ಶ್ರೀ ಕೃಷ್ಣನ ಧರ್ಮ ಸಂದೇಶಗಳು ಸರ್ವಕಾಲಿಕವಾದವು
ಧಾರವಾಡ,ಆ27: ಕೃಷ್ಣನು ಮಹಾಭಾರತ ಯುದ್ಧದಲ್ಲಿ ಧರ್ಮದ ಹಾದಿಯಲ್ಲಿ ನಡೆಯುವ ಪಾಂಡವರ ಪರವಾಗಿ ನಿಂತು ಉತ್ತಮ ಸಂದೇಶಗಳನ್ನು ನೀಡಿದ್ದಾನೆ. ಅಂತಹ ಧರ್ಮ ಸಂದೇಶಗಳು ಸರ್ವಕಾಲಿಕವಾದವುಗಳಾಗಿದ್ದು, ಇಂದಿನ ಸಮಾಜ ಅನುಸರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಅವರು ಹೇಳಿದರು.
ಅವರು ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕ್ರತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾದ ಭಗವಾನ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ನಾವು ಹಿಂದಿನ ಕಾಲದ ಪದ್ಧತಿಗಳನ್ನು ಈಗಿನ ದಿನಮಾನಗಳಲ್ಲಿಯೂ ಸಹ ಪಾಲನೆ ಮಾಡುತ್ತಿದ್ದೇವೆ. ಸತ್ಯ ಹಾಗೂ ಧರ್ಮವನ್ನು ಅನುಸರಿಸುವ ಪಾಂಡವ ಅರ್ಜುನನ ಸಾರಥಿಯಾಗಿ ಧರ್ಮ ರಕ್ಷಣೆಯ ಪಾತ್ರವನ್ನು ಶ್ರೀ ಕೃಷ್ಣ ವಹಿಸಿದ್ದರು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು
ಇಂದಿನ ಸಮಯವನ್ನು ಕಳೆದುಕೊಂಡರೆ ಮುಂದಿನ ದಿನಮಾನಗಳಲ್ಲಿ ಅದು ಲಭಿಸುವುದಿಲ್ಲ. ಸಮಯಕ್ಕೆ ಅನುಸಾರವಾಗಿ ನಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾ ಸತ್ಯದ ಹಾಗೂ ಧರ್ಮದ ಹಾದಿಯಲ್ಲಿ ನಡೆಯಬೇಕು ಎಂದು ಅವರು ತಿಳಿಸಿದರು.
ನಿವೃತ್ತ ಶಿಕ್ಷಕ ಎಚ್.ಪರಮೇಶ್ವರಪ್ಪ ಅವರು ವಿಶೇಷ ಉಪನ್ಯಾಸವನ್ನು ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿರು.
ಯಾದವ ಸಮಾಜದ ಮುಖಂಡರಾದ ಮಹಾದೇವ ದಂಡಿನ, ಕಾಕಾ ರಂಗಸ್ವಾಮಿ, ಗುರುನಾಥ ಹುಲಗೂರ, ನೇತ್ರಾವತಿ ಗೊಲ್ಲರ, ಸಂತೋಷ ಹಂಚಾಟೆ ಹಾಗೂ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಯಂತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.