ಎಸ್ಸಿ ಎಸ್ಟಿ ಕಾಲೋನಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗ್ರಹಿಸಿ ಮನವಿ
ಅಥಣಿ :ಅ.2: ತಾಲೂಕಿನ ಗ್ರಾಮೀಣ ಭಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಓಣಿಗಳಲ್ಲಿ ಮೂಲಭೂತ ಸೌಕರ್ಯವನ್ನು ಕಲ್ಪಿಸುವುದು ಹಾಗೂ ಓಣಿಯಲ್ಲಿರುವ ಸಮುದಾಯ ಭವನಗಳನ್ನ ನವೀಕರಣ ಹಾಗೂ ವಿದ್ಯುತ್ ದೀಪಗಳು ಸೇರಿದಂತೆ ಇನ್ನಿತರ ಸೌಲಭ್ಯಗಳ ಕಲ್ಪಿಸಿ ಕೊಡಬೇಕೆಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ್ ಅವರಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಥಣಿ ತಾಲೂಕಾ ಸಂಘಟನೆಯ ವತಿಯಿಂದ ಮನವಿ ಸಲ್ಲಿಸಲಾಯಿತು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರದಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರ ಸಮ್ಮುಖದಲ್ಲಿ ಮನವಿ ಸಲ್ಲಿಸಲಾಯಿತು.
ನಂತರ ತಾಲೂಕಾ ಅಧ್ಯಕ್ಷ ರವಿ ಕಾಂಬಳೆ ಅವರು ಮಾತನಾಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಓಣಿಗಳಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದ ಕಾರಣ ಅಲ್ಲಿನ ಜನರು ತೊಂದರೆ ಅನುಭವಿಸಬೇಕಾಗಿದೆ ಮುಖ್ಯವಾಗಿ ಶುದ್ಧ ಕುಡಿಯುವ ನೀರು. ರಸ್ತೆಗಳು. ವಿದ್ಯುತ್ ದೀಪಗಳು . ಕೆಲವೊಂದು ಗ್ರಾಮಗಳಲ್ಲಿ ಅಂಬೇಡ್ಕರ್ ಭವನಗಳು ಶಿಥಿಲಾವಸ್ಥೆಯಲ್ಲಿವೆ ಅವುಗಳನ್ನು ಮರು ರಿಪೇರಿ ಅಥವಾ ಹೊಸ ಕಟ್ಟಡಗಳ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ ಜಿಲ್ಲಾ ಸಂಘಟನೆ ಸಂಚಾಲಕ ಸಂಜಯ ತಳವಳಕರ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಮೂಲಭೂತ ಸೌಕರ್ಯಗಳು ಇಲ್ಲದಿರುವುದು ಬೇಜಾರಿನ ಸಂಗತಿ ಎಂದರು ಅಲ್ಲಿನ ಓಣಿಯ ತಗ್ಗು ಗುಂಡಿಗಳು ಬಿದ್ದು ಮಳೆ ನೀರು ನಿಂತು ರಸ್ತೆಗಳು ಹಾಳಾಗಿದೆ ರಸ್ತೆಗಳ ಸುಧಾರಣೆ ಗಟಾರುಗಳ ನಿರ್ಮಾಣ ಮಾಡುವುದು ಮತ್ತು ಗರಸು ಹಾಕುವುದು ವಿದ್ಯುತ್ ದೀಪಗಳನ್ನು ಅಳವಡಿಸುವುದು ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕೆಂದು ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ಮನವಿ ಮಾಡಿದರು.
ನಂತರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ ಮನವಿ ಸ್ವೀಕರಿಸಿ ಮಾತನಾಡಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳನ್ನು ಗಮನಿಸಿ ಮೂಲಭೂತ ಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ ತಾಲೂಕಾ ಸಂಚಾಲಕ ರವಿ ಕಾಂಬಳೆ ಚಿಕ್ಕೋಡಿ ವಿಭಾಗೀಯ ಸಂಚಾಲಕ ಶ್ರೀಕಾಂತ ಆಲಗೂರ್, ಜಿಲ್ಹಾ ಸಂಘಟನೆ ಸಂಚಾಲಕ ಕುಮಾರ ಬನಸೋಡೆ, ಮಚ್ಚೆಂದ್ರ ಖಾoಡೇಕರ್, ಅಶೋಕ ಚೌಗಲಾ, ಚೇತನಾ ಕನ್ನಾಳ, ದಶರಥ ಕಾಂಬಳೆ, ಪಾಂಡು ಕಾಂಬಳೆ, ಮಹಾಂತೇಶ ಬನಸೋಡೆ, ದತ್ತು ಕಾಂಬಳೆ, ಅಶೋಕ ನಿಡೋಣಿ, ಪಂಡಿತ ಕಾಂಬಳೆ, ಸದಾಶಿವ ಬನಸೋಡೆ, ರವಿ ಕುರಣೆ, ಬಾಲಕೃಷ್ಣ ಭಜಂತ್ರಿ. ಅಶೋಕ ಗೇರಡೆ, ಧನಪಾಲ ಕಾಂಬಳೆ, ಕಿರಣ ವಾಯದಂಡೆ, ರಾಜು ಕಾಂಬಳೆ, ಗೊರಖನಾಥ ಭಂಡಾರೆ, ಲಕ್ಕಪ್ಪ ಕಾಂಬಳೆ, ಮಾಯಪ್ಪ ದೊಡಮನಿ, ನಾಗರಾಜ ಕಾಂಬಳೆ ( ಯಲ್ಲಿಹಡಲಗಿ ) ಅಶೋಕ ಕಾಂಬಳೆ ಇದ್ದರು.