ಗಾಂಧಿಜೀ ಶಾಸ್ತ್ರಿಯವರ ತತ್ವ ಸಿದ್ಧಾಂತಗಳು ಪ್ರತಿಯೊಬ್ಬರೂ ಅಳವಡಿಸಿಕೊಳಬೇಕಿದೆ :ಸಚಿವ ಡಾ.ಶರಣಪ್ರಕಾಶ್ ಪಾಟೀಲ್
ಸೇಡಂ,ಅ,02: ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ರವರ ತತ್ವ ಸಿದ್ಧಾಂತ ಸತ್ಯ, ಅಂಹಿಸೆ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಊಡಗಿ ಅವರು ಬಸ್ಟ್ಯಾಂಡ್ ಹತ್ತಿರ ಇರುವ ಚೌರಸ್ತದಲ್ಲಿ ಹೇಳಿದರು.
ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನದಿಂದ ಗಾಂಧಿ ನಡಿಗೆ ಮತ್ತು ಗಾಂಧಿ ಭಾರತ ಎಂಬ ವಿಶೇಷ ಸಮಾವೇಶದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ರವರು ಮಹಾತ್ಮ ಗಾಂಧಿಜೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತೋತ್ಸವ ಅಂಗವಾಗಿ ಭಾವ ಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. (ಗಾಂಧಿ ಅಧ್ಯಕ್ಷತೆಯ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ಅಂಗವಾಗಿ ಮಹಾತ್ಮ ಗಾಂಧಿಜೀ ಅಧ್ಯಕ್ಷತೆಯ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಬೆಳಗಾವಿ ಅಧಿವೇಶನದ ಶತಮಾನೋತ್ಸವದ ಸಂಭ್ರಮ (1924-2024)) ಈ ವೇಳೆಯಲ್ಲಿ ತೋಟಗಾರಿಕೆ ಮಹಾಮಂಡಳಿ ಮಾಜಿ ಅಧ್ಯಕ್ಷರಾದ ಬಸವರಾಜ್ ಪಾಟೀಲ್ ಊಡಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗೇಶರಾವ್ ಮಾಲಿ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಶರಣ ರೆಡ್ಡಿ ಪಾಟೀಲ್ ರವಿಂದ್ರ ನಂದಿಗಾಮ್, ಧಝಧಧಲಸಂ ಇಲ್ಲ ಝಝಝಝತೋಷ ಕುಲಕರ್ಣಿ, ವಿಶ್ವನಾಥ್ ಬೊಮ್ಮನಳ್ಳಿ, ಬಸವರಾಜ್ ರೇವಗೊಂಡ್ ರಾಜಶೇಖರ ಪುರಾಣಿಕ, ಅಬ್ದುಲ್ ಗಫೂರ್, ಸತೀಶ್ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಭೀಮಾಶಂಕರ ಕೊಳ್ಳಿ, ಜಗನ್ನಾಥ ಚಿಂತಪಳ್ಳಿ, ಮಾರುತಿ ಕೋಡಂಗಲಕರ್, ಮೈನೋದಿನ, ಪ್ರಕಾಶ್ ರಾಠೋಡ, ಸುಂದರ ಮಂಗಾ, ರುದ್ರಪ್ಪ ಪಿಲ್ಲಿ, ರಮೇಶ್ ಹಡಪದ್, ಶಾಬೋದ್ಧಿನ ಸಂಗಾವಿ, ಈರಣ್ಣ ರೆಮಣಿ, ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಯುವಕರು ಇದ್ದರು.