ಧರ್ಮದ ಮಾರ್ಗ ಅನುಸರಿಸಲು ಸಲಹೆ
ಭಾಲ್ಕಿ:ಆ.27:ಪ್ರತಿಯೊಬ್ಬರು ದೇವರ ಬಗ್ಗೆ ಭಯ, ಭಕ್ತಿ ಬೆಳೆಸಿಕೊಂಡು ಧರ್ಮದ ಮಾರ್ಗದಲ್ಲಿ ನಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಖಡಕೇಶ್ವರ ವಿದ್ಯಾ ಸಂಸ್ಥೆಯ ಕೋಶಾಧ್ಯಕ್ಷ ಪ್ರಭುರಾವ ಧೂಪೆ ಹೇಳಿದರು. ಪಟ್ಟಣದ ರಾಮ ಮಂದಿರದಲ್ಲಿ ವಿಶ್ವ ಹಿಂದು ಪರಿಷದ್ ಸಂಚಾಲಿತ ಖಡಕೇಶ್ವರ ವಿದ್ಯಾ ಮಂದಿರ ವತಿಯಿಂದ ಸೋಮವಾರ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಪಂಚ ಗೆದ್ದರೂ ಮನಸ್ಸಿಗೆ ನೆಮ್ಮದಿ, ಸುಖ ಸಂತೋಷ ಇಲ್ಲದ ಮೇಲೆ ಜೀವನಕ್ಕೆ ಅರ್ಥ ಬರುವುದಿಲ್ಲ. ನಿಜವಾದ ಸಂತೋಷ ಸುಖ ನೆಮ್ಮದಿ ಕಾಣಬೇಕಾದರೆ ಭಗವಂತನನ್ನು ಅರಿಯಬೇಕು. ಅವನಲ್ಲಿ ಶರಣಾಗಬೇಕು. ಶ್ರೀಕೃಷ್ಣನ ಸಂದೇಶ ಪಾಲನೆ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಅಶೋಕ ಲೋಖಂಡೆ, ಮುಖ್ಯಗುರು ಆನಂದ ಕಲ್ಯಾಣೆ, ಪ್ರಮುಖರಾದ ಅಂಬರೀಷ ಖಂಡ್ರೆ, ಅನಸೂಯ ರೆಡ್ಡಿ, ವಾಸುದೇವ ಶರ್ಮಾ, ನಾಗಶೆಟೆಪ್ಪ ಲಂಜವಾಡೆ ಸೇರಿದಂತೆ ಹಲವರು ಇದ್ದರು. ರೇಖಾ ಗಿರಿ ಸ್ವಾಗತ ಗೀತೆ ಹಾಡಿದರು. ರೇಕು ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಲ್ಪಾರಾಣಿ ಸ್ವಾಗತಿಸಿದರು. ಕಲ್ಪನಾ ನವಾಡೆ ನಿರೂಪಿಸಿದರು. ಗುರುಲಿಂಗಪ್ಪ ಬಿರಾದಾರ್ ವಂದಿಸಿದರು.