ನಾಲ್ಕು ನೂತನ ಸಾರಿಗೆ ಬಸ್‌ಗಳಿಗೆ ಚಾಲನೆ ನೀಡಿದ ಶಾಸಕ ಡಾ.ಅವಿನಾಶ ಜಾಧವ
(ಸಂಜೆವಾಣಿ ವಾರ್ತೆ)
ಚಿಂಚೋಳಿ, ಆ.೨೮- ಚಿಂಚೋಳಿ ತಾಲ್ಲೂಕು ಬಸ್ ಘಟಕ ಹಾಗೂ ಕಾಳಗಿ ತಾಲೂಕು ಬಸ್ ಘಟಕಕ್ಕೆ ಸೇರಿದ ತಲಾ ಎರಡು ಒಟ್ಟು ನಾಲ್ಕು ಸಾರಿಗೆ ಬಸ್ ಗಳ ಸೇವೆಗೆ ಶಾಸಕ ಡಾ.ಅವಿನಾಶ ಜಾಧವ ಚಾಲನೆ ನೀಡಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ನಿಗಮದಿಂದ ಬಂದ ಈ ಬಸ್ಸುಗಳಿಗೆ ಶಾಸಕ ಅವಿನಾಶ ಜಾಧವ ಅವರು, ಪೂಜೆಯನ್ನು ಸಲ್ಲಿಸಿ ಹಸಿರು ನಿಶಾನೆಯನ್ನು ತೋರಿಸುವುದರ ಮೂಲಕ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಬಸ್ ಘಟಕ ವ್ಯವಸ್ಥಾಪಕ ಅಶೋಕ ಪಾಟೀಲ್, ಗೋಪಾಲರಾವ ಕಟ್ಟಿಮನಿ ಭೀಮಶೆಟ್ಟಿ ಮುರುಡಾ, ಕೆ.ಎಂ.ಬಾರಿ, ವಿಜಯಕುಮಾರ ಚೆಂಗಟಾ ಶ್ರೀಮಂತ ಕಟ್ಟಿಮನಿ, ಅಮರ್ ಲೊಡ್ಡನೋರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.