ಶ್ರೀ ಮಡಿವಾಳೇಶ್ವರ ಶಿಶು ಮಂದಿರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ
ಬೀದರ: ಆ.27:ನಗರದ ಮಂಗಲಪೇಟದಲ್ಲಿರುವ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಶ್ರೀ ಮಡಿವಾಳೇಶ್ವರ ಶಿಶು ಮಂದಿರ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಅತಿ ವಿಜೃಂಬಣೆಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಔರಾದ್ ಸರ್ಕಾರಿ ಪ. ಪೂ. ಕಾಲೇಜಿನ ಪ್ರಾಂಶುಪಾಲರದ ಓಂ ಪ್ರಕಾಶ್‍ದಡ್ಡೆ ಅವರು ಶ್ರೀ ಕೃಷ್ಣನ ಬಾಲಲೀಲೆ ಹಾಗೂ ಸಾಹಸ ನಿರ್ದೇಶನಗಳ ಮೂಲಕ ಶ್ರೀ ಕೃಷ್ಣನ ವರ್ಣನೆಯನ್ನು ಮಕ್ಕಳಿಗೆ ತಿಳಿಸಿದರು.
ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯ ಸ್ಥಾನವನ್ನು ಆಡಳಿತ ಮಂಡಳಿಯ ಸದಸ್ಯರಾದ ಶಿವರಾಜ ಹಲಶೆಟ್ಟಿ ಅವರು ಮಾತನಾಡಿ ಶ್ರೀ ಕೃಷ್ಣನು ರಾಕ್ಷಸರನ್ನು ಸಂಹಾರ ಮಾಡಿ ಜನರನ್ನು ಕಾಪಾಡಿದನು. ಎಲ್ಲಾ ಶಾಲೆಗಳಲ್ಲಿ ಕೃಷ್ಣತ್ವ ಅಭಿವ್ಯಕ್ತವಾಗಬೇಕು ಹಾಗೂ ಸಾಂಸ್ಕøತಿಕ ಪ್ರತೀಕವಾದ ಎಲ್ಲಾ ವಿಷಯಗಳನ್ನು ಮಕ್ಕಳಿಗೆ ತಿಳಿಸಬೇಕು ಎಂದು ಹೇಳಿದ್ದರು.
ಶ್ರೀಮತಿ ಪ್ರತಿಭಾ ತೇಲಿ ಸ್ವಾಗತಿಸಿದರು, ಕುಮಾರಿ ಭಾಗ್ಯಶ್ರೀ 10ನೇ ತರಗತಿ ವೈಯಕ್ತಿಕ ಗೀತೆ ಹಾಡಿದರು. ಶ್ರೀಮತಿ ಸುವರ್ಣ ಹೊಸಮನಿ ವಂದಿಸಿದರು. ಶ್ರೀಮತಿ ಚೆನ್ನಮ್ಮ ಪಂಚಾಳ ನಿರೂಪಿಸಿದರು.
ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಅರ್ಚನಾ ಸಿರಿಗೆರೆ ಮತ್ತು ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶ್ರೀಯುತ ಶಿವಶರಣಪ್ಪ ಪಾಟೀಲ ಮತ್ತು ಶಿಕ್ಷಕರ ಬಳಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 185 ಶ್ರೀ ಕೃಷ್ಣನ ವೇಷಧಾರಿ ಮಕ್ಕಳು ಮತ್ತು ಪಾಲಕ ಬಂಧು ಮಿತ್ರರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.