ಅತ್ಯಾಚಾರ ಎಸಗಿದ್ದ ಅಲ್ತಾಫ್ ಮತ್ತು ಅವರ ಸ್ನೇಹಿತರನ್ನು ಗಲ್ಲಿಗೇರಿಸಿ ಜಿ.ಶಿವಶಂಕರ ಆಗ್ರಹ
ಕಲಬುರಗಿ:ಆ.27: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೌಡೂರ ಗ್ರಾಮ ಪಂಚಾಯತಿ ದುರ್ಗಾ ನಗರದ ಯುವತಿಯನ್ನು ರಂಗಂಪಲ್ಲಿ ನಿರ್ಜನ ಪ್ರದೇಶದಲ್ಲಿ ಕರೆದು ಅತ್ಯಾಚಾರ ಎಸಗಿದ್ದ ಅಲ್ತಾಫ್ ಮತ್ತು ಅವರ ಸ್ನೇಹಿತರನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಇಂತಹ ಕಾಮುಕರನ್ನು ಗುಂಡಿಟ್ಟು ಕೊಲ್ಲಬೇಕು ಕೊಲ್ಲುವ ಕೆಲಸ ಸರ್ಕಾರ ಮಾಡಬೇಕು ಅಲ್ತಾಫ್ ಎನ್ನುವ ವ್ಯಕ್ತಿ ಇನ್ಸ್ಟಾಗ್ರಾಮ್ ಮುಖಾಂತರ ಪರಿಚಯವಾಗಿ ಲವ್ ಜಿಹಾದ್ ಮಾಡಿ ತನ್ನ ಸ್ನೇಹಿತರ ಜೊತೆಗೂಡಿ ಸಾಮೂಹಿಕವಾಗಿ ಅತ್ಯಾಚಾರವನ್ನು ಮಾಡಿರುತ್ತಾರೆ ಈಗಿನ ಸರ್ಕಾರ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಬೇಕು.
ಇಂತಹ ಕಾಮುಕರನ್ನು ಗಲ್ಲಿಗೇರಿಸಬೇಕು ಉದಾಹರಣೆಗಾಗಿ ಹಿಂದೆ ತೆಲಂಗಾಣ ಪ್ರದೇಶದಲ್ಲಿ ಅತ್ಯಾಚಾರ ಮಾಡಿರುವ ಕಾಮುಕರನ್ನು ಅಲ್ಲಿನ ಸರ್ಕಾರ ಕಾಮುಕರನ್ನು ಗುಂಡಿಟ್ಟು ಕೋಲ್ಲಲಾಯಿತು ಅದೇ ರೀತಿ ನಮ್ಮ ಕರ್ನಾಟಕದಲ್ಲೂ ಆಗಬೇಕು ಅವಾಗ ಇಂಥ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣ ಸೇನೆ ಸಂಸ್ಥಾಪಕ ಅಧ್ಯಕ್ಷ ಜಿ.ಶಿವಶಂಕರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯದರ್ಶಿ ಶ್ರೀಕೃಷ್ಣ ಕುಶಲಕರ್ ಹಾಗೂ ನಾಗೇಶ ಕುಶಲಕರ್, ಸುರೇಶ್ ಕುಶಲಕರ್, ಅರ್ಜುನ್ ಬೇಲೂರ್ ಇದ್ದರು.