ತೊಗರಿಕಾಂಡ ಮಚ್ಚೆ ರೋಗ: ರೈತರಿಗೆ ಸಲಹೆಗಳು
ಕಲಬುರಗಿ:ಆ.27:ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿರುವುದರಿಂದ ತೊಗರಿ ಬೆಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿರುವುದು ಕಂಡು ಬಂದಿದ್ದು, ಇದು ಮುಖ್ಯವಾಗಿ ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆಯಿಂದ ಈ ರೀತಿಯಾಗಿರುತ್ತದೆ. ಇದರ ನಿಯಂತ್ರಣಕ್ಕಾಗಿ ಕಲಬುರಗಿ ಮತ್ತು ಕಮಲಾಪೂರ ತಾಲೂಕಿನ ರೈತ ಬಾಂಧವರು ಕೆಳಕಂಡ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಕಮಲಾಪೂರ ಹಾಗೂ ಕಲಬುರಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.