ಔರಾದನಲ್ಲಿ ಮೂರು ದಿನ ನೀರು ಪೂರೈಕೆ ವ್ಯತ್ಯಯ
ಔರಾದ್ :ಆ.27: ಮೋಟಾರ್ ದುರಸ್ಥಿಗೆ ಬಂದಿರುವ ಕಾರಣ ಪಟ್ಟಣದಲ್ಲಿ ಅಗಸ್ಟ್ 27 ರಿಂದ 29ರವರೆಗೆ ನೀರು ಸರಬರಾಜು ಸ್ಥಗಿತವಾಗಲಿದೆ ಎಂದು ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಮೋಟಾರ್ ದುರಸ್ಥಿ ಸೇರಿದಂತೆ ತಾಂತ್ರಿಕ ಸಮಸ್ಯೆಯಿಂದ ಹಾಲಹಳ್ಳಿ ಬ್ಯಾರೇಜ್ ನಿಂದ ಔರಾದ್ ಪಟ್ಟಣಕ್ಕೆ ಇನ್ನೂ ಮೂರು ದಿನಗಳ ಕಾಲ ಕುಡಿಯುವ ನೀರು ಪೂರೈಕೆ ವ್ಯತ್ಯಯಗೊಳ್ಳಲಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.