ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ
ಕಲಬುರಗಿ:ಆ.27: ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ವಿವಿಧ ಮಹಿಳಾ ಭಜನಾ ಮಂಡಳಿಗಳಿಂದ ಭಜನೆ ಪುಟ್ಟ ಪುಟ್ಟ ಮಕ್ಕಳು ಶ್ರೀ ಕೃಷ್ಣ ಹಾಗೂ ರಾಧೇ ವೇಷದಲ್ಲಿ ನರ್ತನೆ ನೋಡುಗರ ಮನಸನ್ನು ಸೆಳೆಯಿತು.
ನಂತರ ಪಂ ಭಾರತೀಶಾಚಾರ್ಯ ಅವರಿಂದ ಶ್ರೀ ಕೃಷ್ಣನ ಮಹಿಮೆ ಪ್ರವಚನ, ರಾತ್ರಿ ಅಘ್ರ್ಯ ಪ್ರದಾನ ಪೂಜೆ ಕಾರ್ಯಕ್ರಮಗಳು ನೆರವೇರಿದವು, ಅರ್ಚಕ ಗುಂಡಾಚಾರ್ಯ ನರಿಬೊಳ, ಡಿ ವ್ಹಿ ಕುಲಕರ್ಣಿ, ಗೋಪಾಲರಾವ, ಶಾಮರಾವ ಕುಲಕರ್ಣಿ, ಗುರುರಾಜ, ಸುಧಾಕರ ದೇಶಪಾಂಡೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.