ಸ್ವಂತ ಹಣದಲ್ಲಿ ಅನ್ನ ದಾಸೋಹ ಮಾಡಿದ ಹವಾ ಮಲ್ಲಿನಾಥ ಭಕ್ತ
ಚಿತ್ತಾಪುರ:ಆ.27:ತನ್ನ ಸ್ವಂತ ಹಣದಲ್ಲಿ ಸಾರ್ವಜನಿಕರಿಗೆ ಮ್ತತು ಭಕ್ತರಿಗೆ ಅನ್ನದಾಸೋಹ ಮಾಡಿ ರಾಜು ದೋರೆ ಎಂಬ ಯುವಕ ತನ್ನ ಭಕ್ತಿ ಮೆರೆದಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪಟ್ಟಣದ ಬಸ್ ನಿಲ್ದಾಣದ ಎದುರುಗಡೆ ನಡೆದಾಡುವ ದೇವರು ಹವಾ ಮಲ್ಲಿನಾಥ ಮಹಾರಾಜರ 57ನೇ ಹುಟ್ಟು ಹಬ್ಬದ ಅಂಗವಾಗಿ ಮಲ್ಲಿನಾಥ ಮಹಾರಾಜರ ಪರಮ ಭಕ್ತ ರಾಜು ದೋರೆ ಎಂಬ ಯುವಕ ತನ್ನ ಸ್ವಂತ ಹಣದಲ್ಲಿ ಸುಮಾರು ಎರಡು ಕ್ವಿಂಟಾಲ್ ಅನ್ನ ಮತ್ತು ಅರ್ಧ ಕ್ವಿಂಟಾಲ್ ಪಾಯಸ್ ಮಾಡಿ ಸಾರ್ವಜನಿಕರಿಗೆ,ಬಡವರಿಗೆ ,ಬರುವಂತಹ ಭಕ್ತಾದಿಗಳಿಗೆ ಅನ್ನದಾಸೋಹ ಎರ್ಪಡಿಸಿ ಹವಾ ಮಲ್ಲಿನಾಥ ಮಹಾರಾಜರ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ,ಆಕಾಶ್ ದೊರೆ,ನಾಗು ದೊರೆ,ಸುರಜ್ ಸಿಂಗ್ ರಜಪೂತ್,ಸಾಬಣ್ಣ ದೊರೆ ಇದ್ದರು.