ನಗರಸಭೆ ಪೌರಾಯುಕ್ತರಿಂದ ಪೌರಕಾರ್ಮಿಕರಕುಂದುಕೊರತೆ,ಸಮಸ್ಯೆಆಲಿಕೆ:ಆರೋಗ್ಯತಪಾಸಣೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.27- ಜಿಲ್ಲಾಡಳಿತ, ಜಿಲ್ಲಾ ನಗರಭಿವೃದ್ಧಿ ಕೋಶ ಹಾಗೂ ನಗರಸಭೆ ಸಹಯೋಗದಲ್ಲಿನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿಂದುಆಯೋಜಿಸಲಾಗಿದ್ದ ಪೌರಕಾರ್ಮಿಕರಕುಂದುಕೊರತೆ, ಸಂವಾದಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತಎಸ್.ವಿ. ರಾಮದಾಸ್‍ಅವರು ಪೌರಕಾರ್ಮಿಕರ ಸಮಸ್ಯೆ, ಅಹವಾಲುಗಳನ್ನು ಆಲಿಸಿದರು.
ಆರಂಭದಲ್ಲಿಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದನಗರಸಭೆಆಯುಕ್ತಎಸ್.ವಿ. ರಾಮದಾಸ್‍ಅವರುಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ನಿರ್ದೇಶನದ ಮೇರೆಗೆನಗರಸಭೆ ವ್ಯಾಪ್ತಿಯ ಪೌರಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಿ ಪುನರ್ವಸತಿಕಲ್ಪಿಸುವ ನಿಟ್ಟಿನಲ್ಲಿಕುಂದುಕೊರತೆ ಹಾಗೂ ಸಂವಾದಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪೌರಕಾರ್ಮಿಕರು ತಮ್ಮಕುಂದುಕೊರತೆ ಪರಿಹರಿಸಿಕೊಳ್ಳಲು ಇದುಉತ್ತಮ ವೇದಿಕೆಯಾಗಿದೆಎಂದರು.
ನಗರ ಸ್ವಚ್ಚತಾಕಾರ್ಯದಲ್ಲಿಬೆಳಿಗ್ಗೆಯಿಂದ ಸಂಜೆಯವರೆಗೂ ತೊಡಗಿಸಿಕೊಳ್ಳುವ ಪೌರಕಾರ್ಮಿಕರು ಶ್ರಮಜೀವಿಗಳಾಗಿದ್ದಾರೆ.ನಗರದ ಸ್ವಚ್ಚತೆಗಾಗಿ ಪೌರಕಾರ್ಮಿಕರಿಗೆಸಾರ್ವಜನಿಕರ ಸಹಕಾರವುಅಗತ್ಯವಾಗಿದೆ. ಪೌರಕಾರ್ಮಿಕರು ದಿನನಿತ್ಯದ ಕಾಯಕದಜೊತೆಗೆತಮ್ಮ ವೈಯಕ್ತಿಕಆರೋಗ್ಯದಬಗ್ಗೆಕಾಳಜಿ ವಹಿಸಬೇಕು.ಸಂವಾದ ಕಾರ್ಯಕ್ರಮದ ಭಾಗವಾಗಿಆರೋಗ್ಯತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಪೌರಕಾರ್ಮಿಕರುಶಿಬಿರದ ಸದುಪಯೋಗ ಪಡೆಯಬೇಕುಎಂದುರಾಮದಾಸ್‍ಅವರು ತಿಳಿಸಿದರು.
