ಮೂಲನಂದೀಶ್ವರ(ಬಸವೇಶ್ವರ) ದೇವರ ಜಾತ್ರಾಮಹೋತ್ಸವ:ಜನರ ಮನರಂಜಿಸಿದ ಜನಪದ ಗಾಯಕರು
ಬಸವನಬಾಗೇವಾಡಿ,ಆ.೨೮:ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ(ಬಸವೇಶ್ವರ) ದೇವರ ಜಾತ್ರಾಮಹೋತ್ಸವದ ಎರಡನೇ ದಿನವಾದ ಮಂಗಳವಾರ ದೇವಸ್ಥಾನದ ಪ್ರಾಂಗಣದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ವಿವಿಧ ಜನಪದ ಗಾಯಕರು ನಡೆಸಿಕೊಟ್ಟ ಭಜನಾ ಪದಗಳು, ಡೊಳ್ಳಿನ ಪದ ಜನರ ಮನರಂಜಿಸುವ ಜೊತೆಗೆ ಮನಸೂರೆಗೊಂಡವು.
ತಾಲೂಕಿನ ನಾಗೂರ ಗ್ರಾಮದ ಯಮುನೂರೇಶ್ವರ ಭಜನಾ ಮಂಡಳಿಯ ಹತ್ತು ವರ್ಷದ ಬಾಲಕಿ ಅನ್ನಪೂರ್ಣ ದೊಡ್ಡಮನಿ ಪ್ರಸ್ತುತ ಪಡಿಸಿದ ಭಜನಾಪದಗಳಿಗೆ ಜನರು ಮನಸೋತರು. ಇದೇ ತಂಡದ ಗಾಯಕರಾದ ಸುನೀತಾ ಬೀರಲದಿನ್ನಿ, ರುದ್ರಯ್ಯ ಹಿರೇಮಠ, ಮಲ್ಲಯ್ಯ ಶೀಕಳವಾಡಿಮಠ, ರುದ್ರಯ್ಯ ಹಿರೇಮಠ, ಬಾಲಗಾಯಕ ಮಲ್ಲಿಕಾರ್ಜುನ ಹಿರೇಮಠ ಅವರು ಸುಶ್ರಾವ್ಯವಾಗಿ ಭಜನಾ ಪದಗಳನ್ನು ಪ್ರಸ್ತುತಪಡಿಸುವ ಮೂಲಕ ನೆರೆದ ಜನರ ಮನಸೂರೆಗೊಂಡರು. ಇವರಿಗೆ ಕಾಂತು ಪಡೇಕನೂರ, ಮಲ್ಲು ಸಜ್ಜನ, ಹಣಮಂತ ಹುಣಶ್ಯಾಳ, ಹಣಮಂತ ದಿಂಡವಾರ, ನಿಂಗಪ್ಪ ಹೂಗಾರ ಅವರು ವಿವಿಧ ವಾದ್ಯಗಳನ್ನು ನುಡಿಸುವ ಮೂಲಕ ಸಂಗೀತ ಸಾಥ್ ನೀಡಿದರು.
ತಳೇವಾಡದ ಶ್ರೀಸದ್ಗುರು ಸಾದುಮುತ್ಯಾ ಭಜನಾ ಮಂಡಳದ ಬಾಲಗಾಯಕರಾದ ಸಹೋದರಿಯರಾದ ರೂಪಾ ಐಹೊಳ್ಳಿ, ಸುಶ್ಮಿತಾ ಐಹೊಳ್ಳಿ, ನಗನೂರಿನ ಚೌಡೇಶ್ವಿರ ಭಜನಾ ಮಂಡಳಿಯ ಬಾಲಗಾಯಕರಾದ ದೀಪಾ ಡೊಡ್ಡಮನಿ, ಜ್ಯೋತಿ ದೊಡ್ಡಮನಿ ಅವರ ಭಜನಾ ಪದಗಳಿಗೆ ಜನತೆ ಮನಸೋತರು.
ದೇವಸ್ಥಾನದ ಪ್ರಾಂಗಣದಲ್ಲಿ ಗೊಳಸಂಗಿಯ ಬೀರಲಿಂಗೇಶ್ವರ ಗಾಯನ ಸಂಘದ ಬಾಲಗಾಯಕರಾದ ಸುಮಿತ್ರಾ ಗೊಳಸಂಗಿ, ರೇಣುಕಾ ಗೊಳಸಂಗಿ, ಭಾಗ್ಯಶ್ರೀ ಗೊಳಸಂಗಿ ಅವರು ಹಾಡಿದ ಡೊಳ್ಳಿನ ಪದಗಳು, ಸೋಲವಾಡಗಿಯ ಅಮೋಘಸಿದ್ದೇಶ್ವರ ಡೊಳ್ಳಿನ ಮೇಳದ ಗಾಯಕರಾದ ಸಿದ್ದು ಮಾಸ್ತರ ಸಾಲವಾಡಗಿ, ಮುತ್ತಣ್ಣ, ಮುದಕಣ್ಣ ಮಾಸ್ತರ ಬಾಗೇವಾಡಿ, ಸಿದ್ದು ಇಂಗಳಗಿ ಅವರು ಹಾಡಿದ ಡೊಳ್ಳಿನ ಪದಗಳು, ದೇವಸ್ಥಾನದ ನಂದೀಶ್ವರ ರಂಗಮAದಿರ ಮುಂಭಾಗ ಬಸವನಬಾಗೇವಾಡಿಯ ಅಮೋಘಸಿದ್ದೇಶ್ವರ ಗಾಯನ ಸಂಘದ ರೇವಣಸಿದ್ದ ದೇಸಾಯಿ, ಮಾಳಿಂಗರಾಯ ಡೊಳ್ಳಿನ ಗಾಯನ ಸಂಘದ ಲೇಸು ಪೂಜಾರಿ ಅವರು ಪ್ರಸ್ತುತ ಪಡಿಸಿದ ಡೊಳ್ಳಿನ ಪದಗಳನ್ನು ಜನತೆ ಶಾಂತಚಿತ್ತರಾಗಿ ಆಲಿಸುವ ಮೂಲಕ ಜನಪದ ಸಾಹಿತ್ಯವನ್ನು ಆಲಿಸುವ ಮೂಲಕ ಸಂಭ್ರಮಿಸಿದರು.