ಸರಕಾರಿ ಪ್ರೌಢ ಶಾಲೆಯಲ್ಲಿ ಗಾಂಧೀಜಿ ಶಾಸ್ತ್ರಿಯವರ ಜಯಂತಿ ಆಚರಣೆ
ಸೇಡಂ, ಅ,02: ತಾಲ್ಲೂಕಿನ ಮದನಾ ಗ್ರಾಮದಲ್ಲಿರುವ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಅವರ ಭಾವಚಿತ್ರ ಗಳಿಗೆ ಪೂಜೆ ಪುಷ್ಪಾ ನಮನ ಸಲ್ಲಿಸಿ ಸರಳವಾಗಿ ಆಚರಿಸಿಕೊಂಡರು. ಈ ವೇಳೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಬಾಬು ಶ್ರೀನಿವಾಸ ರೆಡ್ಡಿ ಮದನಾ, ಭೀಮಣ್ಣ, ಪುಲ್ ಸಿಂಗ್ ವೆಂಕಟ್ ರಾವ್, ಮೈ ಪಾಲ್ ಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಇದ್ದರು.