ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿ : ಶಿವಕುಮಾರ ಸವದಿ
ಅಥಣಿ : ಆ.27:ಡಾ. ಪ್ರಭಾಕರ್ ಕೋರೆಯವರ 77ನೇ ವರ್ಷದ ಹುಟ್ಟು ಹಬ್ಬದ ನಿಮಿತ್ತವಾಗಿ ಎಸ್ ಎಸ್ ಎಮ್ ಎಸ್ ಕಾಲೇಜ್ ಅಲುಮಿನಿ ಅಸೋಸಿಯೇಶನ್ ಅಥಣಿ ಹಾಗೂ ಶ್ರೀ ಶಿವಯೋಗಿ ಸಂಶೇರ್ಸ್ ಕ್ಲಬ್ ಅಥಣಿ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು.
ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಯುವ ಉದ್ಯಮಿ ಶಿವಕುಮಾರ್ ಸವದಿ ಹಾಗೂ ಕೆಎಲ್ ಇ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಹಂಜಿ ಅವರು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು
ಈ ವೇಳೆ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಯುವ ಉದ್ಯಮಿ ಶಿವಕುಮಾರ ಸವದಿ ಮಾತನಾಡಿ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ದಿಯಾಗಲಿದ್ದು, ಪ್ರತಿಯೊಬ್ಬರೂ ಒಂದಲ್ಲ ಒಂದು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕು. ಈ ಅತ್ಯಾಧುನಿಕ ಯುಗದಲ್ಲಿ ಪ್ರತಿಯೊಬ್ಬರಿಗೂ ದಿನನಿತ್ಯದ ಕೆಲಸದ ಒತ್ತಡಗಳಲ್ಲಿ ವ್ಯಾಯಾಮಗಳನ್ನ ಮಾಡುವುದು ಕಷ್ಟದ ಕೆಲಸವಾಗಿದೆ ಎಂದ ಅವರು ಒಳಾಂಗಣ ಕ್ರೀಡಾಂಗಣದ ಹಲವು ಕ್ರೀಡೆಗಳನ್ನು ಆಡುವುದರಿಂದ ಯುವಕರಲ್ಲಿ ಹಾಗೂ ವಯಸ್ಕರಲ್ಲಿಯೂ ಕೂಡಾ ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯ ಹೆಚ್ಚಾಗಿ ಆರೋಗ್ಯವಂತ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದರು.
ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಆಗಮಿಸಿದ ತಂಡಗಳು ಒಳ್ಳೆಯ ಪ್ರದರ್ಶನವನ್ನು ನೀಡಿದರು.
ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ಎರಡು ವಿಭಾಗಗಳಲ್ಲಿ ವಿಂಗಡಿಸಲಾಗಿದ್ದು, ಅದರಲ್ಲಿ 45 ವರ್ಷ ವಯಸ್ಸಿನ ಮೇಲ್ಪಟ್ಟವರು ಹಾಗೂ 75 ವರ್ಷ ವಯಸ್ಸಿನ ಮೇಲ್ಪಟ್ಟ ಸ್ಪರ್ದಾಳುಗಳಿಗೆ ಪ್ರತ್ಯೇಕವಾಗಿ ಪಂದ್ಯಗಳನ್ನು ಆಯೋಜನೆ ಮಾಡಲಾಗಿತ್ತು, ವಿಜಯಿಶಾಲಿಯಾದ ತಂಡಗಳಿಗೆ ಕ್ರಮವಾಗಿ ತಲಾ ಪ್ರಥಮ ಬಹುಮಾನ 25 ಸಾವಿರ, ದ್ವೀತಿಯ ಬಹುಮಾನ 15 ಸಾವಿರ, ಹಾಗೂ ತೃತೀಯ ಬಹುಮಾನ 10 ಸಾವಿರ ರೂ.ಗಳ ಬಹುಮಾನವನ್ನು ನೀಡಲಾಯಿತು
45 ವರ್ಷ ವಿಭಾಗದಲ್ಲಿ ತುಮಕೂರಿನ ವರುಣ ರೆಡ್ಡಿ ಹಾಗೂ ನಿಖಿಲ್ ಪ್ರಥಮ ಸ್ಥಾನ ಗಳಿಸಿ 25000/- ರೂ ಗಳ ಬಹುಮಾನ ಪಡೆದರು. ಬೆಂಗಳೂರಿನ ಆಸೀಪ್ ಅವರ ತಂಡ ದ್ವಿತೀಯ ಸ್ಥಾನ ಪಡೆಯುವ ಮೂಲಕ
15000/- ರೂಗಳ ಬಹುಮಾನ ಪಡೆದರು.
ಅಥಣಿಯ ರಾಹುಲ್ ಹಾಗೂ ಅಬ್ದುಲ್ ಆಸಂಗಿ ಇವರು ತೃತೀಯ ಸ್ಥಾನ ಪಡೆಯುವ ಮೂಲಕ 10000/- ರೂಗಳ ಬಹುಮಾನ ಪಡೆದರು.
75 ವರ್ಷ ವಿಭಾಗದಲ್ಲಿ ಬೆಂಗಳೂರಿನ ಆಸೀಪ್ ಹಾಗೂ ಡಾ. ಶಶಿಕಾಂತ ಪ್ರಥಮ ಸ್ಥಾನ ಗಳಿಸಿ 25000/- ರೂಗಳ ಬಹುಮಾನ ಪಡೆದರು. ತುಮಕೂರಿನ
ವಿ. ರೆಡ್ಡಿ ಹಾಗೂ ಶೇಷರಾವ್ ದ್ವಿತೀಯ ಸ್ಥಾನ ಗಳಿಸಿ 15000/- ರೂಗಳ ಬಹುಮಾನ ಪಡೆದರು. ಅಥಣಿಯ ವಿವೇಕ್ ಹಾಗೂ ರವಿ ತೃತೀಯ ಸ್ಥಾನ ಗಳಿಸಿ 10000/- ರೂಗಳ ಬಹುಮಾನ ಪಡೆದುಕೊಂಡರು.
ಈ ವೇಳೆ ಶಿವಕುಮಾರ ಸವದಿ, ವಿಕಾಸ ರಾಠೋಡ್. ದತ್ತಾ ವಾಸ್ಟರ್, ಅಶೋಕ ಗುಡಿಮನಿ. ಸಂತೋಷ ಸಾವಡಕರ, ಶಂಭುಲಿಂಗ ಮಮದಾಪೂರ, ಪ್ರಕಾಶ ಪಾಟೀಲ. ವಿಶ್ವನಾಥ ತೆಲಸಂಗ, ಬಿಪೀನ್ ತೇಜವಾನಿ, ಸಿದ್ದು ಸಂಕ್ರಟ್ಟಿ, ರಾಜಶೇಖರ ಟೋಪಗಿ, ವಿಶಾಲ ಸಗರಿ, ಮಹೇಶ ಗುಂಡಾ, ರಾವಸಾಬ ಐಹೊಳೆ. ಹರೀಶ ವರಲ್ಯಾಣಿ, ಸಂತೋಷ ಶೆಟ್ಟಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯ ಸೇರಿದಂತೆ ಪಂದ್ಯಾವಳಿಯಲ್ಲಿ ರಾಜ್ಯದ 60ಕ್ಕೂ ಹೆಚ್ಚು ತಂಡಗಳು ಭಾಗಿಯಾಗಿದ್ದವು.