ಮನುಷ್ಯನ ಅಜ್ಞಾನ ಕಳೆಯಲು ಗುರುಬೋದಾಮೃತ ಅವಶ್ಯಕ:ದ್ವಿತಿಯ ಸಾಂಭ ಶಿವಾಚಾರ್ಯರು
ಕಲಬುರಗಿ:ಆ.27:ಜಗತ್ತಿನ ಕತ್ತಲೆ ಕಳೆಯಲು ಸೂರ್ಯಬೇಕು, ಮನುಷ್ಯನ ಅಜ್ಞಾನ ಕಳೆಯಲು ಗುರುಬೋದಾಮೃತ ಅವಶ್ಯಕಬೇಕು ಎಂದು ವಿ.ಕೆ. ಸಲಗರದ ದ್ವಿತಿಯ ಸಾಂಬಶಿವಾಚಾರ್ಯರು ನುಡಿದರು
ಕಲಬುರಗಿ ನಗರದ ಸಮಿಪದಲ್ಲಿರುವ ಕೇಸರಿ ಬೆಟ್ಟದಲ್ಲಿ ನಾಲ್ಕನೇ ಶ್ರಾವಣ ಮಾಸದ ಭಹಿರಂಗ ಇಷ್ಠಲಿಂಗ ಮಹಾಪೂಜೆ ನೆರವೇರಿಸಿ ಆಶೀರ್ವಚನದಲ್ಲಿ ಮನುಷ್ಯನ ಜೀವನದಲ್ಲಿ ಧನಕನಕ, ವಸ್ತುವಡವೇ ಸ್ಥಾನಮಾನ ಏನೆಲ್ಲವೂಗಳನ್ನು ಗಳಿಸಬಹುದು ಆದರೇ ಅದರೊಂದಿಗೆ e್ಞÁನ ಸಂಪತ್ತನ್ನು ಸಂಪಾದಿಸಬೇಕು. ಸಂಕುಚಿನ ಮನೋಭಾವ ಹೊಂದಿ ಅನೇಕ ಸಂಕಷ್ಟಗಳಿಗೆ
ಕಾರಣವಾಗುತ್ತಿದ್ದಾರೆ, ಸಂಸ್ಕಾರ, ಸಂಸ್ಕøತಿಯ ಅರಿವು ಇಲ್ಲದಿರುವುದೇ ಅನೇಕ ದುರಂತಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಅದ್ದರಿಂದ ಗುರುಕೊಟ್ಟ ಇಷ್ಠಲಿಂಗವನ್ನು ನಿಷ್ಠೆಯಿಂದ ಪೂಜೆ ಮಾಡಿದರೆ ಇಷ್ಠಾರ್ಥಗಳನ್ನು ಪಡೆದುಕೊಳ್ಳಬಹುದೆಂದು ಶ್ರೀಗಳು ನುಡಿದರು. ಲಿಂಗರಾಜಪ್ಪಅಪ್ಪಅವರಿಗೆ ಧರ್ಮರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀಮತಿ ಈರಮ್ಮ ಗುರುಸ್ವಾಮಿ, ಶ್ರೀಮತಿ ರೇಣುಕಾ ಸಿದ್ದಮಲ್ಲ, ಶಂಬುಲಿಂಗ ಧನಶಟ್ಟಿ, ಶ್ರೀಮತಿ ಅನುಪಮಾ ಅಣವೀರಯ್ಯಸ್ವಾಮಿ, ಬಸವರಾಜ ಬೆಣ್ಣೇಶೀರೂರ, ರಾಚಯ್ಯಸ್ವಾಮಿ, ಓಂಕಾರ ಬಾಳಿ, ಪರಮೇಶ್ವರ ಹಳಿಜೋಳ, ಜಿಲ್ಲಾ ಸಾಂಭಸೇನೆಯ ಅಧ್ಯಕ್ಷರಾದ ಶರಣಗೌಡ ಪಾಟೀಲ ನಿಂಬರ್ಗಿ, ಶರಣಬಸಪ್ಪ ಹೂಗಾರ, ಶಿವಲಿಂಗಪ್ಪ ಆಲಗೂಡಕರ್ ಇದ್ದರು. ಕುಮಾರಿ ಶಿವಮ್ಮ ಬಿ.ಹಚ್. ನಿರೂಪಿಸಿದರು.