ಜಾತ್ರಾ ಮಹೋತ್ಸವ
ಲಕ್ಷ್ಮೇಶ್ವರ,ಆ. 27:ತಾಲೂಕಿನ ಗೋನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಲಗಂಜಿ ಕೊಪ್ಪ ಗ್ರಾಮದ ದುಂಡಿ ಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದ ದಿನದಂದು ಶ್ರೀ ದುಂಡಿ ಬಸವೇಶ್ವರ ಜಾತ್ರಾ ಮಹೋತ್ಸವ ಜರುಗಿತು.
ಶ್ರೀ ದುಂಡಿ ಬಸವೇಶ್ವರ ದೇವಸ್ಥಾನದಲ್ಲಿ ಬೆಳಗಿನ ಜಾವ ದಿಂದಲೇ ಮೃತ್ಯುಂಜಯ ಹೋಮ ಗಣ ಹೋಮ ಉಮಾಮಹೇಶ್ವರ ಪೂಜಾ ನವಗ್ರಹ ಹೋಮ ಶ್ರೀ ದುರ್ಗಾ ಹೋಮ ಜಯಾದಿ ಹೋಮ ಮಹಾ ರುದ್ರ ಅಭಿಷೇಕ ಬಿಲ್ವಾರ್ಚನೆ ಪೂರ್ಣಾಹುತಿ ನಂತರ ಧರ್ಮಸಭೆ ಜರುಗಿತು.
ಧರ್ಮಸಬೆಯಲ್ಲಿ ಮಾಜಿ ಸಂಸದ ಮಂಜುನಾಥ ಕುನ್ನೂರ್ ಮಾತನಾಡಿ ವ್ಯರ್ಥವಾಗಿ ಹರಿಯುತ್ತಿರುವ ಬೇಡ್ತಿ ನದಿ ಮತ್ತು ವರದಾ ನದಿಯನ್ನು ಜೋಡಿಸುವ ಕೆಲಸ ಸರಕಾರದಿಂದ ಆಗಬೇಕಾಗಿದೆ ಇದರಿಂದಾಗಿ ನೀರಾವರಿ ಸೌಲಭ್ಯ ಸಾಧ್ಯವಿದೆ ಈ ನಿಟ್ಟಿನಲ್ಲಿ ಕಾಡು ಸಿದ್ದೇಶ್ವರ ಮಠದ ಶ್ರೀಗಳು ಜಲ ಸಂಪನ್ಮೂಲ ಸಚಿವರಿಗೆ ಸೂಚನೆ ನೀಡಿದರೆ ಸಾಧ್ಯ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಶ್ರೀಗಳು ಆಶೀರ್ವಚನ ನೀಡಿ ದುಂಡಿ ಬಸವೇಶ್ವರ ದೇವಸ್ಥಾನ ಒಂದು ಜಾಗೃತ ಸ್ಥಳವಾಗಿದ್ದು ಭಕ್ತರು ಇಷ್ಟಾರ್ಥವನ್ನು ಈಡೇರಿಸುವ ತಾಣವಾಗಿದೆ ಈ ದೇವಸ್ಥಾನದ ಬೆಳವಣಿಗೆಗೆ ಮತ್ತು ಇಲ್ಲಿ ರಥ ನಿರ್ಮಾಣವಾಗಲು ಭಕ್ತರು ಮುಕ್ತ ಮನಸ್ಸಿನಿಂದ ಸಹಾಯ ಸಹಕಾರ ನೀಡಬೇಕು ಎಂದು ಹೇಳಿದರು.
ಉಪಸ್ಥಿತರಿದ್ದ ಶಾಸಕ ಡಾಕ್ಟರ್ ಚಂದ್ರು ಲಮಾಣಿ ಅವರು ಮುಕ್ತಿ ಮಂದಿರ ಮತ್ತು ಗುಲಗಂಜಿಕೊಪ್ಪ ಎರಡು ಜಾಗೃತ ಸ್ಥಳಗಳಾಗಿದ್ದು ಒಂದು ಕಡೆ ಮುಕ್ತಿಮಂದಿರದಲ್ಲಿ ತಿಕೋಟಿಲಿಂಗ ಸ್ಥಾಪನಾ ಕಾರ್ಯ ಸಾಗಿದ್ದು ಇದು ಜಿಲ್ಲೆಗೆ ಭಾಗ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮುಕ್ತಿಮಂದಿರದ ವಿಮಲ ರೇಣುಕ ವೀರ ಮುಕ್ತಿಮನಿ ಶಿವಾಚಾರ್ಯರು ಹೂವಿನ ಶಿಗ್ಲಿ ವಿರಕ್ತಮಠದ ಶ್ರೀ ಗಳು ಕರೆವಾಡಿ ಮಠದ ಶ್ರೀಗಳು ಗಂಜಿಗಟ್ಟಿ ಶ್ರೀಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದುಂಡಿ ಬಸ್ವೇಶ್ವರ ದೇವಸ್ಥಾನದ ಅಧ್ಯಕ್ಷರು ಆದ ಬಸವರಾಜ ಕೊಟಗಿ ಅಧ್ಯಕ್ಷತೆ ವಹಿಸಿದ್ದರು ಕಾರ್ಯಕ್ರಮದಲ್ಲಿ ಗೋನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ರಾಮಗಿರಿ ಪದ್ಮರಾಜ್ ಗೌಡ ಪಾಟೀಲ ಸುಧಾ ಜಿ ಮಾದರ ನಿಂಗನ ಗೌಡ್ರು ಹೊಸಗೌಡ್ರ ಬಸವರಾಜ್ ಬೆಂಡಿಗೇರಿ ನೀಲಪ್ಪ ಗೌಡ್ರು ದುರ್ಗನಗೌಡ್ರು ದುಂಡಪ್ಪ ರಾಯಣ್ಣವರ ಸೋಮಣ್ಣ ಬೆಟಿಗೇರಿ ಶಿವಪ್ಪ ಕಟಗಿ ಡಾ. ಶಿವರುದ್ರ ಗೌಡ ಡಾಕ್ಟರ್ ಉಮೇಶ ಹಳ್ಳಿಕೇರಿ ಮತ್ತು ಧರ್ಮದರ್ಶಿಗಳು ಇದ್ದರು.