ಜೂಜಾಟ: 10 ಜನರ ಬಂಧನ, 28 ಸಾವಿರ ರೂ.ಜಪ್ತಿ
ಕಲಬುರಗಿ,ಆ.27-ನಗರದ ಅಪಾರ್ಟ್‍ಮೆಂಟ್ ಒಂದರ ಹಿಂದುಗಡೆ ಮತ್ತು ಹೊನ್ನಕಿರಣಗಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಜೂಜಾಡುತ್ತಿದ್ದ 10 ಜನರನ್ನು ಪೊಲೀಸರು ಬಂಧಿಸಿ 28,160 ನಗದು, ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ನಗರದ ಅಪಾರ್ಟ್‍ಮೆಂಟ್ ಒಂದರ ಹಿಂದುಗಡೆ ಕುಳಿತು ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್-ಅರ್ಬನ್ ಉಪ ವಿಭಾಗದ ಎಸಿಪಿ ಡಿ.ಜಿ.ರಾಜಣ್ಣ ಮತ್ತು ಸಿಬ್ಬಂದಿಗಳಾದ ರಾಜಕುಮಾರ ಗಂಧೆ, ಸಂತೋಷ, ದತ್ತಾತ್ರೇಯ, ಬೀರಣ್ಣ, ಲಕ್ಷ್ಮೀಕಾಂತ ಅವರು ದಾಳಿ ನಡೆಸಿ ನವಿನ್ ಕುಲಕರ್ಣಿ, ಬಾಬಾ ಅಲಿಯಾಸ್ ಮಿರಾ ಮೈದಿ, ಪ್ರಶಾಂತ್ ಮಹೇಂದ್ರಕರ್, ಕಿರಣ್ ಒಂಟಿ ಮತ್ತು ಅವಿನಾಶ ಎಂಬುವವರನ್ನು ಬಂಧಿಸಿ 15,500 ರೂ.ನಗದು ಮತ್ತು ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿದರೆ, ಹೊನ್ನಕಿರಣಗಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಫರಹತಾಬಾದ ಪೊಲೀಸ್ ಠಾಣೆ ಪಿಎಸ್‍ಐ ಸುರೇಶ ಮಲಘಾಣ ಮತ್ತು ಸಿಬ್ಬಂದಿಗಳಾದ ವಿಜಯಕುಮಾರ, ಆನಂದ, ಕಲ್ಯಾಣಕುಮಾರ, ಪಾಂಡುರಂಗ ಅವರು ದಾಳಿ ನಡೆಸಿ ಯಶ್ವಂತ ಸರಡಗಿ, ರತನ್ ಉಕನಾಳ, ಶಿವಯೋಗಿ ಕಲ್ಲೂರ, ಶಾಮರಾಯ ಭಜಂತ್ರಿ, ಮಲ್ಲಿಕಾರ್ಜುನ ಮುಗಳನಾಗಾಂವ ಎಂಬುವವರನ್ನು ಬಂಧಿಸಿ 13,180 ರೂ.ನಗದು ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಮರೆಪ್ಪ ಬೊಮ್ಮನ್, ರಾಜು ಚಿಂಚೋಳಿ ಮತ್ತು ಶಂಕರ ಮರತೂರ ಎಂಬುವವರು ಪರಾರಿಯಾಗಿದ್ದಾರೆ. ವಿಶ್ವವಿದ್ಯಾಲಯ ಮತ್ತು ಫರಹತಾಬಾದ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.