ವಚನದ ಸಾರವೇ ಆದರ್ಶ ಬದುಕಿನ ಸಾರ : ಅರವಿಂದ ಜತ್ತಿ
ಅಥಣಿ :ಆ.27: ವಚನಗಳು ಕನ್ನಡದ ನಿಜವಾದ ಅಸ್ಮಿತೆಗಳು. ವಚನದ ಸಾರವೇ ಆದರ್ಶ ಬದುಕಿನ ಸಾರವಾಗಿದೆ. ಅವುಗಳು ನಮ್ಮ ಬದುಕನ್ನು ಅರ್ಥಪೂರ್ಣವಾಗಿ ಕಟ್ಟಿಕೊಳ್ಳಲು ನೆರವಾಗುವ ಮಾರ್ಗಸೂಚಿಗಳು ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು.
ಅವರು ತಾಲೂಕಿನ ತೆಲಸಂಗ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ 1990-91ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ, ಸ್ನೇಹ ಸಮ್ಮೀಲನ, ಸಾಂಸ್ಕøತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು ಎಲ್ಲ ಗುರುವಿಗಿಂತ ಶ್ರೇಷ್ಠ ಗುರು ಒಬ್ಬನಿದ್ದಾನೆ. ಅದುವೇ ಅರಿವೇ ಗುರು. ಪ್ರತಿಯೊಬ್ಬರೂ ಅಂಗಭಾವದಿಂದ ಲಿಂಗಭಾವವಾಗಿ ಬಸವಣ್ಣನಾಗಬೇಕು. ಅದೆಷ್ಟೇ ಸ್ವಚ್ಛ ಭಾರತ ಮಾಡಿದರೂ ಅಂತರಂಗ ಶುದ್ಧವಾಗದ ಹೊರತು ಭಾರತ ಶುದ್ಧವಾಗಲು ಸಾಧ್ಯವಿಲ್ಲ. ಈ ಮಾತನ್ನು ಪ್ರಧಾನಿ ಮೋದಿಯವರಿಗೂ ಹೇಳಿದ್ಧೇನೆ. ವಚನ ಸಾಹಿತ್ಯದಲ್ಲಿ ಅಡಕವಾಗಿರುವ ಮೌಲ್ಯಗಳು ವ್ಯಕ್ತಿಗಳನ್ನು ಲೌಕಿಕ ಕಾಳಜಿಯಿಂದ ಶಾಶ್ವತ ಆನಂದದೆಡೆಗೆ ಬೆಳೆಸುವ ಸಾಮಥ್ರ್ಯವನ್ನು ಹೊಂದಿವೆ. ಜಗತ್ತಿನಲ್ಲಿ ಬಸವಣ್ಣನವರಿಗಿಂತ ಮತ್ತೊಬ್ಬ ವ್ಯಕ್ತಿತ್ವ ವಿಕಸನ ಹೊಂದಿದವರು ಮತ್ತೊಬ್ಬರಿಲ್ಲ. ಅವರಿಗೆ ಯಾರೂ ಮೇಲಿಲ್ಲ ಯಾರು ಕೀಳಿಲ್ಲ ಯಾರು ಸಣ್ಣವರಲ್ಲ, ಯಾರೂ ದಲಿತರಲ್ಲ. ಯಾರೂ ಹಿರಿಯರಲ್ಲ, ಕಿರಿಯರಿಲ್ಲ. ಎಲ್ಲರನ್ನೂ ಸಮಾನವಾಗಿ ಕಂಡ ವಿಶ್ವಗುರು. ಶಿಕ್ಷಕರು ನಿತ್ಯದ ಪಾಠವನ್ನು ಒಂದೇ ವಚನದಿಂದಲೇ ಆರಂಭವಾಗಲಿ. ಬಸವತತ್ವದ ಬಗ್ಗೆ ಪ್ರಾರ್ಥನೆ, ಭಾಷಣ ಮಾಡುತ್ತೇವೆಯೇ ಹೊರತು ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಬದುಕಿನಲ್ಲಿ ಅಳವಡಿಸಿಕೊಳ್ಳುವುದಿಲ್ಲ. ಅರಿವು ಜಾಗೃತವಾದರೆ ಮಾತ್ರ ಶರಣ ಸ್ಥಲ ಜಾಗೃತವಾಗಲು ಸಾಧ್ಯ. ಎಲ್ಲಿಯವರೆಗೆ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಶರಣನಾಗಲು ಸಾಧ್ಯವಿಲ್ಲ ಎಂದರು.
ಶಿರಹಟ್ಟಿಯ ಜಗದ್ಗುರು ಫಕೀರ ಸಿದ್ಧರಾಮ ಶ್ರೀಗಳು ಮಾತನಾಡಿ, ಗುರುವಿಗೆ ವಂದನೇ ಸಲ್ಲಿಸುವವರೂ ಇವತ್ತಿಗೂ ನೋಡ ಸಿಗುತ್ತೀರುವುದು ನಮಗೆ ಬಹಳಷ್ಟು ಸಂತೋಷ ತಂದಿದೆ. ಇವತ್ತಿನ ದಿನಮಾನಗಳಲ್ಲಿ ಸಂಸ್ಕೃತಿ ಸಂಸ್ಕಾರ ಉಳದಿಲ್ಲ. ಮನೆಯೇ ಮೊದಲ ಪಾಠಶಾಲೆ ತಾಯಿಯೇಮೊದಲು ಗುರು. ಅಂದು ಲಿಂಗೈಕ್ಯ ಬಸವಲಿಂಗ ಶ್ರೀಗಳು ಅಕ್ಷರದಾಸೋಹ ನಡಸದೇ ಇದ್ದಿದ್ದರೆ ಇಂದು ಈ ಬಾಗದಲ್ಲಿ ಅಕ್ಷರ ಕ್ರಾಂತಿ ಆಗುತ್ತಿರಲಿಲ್ಲ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಭವಿಷ್ಯ ರೂಪಿಸಿದ ಶಿಕ್ಷಕನನ್ನು ನೆನೆದು ಗೌರವಿಸುವದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ. ನಿವೃತ್ತಿ ಹೊಂದಿದರೂ ನೆನೆಯುವಂತಹ ನಿಮ್ಮನ್ನು ಮರೆಯದಂತಹ ಉತ್ತಮ ಶಿಕ್ಷಕರ ಪರಂಪರೆ ಮುಂದುವರೆಯಲಿ ಎಂದು ಹಾರೈಸಿದರು.
ತೆಲಸಂಗ ಹಿರೇಮಠದ ವೀರೇಶ್ವರ ದೇವರು, ನ್ಯಾಯವಾದಿ ಬಿ.ಎಲ್.ಪಾಟೀಲ, ಶಿಕ್ಷಕ ಬಿ.ಎನ್.ಅವಟಿ ಮಾತನಾಡಿದರು. ನಿವೃತ್ತ ಶಿಕ್ಷಕರು, ಹಳೆ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.