ಸಾಹಿತ್ಯವಿಲ್ಲದ ಧಾರಾವಾಹಿಯಿಂದ ಕಲಹಗಳು ಉದ್ಭವ: ಸುಜಾತಾ
ತಾಳಿಕೋಟೆ :ಅ.2: ದಾರವಾಹಿಗಳು ಸಂಸಾರ ಕಟ್ಟುತ್ತಿಲ್ಲಾ ಅದರಂದಿ ಮನೆಯಲ್ಲಿ ಕಲಹಗಳು ಉದ್ಭವವಾಗುತ್ತಾ ಸಾಗಿವೆ ಅದರಲ್ಲಿ ಯಾವುದೇ ಸಾಹಿತ್ಯ ಅಳವಡಿಸಿಲ್ಲಾ ಕೇವಲ ಆಕರ್ಷಿತವಾದ ದಾರವಾಹಿಗಳು ಜೀವನವನ್ನು ಹಾಳುಮಾಡುತ್ತವೆ ಎಂದು ಎಸ್.ಕೆ.ಪಧವಿ ಮಹಾ ವಿದ್ಯಾಲಯದ ಕನ್ನಡ ಪ್ರಾದ್ಯಾಪಕಿ ಶ್ರೀಮತಿ ಸುಜಾತಾ ಚಲವಾದಿ ಅವರು ಹೇಳಿದರು.
ಮಂಗಳವಾರರಂದು ಪಟ್ಟಣದ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ತಾಳಿಕೋಟೆ ನೇತೃತ್ವದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ-50 ರ ಅಂಗವಾಗಿ ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ನಡೆದ ತಾಳಿಕೋಟೆ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಮಹಿಳಾ ಘೋಷ್ಠಿಯನ್ನು ದೀಪ ಬೆಳಗಿಸುವದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಮಹಿಳೆ ಎಂದಾಗ ಯಾವುದೇ ಜಾತಿಯನ್ನು ಅಡ್ಡ ತರುವದು ಬೇಡಾ ಮಹಿಳೆ ಎಂದಾಗ ಒಂದೇ ಎಂಬ ಭಾವನೆ ಬರಲಿ ಆಧುನಿಕ ಭರಾಟೆಯಲ್ಲಿ ಪುರುಷನಷ್ಟೇ ಮಹಿಳೆಯು ಸಮಾನಾಗಿ ಹೆಜ್ಜೆ ಹಾಕುವಂತಹ ಕಾರ್ಯವಾಗಬೇಕಿದೆ ಎಂದ ಅವರು ಈ ದೇಶದಲ್ಲಿ ಮಹಿಳಾ ಸ್ವಾತಂತ್ರ್ಯಕ್ಕೆ ಸಮಾನತೆಗೆ ಮುನ್ನುಡಿ ಬರೆದವರು ಬಸವಣ್ಣನವರು ಆದರೆ ಅದನ್ನು ಸಂವಿದಾನದ ಕಾನೂನಿನ ಮೂಲಕ ಕಾರ್ಯರೂಪಕ್ಕೆ ತಂದವರು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಆಗಿದ್ದಾರೆ ಅವರ ಕೊಡುಗೆಯಿಂದ ಮಹಿಳೆಗೂ ಸಮಾನತೆ ಸಿಕ್ಕಿದೆ ಇಂತಹ ಅದ್ಭುತ್ ವೇದಿಕೆಯಲ್ಲಿ ಪುರುಷಪ್ರಧಾನವಾದ ಸಂದರ್ಬದಲ್ಲಿ ಮಹಿಳೆಯು ಸಮಾನಳಾಗಿ ಭಾಗವಹಿಸಲು ಅನುಕೂಲವಾಗಿದೆ ಎಂದರು.
