ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.27: ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ ತಾಲೂಕು ನಾಡಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಭಗವಾನ್ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಯಿತು.
ಭಗವಾನ್ ಶ್ರೀ ಕೃಷ್ಣನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದ ಉಪ ತಹಸೀಲ್ದಾರ್ ಲೋಕೇಶ್ ಕೃಷ್ಣ ಜನ್ಮಾಷ್ಠಮಿಯ ಶುಭ ಕೋರಿದರು. ಶ್ರೀ ಕೃಷ್ಣ ಧರ್ಮ ಸಂಸ್ಥಾಪನೆಗಾಗಿ ಭೂಮಿಗೆ ಅವತರಿಸಿದ ಅವತಾರ ಪುರುಷ. ಶ್ರೀ ಕೃಷ್ಣ ಸತ್ಯ, ಧರ್ಮ ಮತ್ತು ನ್ಯಾಯದ ಸಂಕೇತ. ಶ್ರೀ ಕೃಷ್ಣನನ್ನು ನಾವು ದೇವರೆಂದು ಪೂಜಿಸುವುದು ಎಷ್ಟು ಮುಖ್ಯವೂ ಅವನ ಲೀಲೆಗಳಲ್ಲಿ ಅಡಗಿರುವ ಸಂದೆಶಗಳನ್ನೂ ಅರಿಯುವ ಪ್ರಯತ್ನ ಮಾಡಬೇಕು. ಶ್ರೀ ಕೃಷ್ಣನ ಜೀವನ ಸಂದೇಶಗಳನ್ನು ನಮ್ಮದಾಗಿಸಿಕೊಂಡು ನಮ್ಮ ಜೀವನವನ್ನು ಪರಿಪೂರ್ಣಗೊಳಿಸುವತ್ತ ನಾವು ಸಾಗಬೇಕು. ಭಗವಂತ ಧರ್ಮದ ಪಕ್ಷಪಾತಿ. ಧರ್ಮ ಮಾರ್ಗದಲ್ಲಿ ಸಾಗಿದವರಿಗೆ ಮಾತ್ರ ಭಗವಂತನ ಕೃಪೆ ಇರುತ್ತದೆ. ಭಗವಾನ್ ಶ್ರೀ ಕೃಷ್ಣನ ಜೀವನ ಸಂದೇಶವೇ ನಮ್ಮ ಬದುಕಿನ ಮಾರ್ಗವಾಗಬೇಕೆಂದು ಉಪ ತಹಸೀಲ್ದಾರ್ ಲೋಕೇಶ್ ಆಶಿಸಿದರು.
ಶಿರಸ್ತೆದಾರ್ ರವಿ, ಸಿ.ಡಿ.ಪಿ.ಓ ಅರುಣಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಭಾಗವಹಿಸಿದ್ದರು.