ಭಗವದ್ಗೀತಾ ಆಭಿಯಾನ ಪ್ರಶಿಕ್ಷಣ ವರ್ಗ
ವಿಜಯಪುರ,ಆ.27 : ಸೋಂದಾ ಸ್ವರ್ಣವಲ್ಲೀಯ ಪೂಜ್ಯಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿಗಳು ಹಮ್ಮಿಕೊಂಡಿರುವ ಭಗವದ್ಗೀತಾ ಅಭಿಯಾನದ ಪ್ರಶಿಕ್ಷಣ ವರ್ಗ ನಗರದ ಶ್ರೀ ಶಂಕರ ಮಠದಲ್ಲಿ ಜರುಗಿತು.
ಸೋಂದಾ ಸ್ವರ್ಣವಲ್ಲೀ ಸಂಸ್ಥಾನದಿಂದ ಮೂವರು ಸಹೋದರಿಯರು ಆಗಮಿಸಿ ಪ್ರಶಿಕ್ಷಣ ನೀಡಿದರು. ಅರುಣ ಸೋಲಾಪುರಕರ, ಅರುಣ ಶಹಾಪುರ, ಶ್ರೀಹರಿ ಗೊಳಸಂಗಿ, ಡಾ. ಜಯಶ್ರೀ ಮುಂಡೇವಾಡಿ, ಭುವನೇಶ್ವರಿ ಕೋರವಾರ ಭಾಗವಹಿಸಿದ್ದರು. ಶ್ರೀರಾಮ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಯುವ ನಾಯಕ ಉಮೇಶ ಕಾರಜೋಳ ಅವರು ನೀಡಿದ ಹತ್ತು ಸಾವಿರ ಭಗವದ್ಗೀತೆಗಳನ್ನು ಬಿಡುಗಡೆ ಮಾಡಲಾಯಿತು.
ಶಂಕರ ಮಠದ ಅಧ್ಯಕ್ಷ ಮಹೇಶ ದೇಶಪಾಂಡೆ, ಅಭಿಯಾನದ ಸಂಘಟನಾ ಕಾರ್ಯದರ್ಶಿ ಸಂಗನಗೌಡ ಪಾಟೀಲ ಉಪಸ್ಥಿತರಿದ್ದರು.