ಭಗವಾನ ಶ್ರೀ ಕೃಷ್ಣ ವಿಷ್ಣುವಿನ 8 ನೇ ಅವತಾರ: ಹಾಸಿಂಪೀರ
ವಿಜಯಪುರ,ಆ.27: ಭಗವಾನ ಶ್ರೀ ಕೃಷ್ಣರು ವಿಷ್ಣುವಿನ ಎಂಟನೆಯ ಅವತಾರ. ಶ್ರೀ ಕೃಷ್ಣ ಜನ್ಮ ದಿನವನ್ನು ಗೋಕುಲಾಷ್ಠಮಿ ಎಂದು ಕರೆಯುತ್ತಾರೆ. ಮುರಲಿಧರ, ಕೇಶವ, ಗೋಪಾಲ, ಗೋವಿಂದ, ಮೋಹನ, ಮದನ, ಮುರಾರಿ,ಗೋಕುಲ, ಕನ್ಹಯ್ಯಾ, ಮುಕುಂದ, ವಾಸುದೇವ, ದಾಮೋದರ ನಂದಲೋಲ ಮಧುಸೂದನ, ರಾಧಾರಮಣ, ದ್ವಾರಕಾಧೀಶ, ಶ್ಯಾಮಸುಂದರ ,ದೇವಕಿನಂದ, ಯಶೋಧಾನಂದ ಮುಂತಾದ ಹೆಸರುಗಳಿಂದ ಕರೆಯುತ್ತಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು
ಸೋಮವಾರ ದರ್ಗಾ ಹತ್ತಿರ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಗವಾನ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀ ಕೃಷ್ಣ ಬಾಲ್ಯದಲ್ಲಿ ತುಂಬಾ ಹಠಮಾರಿ ಮತ್ತು ತಮಾμÉಯಿಂದ ಬೆಳೆದ. ಸ್ನೇಹಿತರೊಂದಿಗೆ ದನಗಳನ್ನು ಕಾಯುತ್ತಿದ್ದನು. ಮಹಾಭಾರತದಲ್ಲಿ ಶ್ರೀ ಕೃಷ್ಣ ಪಾತ್ರ ಮಹತ್ವದ್ದಾಗಿದೆ ಎಂದರು.
ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ರಾಜಯೋಗಿನಿ ಸರೋಜಾ ಅಕ್ಕನವರು ಮಾತನಾಡಿ, ಶ್ರೀ ಕೃಷ್ಣ ತಂದೆ ವಸುದೇವ ತಾಯಿ ದೇವಕಿಯ ಉದರದಲ್ಲಿ ಜನಿಸಿ ಯಶೋಧರೆ ಹಾಗೂ ನಂದ ರಾಜದಲ್ಲಿ ಶ್ರೀ ಬೆಳೆದನು. ಕೃಷ್ಣ ಪರಮಾತ್ಮರು ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದರು.
ದೇವಕಿಯ ಏಳು ಮಕ್ಕಳನ್ನು ಸಹೋದರ ಕಂಸ ಕೊಂದು ಹಾಕಿದ. ಪರಿಣಾಮ ಎಂಟನೆಯ ಮಗುವಾಗಿ ಶ್ರೀ ಕೃಷ್ಣ ಈ ಜಗತ್ತಿನ ಉಳಿವಿಗಾಗಿ ಹಾಗು ಕಂಸನ ಸಂಹಾರಕ್ಕಾಗಿ ಜನಿಸಿದನು. ಶ್ರೀ ಕೃಷ್ಣ ಅವತಾರ ಪುರಷರಾಗಿದ್ದು ಕೌರವರು ದ್ರೌಪದಿಯ ಸೀರೆ ಎಳೆಯುವಾಗ ಅಪತ್ಬಾಂಧವನಾಗಿ ರಕ್ಷಿಸಿದ ಉಲ್ಲೇಖವಿದೆ. ಇಂದಿನ ಸಮಾಜದಲ್ಲಿ ನ್ಯಾಯ ಸ್ಥಾಪಿಸಲು ಶ್ರೀ ಕೃಷ್ಣ ಅವತರಿಸಿದ್ದಾನೆಂದರು.
ಕಾರ್ಯಕ್ರಮದಲ್ಲಿ ಅನೇಕ ಬಾಲಕ ಬಾಲಕಿಯರು ಶ್ರೀ ಕೃಷ್ಣ ಪಾತ್ರ. ರಾಧೆಯ ಪಾತ್ರದಲ್ಲಿ ವೇಷಧಾರಿಗಳಾಗಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ನಗರ ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ ವಹಿಸಿದ್ದರು. ಅತಿಥಿ ಡಿ.ಎಸ್. ಪಾಟೀಲ ಮಾತನಾಡಿದರು.
ಬಿ.ಕೆ. ಗಂಗಾಧರ. ಬಿ.ಕೆ. ಕವಿತಾ, ಬಿ.ಕೆ. ಪ್ರಭು ತೆಲಗಿ, ಬಿ.ಕೆ. ಹಿರೇಮಠ, ಪದ್ಮಾ ವಾರದ, ಪ್ರತಿಭಾ ಮುಂಡಾಸ, ನಿರ್ಮಲಾ ದಿಂಡವಾರ, ಅರ್ಜುನ ಕವಟೆಕರ, ಎನ್.ಆರ್. ಮಠ, ರಾಜು ಅಂಗಡಿ, ಬಿ.ಕೆ. ಸುನಿತಾ ಮುಂತಾದವರು ಉಪಸ್ಥಿತರಿದ್ದರು.