ಇನ್ನೋರ್ವ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತಕರಾದ ಶ್ರೀಮತಿ ಸವಿತಾ ಇನಾಮದಾರ ಅವರು ಬದಲಾಗುತ್ತಿರುವ ಸ್ಥಿರನಂಬಿಕೆಗಳು ಮತ್ತು ಮಹಿಳಾ ಸಬಲಿಕರಣದ ಆಯಾಮಗಳು ಎಂಬ ವಿಷಯದ ಮೇಲೆ ಮಾತನಾಡಿ ಮಹಿಳೆ ಮನೆ ಕೆಲಸಕ್ಕೆ ಸೀಮಿತವಾದ ಮಹಿಳೆ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಹಂತ ಹಂತವಾಗಿ ಬೆಳೆದು ಬಾಹ್ಯಾಕಾಶದಲ್ಲಿಯೂ ಕೆಲಸ ಮಾಡುವಂತಹ ಸಮರ್ಥನೆ ಅವಳಲ್ಲಿ ಬಂದಿದೆ ಶಿಕ್ಷಣವೆಂಬುದು ಆತ್ಮವಿಸ್ವಾಸವನ್ನು ನಮಗೆ ಗೊತ್ತಿಲ್ಲದ ಹಾಗೆ ಕೊಡುತ್ತಾ ಬರುತ್ತದೆ ಇದರಿಂದ ಮಹಿಳೆ ಹಂತ ಹಂತವಾಗಿ ಬೆಳೆಯುತ್ತಾ ಹೋಗುತ್ತಾಳೆ ಕೆಲವೇ ಉದ್ಯೋಗಗಳಿಗೆ ಸೀಮಿತವಾದ ಹೆಣ್ಣು ಮಗಳು ಈಗ ಹೊಸ ಹೊಸ ಉದ್ಯೋಗಗಳನ್ನು ಸೃಷ್ಠಿಸಬಲ್ಲ ಸಾಮಥ್ರ್ಯವನ್ನು ಹೊಂದಿದ್ದಾಳೆಂದರು. ಮಹಿಳೆಯು ಸಮರ್ಥವಾಗಿ ಬೆಳೆಯಲು ಹೊಸದಾಗಿ ಬಂದ ಕಾನೂನುಗಳು ಆಕೆಯ ಕೆಲಸಕ್ಕೆ ಪುಷ್ಠಿ ನೀಡಿದವು ಎಂದರೆ ತಪ್ಪಾಗವುದಿಲ್ಲಾ ಕೆಲವು ಕಡೆಗಳಲ್ಲಿ ಇನ್ನೂ ವರದಕ್ಷೀಣಿ ಪಿಡುಗು ಕಾಣುತ್ತೇವೆ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಗೆ ಸ್ವತಂತ್ರ್ಯವಾಗಿ ಕೆಲಸ ನಿರ್ವಹಿಸಲು ಇನ್ನೂ ಕಷ್ಠವಿದೆ ಇಂತಹ ಕಷ್ಟದ ಸಂದರ್ಬದಲ್ಲಿ ಶಿಕ್ಷಣವೆಂಬುದು ಮಹಿಳೆಗೆ ಆಸರೆಯಾಗಿದ್ದು ಈ ನಡೆಯಡಿ ಎಲ್ಲ ಮಹಿಳೆಯರು ಸಾಗೋಣವೆಂದರು.
ಇನ್ನೋರ್ವ ವಿಜಯಪುರದ ಸಾಹಿತಿ ಶ್ರೀಮತಿ ಶಿಲ್ಪಾ ಭೀಸ್ಮೆ ಅವರು ಸಾಹಿತ್ಯದಲ್ಲಿ ಮಹಿಳಾ ಪರ ಚಿಂತನೆಗಳು ಎಂಬ ವಿಷಯದ ಮೇಲೆ ಮಾತನಾಡಿ 12ನೇ ಶತಮಾನದಲ್ಲಿದ್ದ ಅಕ್ಕಮಹಾದೇವಿ ಅವರು ಕನ್ನಡ ಸಾಹಿತ್ಯ ಅಪ್ರತಿಮ ಕೊಡುಗೆಯನ್ನು ನೀಡಿದ್ದಾರೆ ಶಿಕ್ಷಣವೆಂಬುದು ಸರ್ವಸ್ವ ಸಾದನಂ ಎಂಬುದಾಗಿದೆ ಸಾಹಿತ್ಯದಲ್ಲಿ ಮಹಿಳೆಯ ಚಿಂತನೆ ದೊಡ್ಡದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿ.ಬಿ.ಇಂಗಳಗಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಎಸ್.ಆರ್.ಮೋಮೀನ ಅವರು ಹಾಗೂ ಈಶ್ವರಿ ವಿಶ್ವವಿದ್ಯಾಲಯದ ಬಿ.ಕೆ.ಸುವರ್ಣಾ ಮಾತನಾಡಿದರು.
ಕಾರ್ಯಕ್ರಮದ ಸಾನಿದ್ಯವನ್ನು ಬಳಗಾನೂರಿನ ಪೂಜ್ಯಶ್ರೀ ಮಂಜುಳಾತಾಯಿ ಅಮ್ಮನವರು ವಹಿಸಿದ್ದರು.
ವೇದಿಕೆಯ ಮೇಲೆ ಶ್ರೀ ಹೆಮ್ಮರಡ್ಡಿ ಮಲ್ಲಮ್ಮತಾಯಿ, ಶ್ರೀಮತಿ ಶಿಲ್ಪಾ ಭಿಸ್ಮೇ, ಕಸಾಪ ಮಾಜಿ ಅಧ್ಯಕ್ಷೆ ಶ್ರೀಮತಿ ಶಾಂತಾಬಾಯಿ ನೂಲಿಕರ, ಶ್ರೀಮತಿ ಅಕ್ಕಮಹಾದೇವಿ ಕಟ್ಟಿಮನಿ, ಶ್ರೀಮತಿ ನೀಲಮ್ಮ ಪಾಟೀಲ, ಶ್ರೀಮತಿ ಎಸ್.ಬಿ.ಹೂಗಾರ, ಡಾ.ಗಂಗಾಂಬಿಕಾ ಪಾಟೀಲ, ಕದಳಿ ವೇದಿಕೆ ಅಧ್ಯಕ್ಷೆ ಶ್ರೀಮತಿ ಉಮಾ ಘೀವಾರಿ, ಶ್ರೀಮತಿ ರೇಣುಕಾ ಕಲ್ಬುರ್ಗಿ ಮೊದಲಾದವರು ಉಪಸ್ಥಿತರಿದ್ದರು.