ಪೌರಕಾರ್ಮಿಕನಾಗರಾಜು ಮಾತನಾಡಿನಗರಸಭೆವತಿಯಿಂದಖಾಯಂ, ನೇರವೇತನ, ಗುತ್ತಿಗೆ ಪೌರಕಾರ್ಮಿಕರಿಗೆ ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ನೀಡಬೇಕು. ಸಂಕಷ್ಟ ಭತ್ಯೆಯನ್ನು ವೇತನದಜೊತೆಗೆಪ್ರತಿ ತಿಂಗಳು ಪಾವತಿಸಬೇಕು. ನಗರಸಭೆಯಲ್ಲಿ 120 ಪೌರಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಸಮಾನ ಕೆಲಸಕ್ಕೆ ಸಮಾನ ವೇತನದಡಿಪೌರಕಾರ್ಮಿಕರನ್ನುಖಾಯಂ ಸಕ್ರಮಗೊಳಿಸಲು ಕ್ರಮ ವಹಿಸಬೇಕು. 29ನೇ ವಾರ್ಡ್ ಪೌರಕಾರ್ಮಿಕರ ಕಾಲೋನಿಗೆ ರಸ್ತೆ, ಕುಡಿಯುವ ನೀರು, ಒಳಚರಂಡಿ ಸೌಲಭ್ಯವನ್ನುಒದಗಿಸಬೇಕು. ಗೃಹಭಾಗ್ಯಯೋಜನೆಯಡಿ 24 ಖಾಯಂ ಪೌರಕಾರ್ಮಿಕರಿಗೆ ಮನೆ ನಿರ್ಮಿಸಿಕೊಡಬೇಕುಎಂದು ಮನವಿ ಮಾಡಿದರು.
ಗುತ್ತಿಗೆಕಾರ್ಮಿಕರ ಕೆಲಸನಿರ್ವಹಿಸುತ್ತಿರುವಜೆ.ಸಿ.ಬಿ ವಾಹನ ಚಾಲಕ, ಕ್ಲೀನರ್‍ಗಳನ್ನು ಖಾಯಂಗೊಳಿಸಬೇಕು. ಹೊಸದಾಗಿ ನೇಮಕವಾಗಿರುವ 24 ಜನಖಾಯಂ ಪೌರಕಾರ್ಮಿಕರಿಗೆಎನ್.ಪಿ.ಎಸ್ ಪ್ರಾನ್ ಸಂಖ್ಯೆನೀಡಬೇಕು. ನಗರದ ಹೊರವಲಯದಲ್ಲಿರುವಆರ್‍ಟಿಒಕಚೇರಿ ಬಳಿ ಸರ್ವೆ ನಂ. 65ರಲ್ಲಿ ಪೌರಕಾರ್ಮಿಕರ ಬಡಾವಣೆ ನಿರ್ಮಾಣಕ್ಕಾಗಿ 2 ಎಕರೆ ಭೂಮಿ ಮಂಜೂರಾಗಿದ್ದು, ಅಲ್ಲಿಯೇ ಬಡಾವಣೆ ನಿರ್ಮಿಸಬೇಕು. ಖಾಯಂ ಮತ್ತು ನೇರ ಪಾವತಿ ಪೌರಕಾರ್ಮಿಕರಿಗೆತುರ್ತು ಸಂದರ್ಭದಲ್ಲಿಆರೋಗ್ಯದ ಸಮಸ್ಯೆ ಮತ್ತು ಅನಾಹುತಗಳು ಸಂಭವಿಸಿದಲ್ಲಿ ತಕ್ಷಣವೇಬಿಲ್ಲುಗಳನ್ನು ಪಾವತಿಸಬೇಕು. ಸಫಾಯಿಕರ್ಮಚಾರಿಜಾಗೃತಿ ಸಮಿತಿಗೆ ಪಟ್ಟಣ ಸದಸ್ಯರನ್ನಾಗಿ ಸ್ಥಳೀಯ ಪೌರಕಾರ್ಮಿಕರನ್ನು ನೇಮಿಸಬೇಕು. 9ನೇ ವಾರ್ಡ್‍ನ ಪೌರಕಾರ್ಮಿಕರ ಕಾಲೋನಿಮನೆಗಳು 60 ವರ್ಷಗಳಷ್ಟು ಹಳೆಯದಾಗಿದ್ದು, ಮಳೆ ಹೆಚ್ಚಾದರೆಗೋಡೆಗಳು ಬೀಳುವಂತಿವೆ. ಮನೆಗಳನ್ನು ಖುದ್ದು ಪರಿಶೀಲಿಸಿ ತುರ್ತಾಗಿದುರಸ್ತಿಗೆ ಕ್ರಮ ವಹಿಸಬೇಕುಎಂದುನಗರಸಭೆಆಯುಕ್ತರಿಗೆನಾಗರಾಜುಅವರುಅಹವಾಲು ಸಲ್ಲಿಸಿದರು.
