ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿನ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಡಾ. ಅಜಯಸಿಂಗ್‍ರಿಗೆ ಮನವಿ
ಕಲಬುರಗಿ:ಆ.27:ನಗರದ ಚಂದ್ರಶೇಖರ್ ಪಾಟೀಲ ಜಿಲ್ಲಾ ಒಳಾಂಗಣ ಬ್ಯಾಡಮಿಂಟನ್ ಕ್ರೀಡಾಂಗಣದಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಅವರಿಗೆ ಜಿಲ್ಲಾ ಬ್ಯಾಡ್ಮಿಂಟನ್ ಅಸೋಶಿಯೇಶನ್ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ಅವರು ಮನವಿ ಪತ್ರ ಸಲ್ಲಿಸಿದರು.
ನಿಯೋಗದ ನೇತೃತ್ವ ವಹಿಸಿ ಮನವಿ ಪತ್ರ ಸಲ್ಲಿಸಿದ ಅವರು, ಬೆಂಗಳೂರಿನಲ್ಲಿರುವ ಬ್ಯಾಡಮಿಂಟನ್ ಸುಸಜ್ಜಿತ ಒಳಾಂಗಣ ಬಿಟ್ಟರೆ ನಗರದಲ್ಲಿ ಮಾತ್ರ 6 ಬ್ಯಾಡಮಿಂಟನ್ ಕೋರ್ಟ್‍ಗಳಿರುವ ಒಳಾಂಗಣ ಇದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ ಕ್ರೀಡಾಪಟುಗಳ ಕೊರತೆ ನಮ್ಮಲ್ಲಿ ಇಲ್ಲ. ಸಾಕಷ್ಟು ಯುವಕ, ಯುವತಿಯರು ಬೆಳಿಗ್ಗೆ ಮತ್ತು ಸಾಯಂಕಾಲ ಎರಡು ಹೊತ್ತು ಸುಮಾರು ವಿದ್ಯಾರ್ಥಿಗಳು 400ರೂ.ಗಳು ಹಾಗೂ ಯುವಕರು 500ರೂ.ಗಳನ್ನು ಕೊಟ್ಟು ದಿನಾಲೂ ಆಟ ಆಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಒಳಾಂಗಣದಲ್ಲಿ ಸಮಸ್ಯೆಗಳ ಸರಮಾಲೆ ಬಹಳ ವರ್ಷಗಳಿಂದ ಇದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿಲ್ಲ. ಈಗಲಾದರೂ ಸರಿಪಡಿಸಿ ಕ್ರೀಡಾಪಟುಗಳಿಗೆ ಸಹಾಯ ಮಾಡಬೇಕು ಎಂದು ಒತ್ತಾಯಿಸಿದ ಅವರು, 6 ಕೋರ್ಟ್‍ಗಳ ಮೇಲೆ ಮ್ಯಾಟ್ ಹಾಳಾಗಿ ಹೋಗಿದೆ. ಪುರುಷ, ಮಹಿಳೆಯರ ಶೌಚಾಲಯಗಳು ಹದಗೆಟ್ಟು ಹೋಗಿವೆ, ಒಳಾಂಗಣದಲ್ಲಿ ಮೇಲಾವಣಿ ಸೋರಿ ಉಡನ್ ಫೆÇ್ಲೀರಿಂಗ್ ಹಾಳಾಗಿ ಹೋಗುತ್ತಿದೆ. ಒಳಾಂಗಣಕ್ಕೆಂದೇ ತಂದಿರತಕ್ಕಂತಹ ಜನರೇಟರ್ ಬೇರೆ ಸರ್ಕಾರಿ ಇಲಾಖೆಗೆ ತೆಗೆದುಕೊಂಡು ಹೋಗಿದ್ದಾರೆ. ಇಲ್ಲಿ ವಿದ್ಯುತ್ ಇಲ್ಲದಿದ್ದರೆ ಜನರೇಟರ್ ಇಲ್ಲ. ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಸುಮಾರು ವರ್ಷಗಳಿಂದ ಒಳಾಂಗಣದಲ್ಲಿರುವ ರೂಮ್‍ಗಳ ನವೀಕರಣ ಮಾಡೇ ಇಲ್ಲ. ಒಳಾಂಗಣದಲ್ಲಿ ವೆಂಟಲೇಟರ್ಗಳು ಹಾಳಾಗಿವೆ. ಇದನ್ನು ಕೂಡ ಸರಿಪಡಿಸಬೇಕು. ಸುಮಾರು ವರ್ಷಗಳಿಂದ ಒಳಾಂಗಣಕ್ಕೆ ಬಣ್ಣ ಹಚ್ಚಿಲ್ಲ. ಕ್ರೀಡಾಪಟುಗಳಿಗೆ ಸ್ವಚ್ಛ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ ಅವರು, ಬೆಳಗಾವಿಯಲ್ಲಿ ಕ್ರೀಡಾ ಸಚಿವರ ಇಚ್ಛೆಯಂತೆ ಹವಾನಿಯಂತ್ರಿತ (ಎ.ಸಿ.) ಕ್ರೀಡಾಂಗಣ ಮಾಡಿದ್ದಾರೆ. ಈ ಭಾಗದ ಕ್ರೀಡಾಪಟುಗಳಿಗೆ ಮಾಡಿ ಕೊಟ್ಟರೆ ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಟೂರ್ನಾಮೆಂಟ್ ಆಯೋಜನೆ ಮಾಡಲು ಸಹಾಯವಾಗುತ್ತದೆ ಎಂದರು.
ಸುಮಾರು ತಿಂಗಳಿಗೆ 60,000ರೂ.ಗಳಿಂದ 70,000ರೂ.ಗಳವರೆಗೆ ಒಳಾಂಗಣ ಕ್ರೀಡಾಪಟುಗಳಿಂದ ಹಣ ಸಂಗ್ರಹಿಸಿ ರಿಜಿನಲ್ ಕಮಿಷನರ್ ಅಕೌಂಟಿಗೆ ಹಾಕಿಯೂ ಸೌಲಭ್ಯ ವಂಚಿತವಾಗಿರುವ ಚಂದ್ರಶೇಖರ್ ಪಾಟೀಲ್ ಒಳಾಂಗಣ ಸಮಸ್ಯೆಗಳನ್ನು ಪರಿಹಾರ ಮಾಡಬೇಕೆಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ದುಂಡೇಶ್ ಸುಬೇದಾರ್, ಸತೀಶ್ ಗೋಳ್, ಜಗನ್ನಾಥ್ ಪಟ್ಟಣಶೆಟ್ಟಿ, ಶರಣು ಭೂಸನೂರ್, ಉದಯ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.