ಹೆಸರು ಬೆಳೆ ಖರೀದಿ ಕೇಂದ್ರ ಸ್ಥಾಪನೆಗೆ ಹರ್ಷ
ಚಿತ್ತಾಪುರ:ಆ.೨೮:ಕೇಂದ್ರ ಸರ್ಕಾರವು ೨೦೨೪-೨೫ ನೇ ಸಾಲಿನ ಹೆಸರು ಕಾಳು ಖರೀದಿಗೆ ಕೇಂದ್ರಕ್ಕೆ ಅನುಮತಿ ನೀಡಿರುವದರಿಂದ ಬೆಂಬಲ ಬೆಲೆ ಸಿಗದೇ ರೈತರಿಗೆ ಆಗುತ್ತಿದ್ದ ಅನ್ಯಾಯವನ್ನು ತಡೆಯಲು ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರವನ್ನು ಸ್ಥಾಪಿಸಿದ್ದರಿಂದ ನಮ್ಮ ಭಾಗದ ರೈತರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಚಿತ್ತಾಪುರ ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದುಗೌಡ ಅಫಜಲ್‌ಪುರಕರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಹೆಸರು ಬೆಳೆ ಉತ್ತಮ ಫಸಲು ನೀಡುತ್ತಿದ್ದು ಈಗಾಗಲೇ ಹೆಸರು, ಉದ್ದು ಬೆಳೆ ಕಟಾವು ಕಾರ್ಯ ನಡೆದಿದೆ. ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡು ಬಂದಿದೆ. ಹಾಗಾಗಿ ಬೆಂಬಲ ಬೆಲೆ ಯೊಜನೆಯಲ್ಲಿ ಹೆಸರು ಖರೀದಿ ಮಾಡಲು ರಾಜ್ಯ ಸರ್ಕಾರವು ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳಿಸಲಾಗಿತ್ತು. ಇದಕ್ಕೆ ಕೇಂದ್ರ ಸರ್ಕಾರವು ಅನುಮತಿ ನೀಡಿ ಪ್ರತಿ ಕ್ವಿಂಟಾಲ್‌ಗೆ ೮೬೮೨ ದರವನ್ನು ನಿಗದಿ ಮಾಡಿದ್ದಲ್ಲದೇ ೨೨,೨೧೫ ಟನ್ ಹೆಸರು ಬೆಳೆ ಖರೀದಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿರುವದು ರೈತರಿಗೆ ತುಂಬಾ ಅನುಕೂಲವಾಗಲಿದೆ ಇದರ ಪ್ರಯೊಜನವನ್ನು ರೈತರು ಪಡೆದುಕೊಳ್ಳಲು ತಮ್ಮ ಸಮಿಪದ ರೈತ ಸಂಪರ್ಕ ಕೇಂದ್ರ, ನಾಡ ಕಚೇರಿ, ತೊಟಗಾರಿಕೆ ಇಲಾಖೆ, ಸಿ.ಎಚ್.ಸಿ ಕೇಂದ್ರಗಳಿಗೆ ಭೆಟ್ಟಿ ನೀಡಿ ಎಫ್‌ಐಡಿ ಮಾಡಿಸಿಕೊಳ್ಳಬೇಕು ಎಂದು ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.