್ನು ಸಹ ಬರೆಸಲಾಗಿದೆ. ಹೀಗಿದ್ದರೂ ದೌರ್ಜನ್ಯದಿಂದ ಕಾಳಸ್ತಿಪುರದ ಪ್ರವೀಣ್‌ಗೌಡ ಎಂಬುವರು ಸಂಬಂಧವಿಲ್ಲದ ಜನರನ್ನು ಮತ್ತು ಪೊಲೀಸರನ್ನು ಎತ್ತಿ ಕಟ್ಟಿ ನಮ್ಮ ಮೇಲೆ ಬಲಪ್ರಯೋಗ ಮಾಡಿ ಅತಿಕ್ರಮ ಪ್ರವೇಶಕ್ಕೆ ಮುಂದಾಗುತ್ತಿದ್ದಾರೆ. ಎಂದು ರಾಮಕೃಷ್ಣಪ್ಪ ಬಿನ್ ರಾಮದಾಸಪ್ಪ ಮಕ್ಕಳಾದ ಎಚ್.ಆರ್ ವೆಂಕಟೇಶಪ್ಪ, ನಾರಾಯಣಪ್ಪ, ಶ್ರೀನಿವಾಸಪ್ಪ ಮತ್ತು ಮಕ್ಕಳು, ಸೊಸೆಯಂದರು ಆರೋಪಿಸಿದ್ದಾರೆ.
ಈ ಬಗ್ಗೆ ಕೋಲಾರ ಜಿಲ್ಲಾ ಆಡಳಿತ ಅನ್ಯಾಯಕ್ಕೊಳಗಾದ ತಮಗೆ ನ್ಯಾಯ ಒದಗಿಸಬೇಕು ಸೂಕ್ತ ರಕ್ಷಣೆ ರಕ್ಷಣೆ ನೀಡಬೇಕು ನ್ಯಾಯಕ್ಕಾಗಿ ತಾವು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಇರುವ ಫ್ಲೆಕ್ಸನ್ನು ದೌರ್ಜನ್ಯದಿಂದ ತೆಗೆದು ಹಾಕಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ನಮಗೆ ನ್ಯಾಯ ಸಿಗದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಎಚ್.ಆರ್ ವೆಂಕಟೇಶಪ್ಪ, ನಾರಾಯಣಪ್ಪ, ಶ್ರೀನಿವಾಸಪ್ಪ, ಕೃಷ್ಣಮೂರ್ತಿ, ಚಂದ್ರಶೇಖರ್, ಯಲ್ಲಪ್ಪ, ನಾಗರಾಜ, ಪದ್ಮಮ್ಮ, ರೂಪ, ಕವಿತಮ್ಮ, ಯಶೋದಮ್ಮ, ಪದ್ಮಮ್ಮ, ವಿಜಯಕುಮಾರಿ, ನಾರಾಯಣಪ್ಪ, ಮಂಜುನಾಥ್, ರಮೇಶ್, ನವೀನ್ ಕುಮಾರ್ ಹಾಜರಿದ್ದರು.