ಶಾಲೆಯ ಅಭಿವೃದ್ಧಿಗೆ ಪಾಲಕರ ಸಹಕಾರ ಅಗತ್ಯ
ಔರಾದ :ಆ.27: ಗ್ರಾಮೀಣ ಭಾಗದ ಶಾಲಾ ಕಾಲೇಜುಗಳು ಅಭಿವೃದ್ಧಿಯಾಗಬೇದಾರೆ ಪಾಲಕರ ಮತ್ತು ಶಾಲಾಭಿವೃದ್ಧಿ ಸಮಿತಿವರ ಸಹಕಾರ ಅಗತ್ಯ ಎಂದು ಮುಖ್ಯ ಮುಖ್ಯ ಗುರು ಉಮಾಕಾಂತ ಚೌಪಾಡೆ ಹೇಳಿದರು.
ತಾಲೂಕಿನ ಬೆಳಕುಣಿ (ಚೌ) ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಎಸ್ಡಿಎಂಸಿ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆಯಾದ ಸದಸ್ಯರಿಗೆ ಸನ್ಮಾನಿಸಿ ಮಾತನಾಡಿದ ಅವರು, ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ರಾಜ್ಯ ಸರ್ಕಾರ ಹಲವು ಯೋಜನೆಗಳು ಜಾರಿಗೊಳಿಸುತ್ತಿದೆ, ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕ್ಷೀರಭಾಗ್ಯ, ಪಠ್ಯ ಪುಸ್ತುಕ ಮತ್ತು ಸಮವಸ್ತ್ರ ಸೇರಿದಂತೆ ಹಲವು ಯೋಜನೆಗಳು ಜಾರಿ ಮಾಡಲಾಗಿದೆ. ಈ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಆದರಿಂದ ಪಾಲಕರು ತಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿಯೇ ದಾಖಲು ಮಾಡಿಯಂದು ಎಸ್‍ಡಿಎಂಸಿ ಪದಾಧಿಕಾರಿಗಳಿಗೆ ಹಾಗೂ ಪಾಲಕರಿಗೆ ಸಲಹೆ ನೀಡಿದರು.
ನೂತನ ಆಯ್ಕೆಗೊಂಡ ಪ್ರೌಢಶಾಲೆ ಎಸ್ಡಿಎಂಸಿ ಅಧ್ಯಕ್ಷ ಎಂ.ಡಿ ನಯುಮ್ ಅವರು ಮಾತನಾಡಿ, ಯಾವುದೆ ಶಿಕ್ಷಣ ಸಂಸ್ಥೆ ಮತ್ತು ಸಂಘ ಸಂಸ್ಥೆಗಳು ಸಂಘದ ಪದಾಧಿಕಾರಿಗಳ ಸಹಕಾರದಿಂದ ಅಭಿವೃದ್ಧಿವಾಗಲು ಸಾಧ್ಯ. ಇದರಿಂದಾಗಿ ಪಾಲಕರು ಮತ್ತು ಚುನಾಯಿತ ಪ್ರತಿನಿಧನಿಗಳು ಶಾಲೆ ಶಿಕ್ಷಕರಿಗೆ ಸಹಕಾರ ನೀಡಿ ಶಾಲಾ ಅಭಿವದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪ್ಪಾರಾವ, ಚಂದ್ರಕಾಂತ, ಉಷಾ, ಅನಿತಾ, ಧನರಾಜ್, ನಾಗನಾಥ ರೆಡ್ಡಿ, ಶಿವಾಜಿ, ಪಿಡಿಒ ಶ್ರೀಪತರಾವ, ನೈಮುದ್ದೀನ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.