ಗ್ರಂಥಾಲಯ ಕಟ್ಟಡಕ್ಕೆ ಶಾಸಕ ಸಿದ್ದು ಪಾಟೀಲರಿಂದ ಭೂಮಿ ಪೂಜೆ
ಸಂಜೆವಾಣಿ ವಾರ್ತೆ
ಹುಮನಾಬಾದ್: ಆ.೨೮:ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಯೋಜನೆ ಅಡಿಯಲ್ಲಿ ೨೦೨೪, ೨೫ ನೇ ಸಾಲಿನಲ್ಲಿ ಸುಮಾರು ೧ ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಪಟ್ಟಣದಲ್ಲಿ ನಿರ್ಮಿಸಲಾಗುತ್ರಿರುವ ಸುಸ್ಸಜಿತ ಡಿಜಿಟಲ್ ಗ್ರಂಥಾಲಯ ಕಟ್ಟಡ ಕಾಮಗಾರಿಗೆ ಶಾಸಕ ಡಾ.ಸಿದ್ದಲಿಂಗಪ್ಪಾ ಪಾಟೀಲ ಅವರು ಮಂಗಳವಾರ ಭೂಮಿ ಪೇಜೆ ಮಾಡಿ, ಚಾಲನೆ ನೀಡಿದರು. ಬಳಿಕ ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಸುಮಾರು ೧ ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಬಾಲಕರ ಫ್ರೌಢ ಶಾಲೆಯಲ್ಲಿ ನಿರ್ಮಾಣ ಮಾಡುತ್ತಿರುವ ೯ ಕೋಣೆಗಳ ಕಟ್ಟಡ ಕಾಮಗಾರಿಗೆ ಪೂಜೆ ನೇರವೇರಿಸಿದ್ದರು.
ಈ ಸಂದರ್ಭದಲ್ಲಿ ಉಪ ಪ್ರಾಶುಂಪಾಲರಾದ ಸಂತು ದೇವಿಂದ್ರ, ಶಿಕ್ಷಕರಾದ ಶಿವಕುಮಾರ ನಿಂಬೂರೆ, ಮೆಹಬೂಬ್ ಪಾಟೀಲ, ವಿರೇಂದ್ರ ರೆಡ್ಡಿ ಜಂಪಾ, ಅಬ್ದುಲ್ ತಾಂಬೆ, ಆರೀಫ, ರವೀಂದ್ರ, ಸಾರಿಕಾ, ಪ್ರವೀಣಾ, ಗಂಗಾ, ತ್ರೀವೇಣ , ಮಂಡಲ ಅಧ್ಯಕ್ಷ ಅನಿಲ ಪಸಾರ್ಗಿ ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಮೋಹಳೆ, ನಗರ ಘಟಕ ಅಧ್ಯಕ್ಷ ಜ್ಞಾನದೇವ ಧೂಮಾಳೆ, ಯುವ ಉದ್ಯಮಿ ಸಂತೋಷ ಪಾಟೀಲ, ಮಂಡಲದ ಮಾಜಿ ಅಧ್ಯಕ್ಷ ಪ್ರಭಾಕರ ನಾಗರಾಳೆ, ವೈಜಿನಾಥ ಪಾಟೀಲ, ಪ್ರಕಾಶ ತಿಬಶೆಟ್ಟಿ, ಮಾಣ ಕ ರೆಡ್ಡಿ, ಸಂಜು ವಾಡೇಕರ್. ಇದ್ದರು.