ಸಕಾರತ್ಮಾಕ ಭಾವನೆ ಬೆಳೆಸಿ ಕೊಳ್ಳಲು ಮುನಿಕೆಂಪೇಗೌಡ ಕರೆ
ಚಿಕ್ಕಬಳ್ಳಾಪುರ,ಆ,೨೮:ನಗರ- ಗ್ರಾಮೀಣ ಶಾಲೆಯಲ್ಲಿ ವೇಳಾಪಟ್ಟಿಯಂತೆ ಪಠ್ಯ ಚಟುವಟಿಕೆ ಮೂಲಕ ಕಲಿಕೆ ಈ ಶಿಬಿರದ ಮೂಲ ಉದ್ದೇಶವಾಗಿದೆ. ಶಿಬಿರದಲ್ಲಿ ಮೌಲ್ಯದ ಗುಣಗಳ ಜೊತೆ ಜೊತೆಗೆ ಆಕಸ್ಮಿಕ ಅವಘಡಗಳನ್ನು ಎದುರಿಸುವ ಶಕ್ತಿ ನಿಮಗೆ ಸಿಗುತ್ತದೆ. ನಕಾರತ್ಮಕ ಗುಣಗಳನ್ನು ವರ್ಜಿಸಿ ಸಕಾರತ್ಮಕವಾದ ಭಾವನೆಗಳನ್ನು ಬೆಳೆಸಿಕೊಂಡು ಪರಿಸರ ಸ್ನೇಹಿಗಳಾಗಿ ಬಾಳಿ. ಸ್ವಾವಲಂಬಿ ಬದುಕಿಗೆ ನಮ್ಮ ತನವನ್ನು ರೂಡಿಸಿಕೊಳ್ಳಬೇಕು ಎಂದು ಭಾರತ್ ಸೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ಆಯುಕ್ತರು ಮತ್ತು ಡಯಟ್ ಉಪನಿದೆರ್ಶಕರಾದ ಮುನಿಕೆಂಪೇಗೌಡ ರವರು ಕರೆ ನೀಡಿದರು.
ಬಿ.ಜಿ.ಎಸ್ ವಲ್ಡ್ ವಿದ್ಯಾ ಸಂಸ್ಥೆಯ ಆವರಣದಲ್ಲಿ ೨ ದಿನಗಳ ಕಾಲ ಆಯೋಜಿಸಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ತೃತೀಯ ಸೋಪಾನ ಶಿಬಿರವನ್ನು ಸಸಿಗೆ ನೀರು ಹಾಕುವ ಮುಖೇನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಾ ನಮ್ಮಗಳ ಭವಿಷ್ಯ ನಮ್ಮ ಕೈಯ್ಯಲ್ಲಿದೆ, ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯಂತೆ ವಿಶ್ವದ ಶೇ ೨೫% ಮಕ್ಕಳು ಹಲವು ರೀತಿಯ ದುಶ್ಛಟ-ವ್ಯಸನಿಗಳಾಗಿದ್ದಾರೆ, ನೀವು ಇವುಗಳಿಂದ ದೂರವಿರಬೇಕು, ನೀವುಗಳು ಹದ್ದಿನಂತೆ ತೀಕ್ಷ್ಣವಾದ ಕಣ್ಣುಗಳನ್ನು ದೂರದೃಷ್ಠಿ ಹೊಂದಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಜಯಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತ ಗತ ವೈಭವವನ್ನು ತಿಳಿಸುವ ಸಂಸ್ಥೆ ಪ್ರಾಂಶುಪಾಲ ದೀಪಿಕಾ ಶರ್ಮಾ ಮಾತನಾಡಿ ಪಠ್ಯ ಮತ್ತು ಪಠ್ಯೇತರ ವಿಷಯಗಳ, ವೈಜ್ಞಾನಿಕವಾಗಿ ಚಿಂತನ-ಮಂತನವಾದ ತರಬೇತಿ ಶಿಬಿರವಾಗಿದೆ, ಸರಳ ನಿಯಮ ಬದ್ಧ, ಶಿಭಿರ ಇದಾಗಿದ್ದು ನೀವುಗಳೆಲ್ಲರು ಸದುಪಯೋಗ ಪಡಿಸಿಕೊಳ್ಳಿ, ಉಲ್ಲಾಸ ಮನಸ್ಸಿನಿಂದ ನುರಿತ ತರಬೇತಿದಾರರ ಸಲಹೆ, ಸೂಚನೆ, ಮಾರ್ಗದರ್ಶನ ಪಡೆದು ಇಲ್ಲಿನ ಜ್ಞಾನ ಜೀವನದ ಉದ್ದಕ್ಕೂ ಅಳವಡಿಸಿಕೊಳ್ಳಿ ಎಂದು ಹೇಳಿದರು.
