ವೃತ್ತಿರಂಗ ಭೂಮಿ ಉಳಿಸಿ ಬೆಳೆಸುವ ಕಾರ್ಯವಾಗಬೇಕು:ಪಟ್ಟಣಶೆಟ್ಟಿ
ಬಸವನಬಾಗೇವಾಡಿ :ಆ.೨೮: ಸಾಮಾಜಿಕ ಜಾಲತಾಣ ಅಬ್ಬರದಲ್ಲಿ ವೃತ್ತಿರಂಗಭೂಮಿ ನಸಿಸಿ ಹೋಗುತ್ತಿದ್ದು. ಅದನ್ನು ಉಳಿಸಿ ಬೆಳಸುವ ಕಾರ್ಯವಾಗಬೇಕು ಎಂದು ಸಹಕಾರಿ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು. ಸೋಮವಾರ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಇಂದಿರಾ ಕ್ಯಾಂಟಿನ್ ಹಿಂಭಾಗದ ಜಾಗೆಯಲ್ಲಿ ವಿಶ್ವಜ್ಯೋತಿ ಪಂಚಾಕ್ಷರ ನಾಟ್ಯಸಂಘ ಜೇವರ್ಗಿ ಕಂಪನಿಯ ರಾಜಣ್ಣ ಜೇವರ್ಗಿವರು ವಿರಚಿತ ನಾಟಕ “ಕುಂಟ ಕೋಣ ಮುಕ ಜಾಣ” ಎಂಬ ನಾಟಕ ಉದ್ಘಾಟನಾ ಸಮಾರಂಭವನ್ನು ಉದ್ಘಾಟನಾ ನೆರವೇರಿಸಿ ಮಾತನಾಡಿದವರು ನಾಟಕ ಮತ್ತು ಚಲನಚಿತ್ರಗಳು ಮನುಷ್ಯನ ಬದುಕನ್ನು ಬದಲಿಸುವಂತ ಸಾಮರ್ಥ್ಯವನ್ನು ಹೊಂದಿವೆ. ಎಷ್ಟೊ ಜನರು ಅವರ ಅಭಿನಯ ಕಂಡು ನಾವು ಕೂಡಾ ನಮ್ಮ ಜೀವನ ಮತ್ತು ಬದುಕಿನಲ್ಲಿ ಹಂತ ಸಾಧನೆ ಮಾಡಬೇಕು ಎಂದು ಸಾಧನೆ ಮಾಡಿದ ಉದಾಹರಣೆಗಳಿವೆ ಎಂದು ಹೇಳಿದರು.
ಆದರೆ ಇಂದು ಸಾಮಾಜಿಕ ಜಾಲತಾಣದತ್ತ ನಮ್ಮ ಯುವಕರು ಮಾರುಹೋಗಿ ಎಷ್ಟೊ ಕುಟುಂಬಗಳು ಹಾಳಾಗಿರುವ ಸಂಗತಿಗಳು ನಿತ್ಯವು ನೋಡುತ್ತಿದ್ದೆವೆ. ನಾಟಕ ಮತ್ತು ಸಿನಿಮಾಗಳನ್ನು ವಿಕ್ಷಿಸಿ ಕೆಟ್ಟದನ್ನು ಅಲ್ಲೇ ಬಿಟ್ಟು ಒಳ್ಳೆಯದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಪಿ.ಕೆ.ಪಿ.ಎಸ್. ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ ವೃತ್ತಿರಂಗಭೂಮಿ ಕಲಾವಿದರ ಬದುಕು ಇಂದು ಕಷ್ಟಕರದಲ್ಲಿದ್ದು. ಸರ್ಕಾರ ಅವರ ನೇರವಿಗೆ ಬರಬೇಕು. ತಾಲೂಕು ಮಟ್ಟದಲ್ಲಿ ರಂಗ ಮಂದಿರ ನಿರ್ಮಿಸಿದರೆ ಕಲಾವಿದರಿಗೆ ಸಹಕಾರವಾಗುತ್ತದೆ ಎಂದು ಹೇಳಿದರು.
ಬಸವನಾಡಿನ ಜನರು ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಸಂತಸದ ಸಂಗತಿ ಇನ್ನಷ್ಟು ಕೆಲೆಯನ್ನು ಉಳಿಸಿ ಬೆಳೆಸುವ ಕಾರ್ಯವಾದಾಗ ಮಾತ್ರ ವೃತ್ತಿ ರಂಗಭೂಮಿ ಕಲಾವಿದರ ಬದುಕು ಹಸನಾಗಲು ಸಾಧ್ಯ ಎಂದು ಹೇಳಿದರು.
ಜಾತಾ ್ರಉತ್ಸವ ಸಮಿತಿ ಅಧ್ಯಕ್ಷ ಗುರಲಿಂಗ ಬಸರಕೋಡ ಅಧ್ಯಕ್ಷತೆವಹಿಸಿದ್ದರು. ಮುಖ್ಯಅಥಿತಿಯಾಗಿ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ಟಿ.ಎ.ಪಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಎಂ.ಜಿ. ಆದಿಗೊಂಡ, ಪುರಸಭೆ ಮಾಜಿ ಅಧ್ಯಕ್ಷ ಬಸಣ್ಣ ದೇಸಾಯಿ, ಭರತ್ ಅಗರವಾಲ, ಬಸವರಾಜ ಹಾರಿವಾಳ, ಸಂಗಮೇಶ ಓಲೇಕಾರ, ರವಿ ರಾಠೋಡ, ರವಿ ಚಿಕ್ಕೊಂಡ, ಎಂ.ಬಿ. ತೋಟದ, ಬಾಬು ನಿಡಗುಂದಿ, ಸಂಗಣ್ಣ ಕಲ್ಲೂರ, ಬಸವರಾಜ ಕೋಟಿ, ಕೆ. ಗಂಗಾಧರ, ಸಂಜು ಬಿರಾದಾರ, ಸಂಕನಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ರಾಜಣ್ಣ ಜೇವರ್ಗಿ ಮಾತನಾಡಿದರು. ಕೊಟ್ರೇಶ ಹೆಗಡ್ಯಾಳ ಸ್ವಾಗತಿಸಿ. ಕಾರ್ಯಕ್ರಮ ನಿರೂಪಿಸಿದರು. ಪ್ರಭಾಕಾರ ಖೇಡದ ವಂದಿಸಿದರು.