ಕವಲಗಿ ಸಂಗನಬಸವ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧಿ, ಶಾಸ್ತ್ರಿ ಜಯಂತಿ ಆಚರಣೆ
ವಿಜಯಪುರ,ಅ.2:ಶ್ರೀ ಸಿದ್ಧೇಶ್ವರ ಸಂಸ್ಥೆಯ, ಕವಲಗಿ ಸಂಗನಬಸವ ಪದವಿ ಪೂರ್ವ ಕಾಲೇಜಿನಲ್ಲಿ ಶ್ರದ್ಧಾ ಪೂರ್ವಕವಾಗಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ ಬಹದ್ದೂರ ಶಾಸ್ತ್ರಿಯವರ ಜಯಂತಿಯನ್ನು ಆಚರಿಸಲಾಯಿತು.
‘ರಘುಪತಿರಾಘವರಾಜಾರಾಂ’ ಭಜನೆಯೊಂದಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸರ್ವಧರ್ಮಗಳ ಪವಿತ್ರ ಗ್ರಂಥಗಳಿಗೆ ಗೌರವ ಸಲ್ಲಿಸಲಾಯಿತು. ಮಹಾತ್ಮಾ ಗಾಂಧೀಜಿಯವರ ಕುರಿತು ವಿದ್ಯಾರ್ಥಿಗಳಾದ ಉಜ್ವಲ್ ಬಂಡಿ ಮಾತನಾಡಿದರೆ, ಲಕ್ಷ್ಮೀ ಕನಮುಚನಾಳ ಲಾಲ್ ಬಹದ್ದೂರ್ ಶಾಸ್ತ್ರಿಯವರ ಬಗ್ಗೆ ಭಾಷಣ ಮಾಡಿದರು.
ಕಾಲೇಜಿನ ಪ್ರಾಚಾರ್ಯ ಪೆÇ್ರ. ಹೇಮಂತ್‍ಕೃಷ್ಣ ಅವರು ಕಾರ್ಯಕ್ರಮವನ್ನು ನಿರೂಪಿಸುತ್ತಾ ಮಹಾತ್ಮಾ ಗಾಂಧೀಜಿ ಹಾಗೂ ಶಾಸ್ತ್ರಿಯವರ ಮೌಲ್ಯಗಳು ಸಾರ್ವತ್ರಿಕ ಸತ್ಯ. ಅವುಗಳಲ್ಲಿ ಕೆಲವನ್ನಾದರೂ ನಮ್ಮ ಜೀವನ ಪಯರ್ಂತ ಅಳವಡಿಸಿ ಅನುಕರಿಸುವುದು ಇಂದಿನ ದಿನಗಳಲ್ಲಿ ಅತ್ಯಂತ ಅವಶ್ಯಕ ಎಂದರು. ಹಣ ಮತು ್ತಅಧಿಕಾರ ಮುಖ್ಯವಲ್ಲ, ಮಾನವೀಯ ಮೌಲ್ಯಗಳು ಪ್ರಮುಖ ಎಂದು ತಿಳಿಸಿದರು.
ಗಾಂಧೀಜಿಗೆ ಪ್ರಿಯವಾದ “ವೈಷ್ಣವೋಜನತೋ” ಹಾಗೂ “ಇಕ್‍ತು ಹೀ ಭರೋಸಾ” ಗೀತೆಗಳನ್ನು ವಿದ್ಯಾರ್ಥಿನಿ ಕುಮಾರಿ ಕಮಲಾಕ್ಷಿ ಹಜೇರಿ ಹಾಗೂ ಸಂಗಡಿಗರು ಪ್ರಸ್ತುತಪಡಿಸಿದರು. ಈ ಸಭೆಗೆ ಕಾಲೇಜಿನ ಎಲ್ಲಾ ಸಿಬ್ಬಂದಿ ಹಾಜರಿದ್ದರು.
ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ (ಯತ್ನಾಳ), ಚೇರ್‍ಮನ್ ನೋಮಿನಿ ಬಸಯ್ಯ ಹಿರೇಮಠ, ಎಲ್ಲಾ ನಿರ್ದೇಶಕರು ಹಾಗೂ ಪದಾಧಿಕಾರಿಗಳು ಶುಭ ಹಾರೈಸಿದರು.