ಹಳ್ಳಿಖೇಡ(ಬಿ): ಹಿಬಾರೆ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ
ಹುಮನಾಬಾದ್:ಆ.27: ತಾಲ್ಲೂಕಿನ ಹಳ್ಳಿಖೇಡ (ಬಿ)ನ್ ಪ್ರತಿಷ್ಠಿತ ಆರ್.ಜಿ.ಹಿಬಾರೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಕೃಷ್ಣ ಜನ್ಮಾಷ್ಠಮಿ ಬಹಳ ವಿಶಿಷ್ಟವಾದ ರೀತಿಯಲ್ಲಿ ಆಚರಣೆ ಮಾಡಲಾಯಿತು.
ಭಗವಾನ್ ವಿಷ್ಣುವಿನ ಎಂಟನೇ ಅವತಾರವೆಂದು ಹೇಳಲಾಗುವ ಶ್ರೀ ಕೃಷ್ಣನ ಜನ್ಮದಿನವನ್ನು ಗೋಕುಲಾಷ್ಟಮಿ ಅಥವಾ ಕೃಷ್ಣ ಜನ್ಮಾಷ್ಠಮಿ ಎಂದು ಕರೆಯಲಾಗುತ್ತದೆ. ಕಿಲಾಡಿ ಕಿಟ್ಟಿ ಎಂದು ನಾವೆಲ್ಲರೂ ಸಾಮಾನ್ಯವಾಗಿ ಮಕ್ಕಳಿಗಾಗಿ ಬಳಸುವ ಪದವಾಗಿದೆ. ಹಾಗಂತಲೇ ಹಿಬಾರೆ ಶಾಲೆಯಲ್ಲಿ ಮಕ್ಕಳು ಶ್ರೀ ಕೃಷ್ಣ ಹಾಗೂ ರಾಧೆಯರ ಉಡುಗೆತೊಡುಗಗಳು ಧರಿಸಿ ಮುದ್ದಾಗಿ ಆಗಮಿಸಿದರು.
ಕೃಷ್ಣನ ತೊಟ್ಟಿಲು ಇಡುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ನಂತರ ಮಕ್ಕಳ ನೃತ್ಯಗಳು ಜರುಗಿದವು. ಮಕ್ಕಳ ಸುಂದರವಾದ ನರ್ತನ ನೋಡಿ ಪಾಲಕರು ಸಂತೋಷದಿಂದ ಕಣ್ತುಂಬಿಕೊಂಡರು. ಮಕ್ಕಳೆಲ್ಲರೂ ರಂಗುರಂಗಿನ ಧರಿಸುಗಳು, ಅವರ ನಡಿಗೆ ಹಾಗೂ ಅವರ ಹಾವಭಾವಗಳು ಸೌಂದರ್ಯಕ್ಕೆ ರಂಗು ತಂದವು. ಶ್ರೀ ಕೃಷ್ಣನು ಮೊಸರಿನ ಗಡಿಗೆ ಒಡೆಯುವ ರೀತಿಯ ದೃಶ್ಯ ಕೂಡ ಮಕ್ಕಳಿಂದ ಮಾಡಿಸಲಾಯಿತು.
ಈ ಶುಭ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರು, ಪುರಸಭೆ ಮಾಜಿ ಅಧ್ಯಕ್ಷ ನಾಗರಾಜ.ಬಿ. ಹಿಬಾರೆ ಹಾಗೂ ಉಪಾಧ್ಯಕ್ಷೆ ರುಚಿತಾ ನಾಗರಾಜ ಹಿಬಾರೆ, ಪ್ರಾಂಶುಪಾಲೆ ಕೆ. ಶಿಲ್ಪಾವತಿ, ಶಿಕ್ಷಕರಾದ ಬಸವರಾಜ ಚರಪಳ್ಳಿ, ಮಡೇಪ್ಪಾ ಕಪಲಾಪುರೆ, ರಾಜಕುಮಾರ ಜೋತಿ, ಸುನಿಲ್ ಮತ್ರೆ, ಸುಧಾಕರ್ ಅರಳಿ, ಸಾಗರ್ ಮೆತ್ರೆ, ರಾಜಶೇಖರ್ , ಶಿಕ್ಷಕಿಯರಾದ ಶಿವಮಂಗಲಾ, ಸಂಗೀತಾ, ಸ್ವಾತಿ ಸೇರಿಕರ್, ಇದ್ದರು.