ಇಂದು ನೀವು ಈ ಶಿಬಿರದಿಂದ ರಾಷ್ಟ್ರ ಮಟ್ಟದ ಪದಕವನ್ನು ಸಹ ಗಳಿಸಿಕೊಳ್ಳಬಹುದು, ಆದರೆ ನಿಮ್ಮಲ್ಲಿನ ಶಿಸ್ತು ಶ್ರದ್ದೆಗಳು ಮುಂದಿನ ಭವಿಷ್ಯತ್ತಿನ ಅರಿವಿನ ಬುನಾದಿ ಈ ಶಿಬಿರದಿಂದ ದೊರೆಯಲಿ ೪ ಗೋಡೆಗಳ ನಡುವಿನ ಕಲಿಕೆಗಿಂತಲೂ ಪರಿಸರದ ಜೊತೆಗಿನ ಕಲಿಕೆ ಅತ್ಯುತ್ತಮ ಎಂದು ನುಡಿದರು.
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಎಸ್.ಜೆ.ಸಿ ಸಂಸ್ಥೆಯ ಉಪನ್ಯಾಸಕ ಗಿರಿಬಾಬು. ರವರು ಮಾತನಾಡಿ ನೀವುಗಳು ಈ ಶಿಬಿರದಲ್ಲಿ ಓದು ಬರಹ-ಪುಸ್ತಕ ರಹಿತವಾದ ಪಠ್ಯೇತರ. ದೇಹ-ಮನಸ್ಸಿನ ಸಮತೋಲನ ವೃದ್ಧಿ ಈ ಶಿಭಿರದಿಂದ ನಿಮಗೆ ದೊರೆಯುತ್ತದೆ, ಪ್ರತಿಯೊಬ್ಬರು ಆರೋಗ್ಯಕರ ಸದೃಢವಾದ ದೈಹಿಕ ಚಟುವಟಿಕೆಯು ಕನ್ನಡ ಮಾತೆಯ ಸದೃಢ ಪುತ್ರರಾಗಿ ಬೆಳೆಯಲು ಸಾಧ್ಯ, ಎಂದು ಅಭಿಪ್ರಾಯ ಪಟ್ಟರು,
ಪ್ರಕೃತಿ ವಿಕೋಪಗಳ ಸಮಯದಲ್ಲಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಹಾಗೂ ಇತರರನ್ನು ರಕ್ಷಣೆ ಮಾಡಲು ಉತ್ತರ ತರಬೇತಿ ಇಂತಹ ಶಿಭಿರಗಳಿಂದ ಸಿಗುತ್ತದೆ. ಶಿಸ್ತು ಬಧ್ದ ಜೀವನ ಉತ್ತುಂಗ ಜ್ಞಾನಾಭಿವೃದ್ಧಿಗೆ ಸಾಧನೆ ಪ್ರೌಢ ಅವಸ್ಥೆಯಲ್ಲಿ ನಿಮ್ಮ ಮನಸ್ಸನ್ನು ಚಂಚಲ ಮಾಡಿಕೊಳ್ಳಬೇಡಿ ನಿಮ್ಮ ಮನ-ತನು ಕೇಂದ್ರಕರಿಸಿ ಶಿಭಿರದಲ್ಲಿ ಪಾಲ್ಗೊಳ್ಳಿ ಎಂದು ತಿಳಿಸಿದರು.
ಶಿಬಿರದಲ್ಲಿ ವಿವಿಧ ಶಾಲೆಗಳಿಂದ ಶಿಬಿರದಲ್ಲಿ ಭಾಗವಹಿಸಿದ್ದ ೧೦೦ ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಭಾಗವಹಿಸಿದ್ದರು. ತರಬೇತಿದಾರರಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಸಂಘಟಕರು ವಿಶ್ವನಾಥ.ವಿ. ಸಂಸ್ಥೆಯ ಕಾರ್ಯದರ್ಶಿ ನಾರಾಯಣಸ್ವಾಮಿ, ಸ್ಥಳಿಯ ಸಂಸ್ಥೆ ಪದಾಧಿಕಾರಿಗಳಾದ ಚಂದ್ರಕಲಾ, ವಸಂತ್ ಕುಮಾರ್, ಗಂಗರತ್ನ, ಅಮಲ, ರವಿಕುಮಾರ್, ಮಮತ ಹಾಗೂ ಮುತಾಂದವರು ಶಿಬಿರದಲ್ಲಿ ಉಪಸ್ಥಿರಿದ್ದರು.