ಯುವಕರಿಂದ ಕಾಂಗ್ರೆಸ್ ಬೆಳವಣಿಗೆ ಸಾಧ್ಯ
ಕೆಆರ್ ಪುರ,ಆ.೨೭- ಬಲಿಷ್ಠ ಯುವ ಕಾಂಗ್ರೆಸ್ ಸಂಘಟನೆಯಿಂದ ಮಾತ್ರ ಕಾಂಗ್ರೆಸ್ ಪಕ್ಷದ ಸಮಗ್ರ ಬೆಳವಣಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ಅವರು ತಿಳಿಸಿದರು.
ಕೆಆರ್ ಪುರ ಕ್ಷೇತ್ರದ ಉದಯನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನದೀಂ ಅಕ್ರಂ ಅವರು ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಕಾಂಗ್ರೆಸ್ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿ ಬಲಿಷ್ಠ ಪಕ್ಷ ನಿರ್ಮಾಣಕ್ಕೆ ಪಣತೊಡಬೇಕೆಂದು ಸಲಹೆ ನೀಡಿದರು.
ಉದಯನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿರುವ ನದೀಂ ಅಕ್ರಂ ಅವರು ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ ಅವರ ಬಳಿ ಬೆಂಬಲ ಕೋರಿದ ನದೀಂ ಅಕ್ರಂ ಜಯಗಳಿಸುವಂತೆ ಶುಭಾಶಯ ತಿಳಿಸಿದರು.
ಈ ಸಂಧರ್ಭದಲ್ಲಿ ಬೆಂಗಳೂರು ಪೂರ್ವ ಜಿಲ್ಲಾ ಯುವ ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಮಹರೂಫ್, ಸಮಾಜ ಸೇವಕರಾದ ವಸೀಂಪಾಷ, ಮುಖಂಡರಾದ ಮಹಬೂಬ್, ಚಾಂದ್ ಪಾಷ, ರಘು, ಸುನ್ನ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.