ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ
ವಿಜಯಪುರ,ಅ.2: ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ನಗರದ ಎಕ್ಸಾ ಟೀಕಾ ಕಾಲೋನಿ ಮತ್ತು ಸಾಯಿ ರೆಸಿಡೆನ್ಸಿಯ ಹಿರಿಯರು, ಸಹೋದರಿಯರು ಮತ್ತು ಮಕ್ಕಳು ಶ್ರದ್ಧಾ,ಭಕ್ತಿಯಿಂದ ಆಚರಿಸಿದರು.
ರೈತ ಸಂಘ ಅಧ್ಯಕ್ಷ ಹಾಗೂ ಶ್ರೀ ಗಜಾನನೋತ್ಸವ ಸೇವಾ ಸಮಿತಿಯಅಧ್ಯಕ್ಷ ವಿಜಯ ಪೂಜಾರ, ಸಿದ್ದು ಇಜೇರಿ, ಡಿ. ಎಂ.ಮೂಲಿಮಣಿ, ಮಲ್ಲಪ್ಪ ಬಿರಾದಾರ, ಪಂಡಿತರಾವ ಪಾಟೀಲ, ಲಕ್ಷ್ಮಿ ಚಿಮ್ಮಲಗಿ, ದೇವಿಕಾ ನಾಯಕ, ಗೌರಬಾಯಿ ಕುಬಕಡ್ಡಿ, ಶೋಭಾ ಕಸನಕ್ಕಿ ಅನೇಕರು ಉಪಸ್ಥಿತರಿದ್ದರು.