ಪೌರಕಾರ್ಮಿಕರಕುಂದುಕೊರತೆ ಆಲಿಸಿ ಮಾತನಾಡಿದ ನಗರಸಭೆ ಪೌರಾಯುಕ್ತಎಸ್.ವಿ.ರಾಮದಾಸ್‍ಅವರುತಾಂತ್ರಿಕ ಕಾರಣಗಳನ್ನು ಸರಿಪಡಿಸಿ ಸಕಾಲದಲ್ಲಿ ವೇತನ ಪಾವತಿಸಲಾಗುವುದು. ಮುಂದಿನ ದಿನಗಳಲ್ಲಿ ಇದುಮರುಕಳಿಸದಂತೆ ನೋಡಿಕೊಳ್ಳಲಾಗುವುದು. ಸಮಾನ ಕೆಲಸಕ್ಕೆ ಸಮಾನ ವೇತನ ಬೇಡಿಕೆ ಸರ್ಕಾರದ ಬಳಿಯಿದೆ. 2024ರ ಮೇ ಮಾಹೆವರೆಗೆಸಂಕಷ್ಟ ಭತ್ಯೆಯನ್ನು ನೀಡಲಾಗಿದ್ದು, ಸರ್ಕಾರದಿಂದ ಹಣ ಬಿಡುಗಡೆ ಆಗಬೇಕು. ಎಸ್‍ಎಫ್‍ಸಿ ಅನುದಾನ ಬಿಡುಗಡೆ ಬಳಿಕ ವೇತನದಜೊತೆಯೇ ನೀಡಲಾಗುವುದು. 35 ಪೌರಕಾರ್ಮಿಕರಿಗೆ ಮನೆ ನಿರ್ಮಿಸಲಾಗಿದೆ. ಇನ್ನು 24 ಮಂದಿಗೆ ಮನೆ ನಿರ್ಮಾಣಕ್ಕೆ 24 ಗುಂಟೆ ಭೂಮಿ ಮಂಜೂರಾಗಿದೆ. ನಗರಸಭಾ ವ್ಯಾಪ್ತಿಯ 9ನೇ ವಾರ್ಡ್‍ನಲ್ಲಿರುವ ಮನೆಗಳನ್ನು ಖುದ್ದಾಗಿ ಪರಿಶೀಲಿಸಿ ದುರಸ್ತಿಗೆ ಕ್ರಮ ವಹಿಸಲಾಗುವುದು. ಅಲ್ಲದೆ ಪೌರಕಾರ್ಮಿಕರಇತರೆ ಬೇಡಿಕೆಗಳನ್ನು ಪ್ರಾಮಾಣಿಕವಾಗಿಪರಿಹರಿಸಲು ಪ್ರಯತ್ನಿಸಲಾಗುವುದುಎಂದುರಾಮದಾಸ್‍ಅವರುತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾವ್ಯವಸ್ಥಾಪಕ ರಾಜು, ಹಿರಿಯ ವೈದ್ಯಾಧಿಕಾರಿಡಾ.ಮಹದೇವ್, ಆರೋಗ್ಯಇಲಾಖೆಯವೈದ್ಯರಾದಡಾ.ರಂಜಿತಾ, ನಗರಆರೋಗ್ಯಕೇಂದ್ರದ ವೈದ್ಯೆಡಾ.ರಿಯಾ ದಿಶಾನಿರೇ, ಶೇಖರ್, ನಗರಸಭೆ ಲೆಕ್ಕ ಅಧೀಕ್ಷಕರುದ್ರಮುನಿಸ್ವಾಮಿ, ಯೋಜನಾಧಿಕಾರಿವೆಂಕಟನಾಯಕ್‍ಕಾರ್ಯಕ್ರಮದಲ್ಲಿಹಾಜರಿದ್ದರು.
ಪೌರಕಾರ್ಮಿಕರ ಸಂವಾದಕಾರ್ಯಕ್ರಮದ ಅಂಗವಾಗಿ ಪೌರಕಾರ್ಮಿಕರಿಗೆಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಪೌರಕಾರ್ಮಿಕರಆರೋಗ್ಯತಪಾಸಣೆ ನಡೆಸಿ ಔಷಧಗಳನ್ನು ವಿತರಿಸಲಾಯಿತು.