ರಾಧಾಕೃಷ್ಣ ಕೋಲಾಟ ಸಂಘದಿAದ ಶ್ರೀ ಕೃಷ್ಣ ಜನ್ಮಾಷ್ಟಮಿ
ಬೀದರಃಆ.೨೭: ನಗರದ ಗುಮ್ಮೆ ಕಾಲೋನಿಯಲ್ಲಿ ಸೋಮವಾರ ರಾಧಾಕೃಷ್ಣ ಮಹಿಳಾ ಕೋಲಾಟ ಸಂಘದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಜರುಗಿತು. ಬೆಳಿಗ್ಗೆ ಸಂಘದ ಪದಾಧಿಕಾರಿಗಳು ಶ್ರೀ ಕೃಷ್ಣನ ತೊಟ್ಟಿಲು ಕಾರ್ಯಕ್ರಮವನ್ನು ಅತ್ಯಂತ ಭಕ್ತಿಭಾವದಿಂದ ಜಾನಪದ ಗೀತೆಗಳನ್ನು ಹಾಡುವ ಮೂಲಕ ಆಚರಿಸಿದರು.
ಶ್ರೀ ಕೃಷ್ಣ ದೇವರನ್ನು ಭಕ್ತಿಭಾವದಿಂದ ನೆನೆದರೆ ಎಲ್ಲಾ ಕಷ್ಟಗಳು ದೂರಾಗುವವು. ಕೃಷ್ಣನ ಲೀಲೆ ಅಪಾರವಾಗಿದ್ದು, ಭಗ್ವದ್ಗೀತೆಯನ್ನು ಪ್ರತಿಯೊಬ್ಬರು ಪಠಣ ಮಾಡುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ರಾಧಾಕೃಷ್ಣ ಕೋಲಾಟ ಸಂಘದ ಅಧ್ಯಕ್ಷೆ ಶ್ರೀಮತಿ ಗೀತಾ ಪಾಟೀಲ್ ಹೇಳಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ಯವಾಗಿ ಕೃಷ್ಣನಿಗೆ ಪ್ರೀಯವಾದ ಕೋಲಾಟವನ್ನು ಸಂಘದ ಸದಸ್ಯರು ಉತ್ತಮವಾಗಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷೆ ಮಹಾದೇವಿ ಬಿರಾದಾರ, ಉಪಾಧ್ಯಕ್ಷೆ ಮಲ್ಲಮ್ಮಾ ಬಿರಾದಾರ, ಪ್ರಧಾನ ಕಾರ್ಯದರ್ಶಿ ಭಾರತಿ ಬಿರಾದಾರ, ಖಜಾಂಚಿ ಸಂಗೀತಾ ಪಾಟೀಲ್, ಸಹ ಕಾರ್ಯದರ್ಶಿ ಕಲ್ಪನಾ ಅಬ್ಯಂದಿ, ಸದಸ್ಯರುಗಳಾದ ಉಮಾದೇವಿ, ರೇಣುಕಾ, ರೂಪಾ ಪಾಟೀಲ್, ರೇಖಾ ವಗದಾಳೆ, ಕವಿತಾ ಸ್ವಾಮಿ, ಸುನಿತಾ, ಜೈಶ್ರೀ, ಸಂಗೀತಾ ದಾನಿ, ಮಲ್ಲಮ್ಮ, ನೀಲಮ್ಮ, ಕಲಾವತಿ, ಸೀಮಾವತಿ, ಶೋಭಾ, ವಿದ್ಯಾವತಿ, ವಿಜಯಲಕ್ಷಿö್ಮÃ ಉಪಸ್ಥಿತರಿದ್ದರು.