ನಿಸರ್ಗ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೨೭:ಸಮೀಪದ ತೊರವಿ ಗ್ರಾಮದ ನಿಸರ್ಗ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ತೊರವಿ ಗ್ರಾಮ ಪಂಚಾಯತಿ ಪಿಡಿಒ ರಾಜೇಶ್ವರಿ ತುಂಗಳ ಮತ್ತು ನಿವೃತ್ತ ಉಪನ್ಯಾಸಕ ಎಸ್.ಬಿ. ಮುಧೋಳ ಹಿಟ್ನಳ್ಳಿ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಉಪನ್ಯಾಸಕಿ ವರ್ಷಾ ಕೋಟ್ನಿಸ್, ಸಂಸ್ಥೆಯ ಅಧ್ಯಕ್ಷÀ ವಸಂತ ಭೋಸಲೆ, ಮುಖ್ಯ ಗುರುಮಾತೆ ಗೌರಾಬಾಯಿ ಭೋಸಲೆ ಭಾಗವಹಿಸಿದ್ದರು.
ಲಕ್ಷಿö್ಮÃ ಅವತಾಡೆ ಸ್ವಾಗತಿಸಿದರು. ಫಾತಿಮಾ ಜಾಗೀರದಾರ ನಿರೂಪಿಸಿದರು. ಸಹಶಿಕ್ಷಕÀ ಹುಸೇನಬಾಶಾ ವಾಲಿಕಾರ ವಂದಿಸಿದರು.
ಕಾರ್ಯಕ್ರಮಕ್ಕೆ ನೂರಾರು ಮಕ್ಕಳು ರಾಧಾ ಕೃಷ್ಣ ಜೋಡಿಯೊಂದಿಗೆ ಆಗಮಿಸಿ ಬಹುಮಾನ ಗಳಿಸಿದ್ದರು. ನೃತ್ಯ ಮತ್ತು ಕೃಷ್ಣನ ನಾಟಕ ಪ್ರದರ್ಶಿಸಲಾಯಿತು. ನವರಸಪುರ ಮತ್ತು ತೊರವಿ ಗ್ರಾಮದ ಎಲ್ಲ ಆತ್ಮೀಯ ಪಾಲಕರು ಮಕ್ಕಳು ಈ ಸಾಂಸ್ಕೃತಿಕ ಮತ್ತು ಮಡಿಕೆ ಒಡೆಯುವ ಕಾರ್ಯಕ್ರಮವನ್ನು ನೋಡಿ ಸಂತೋಷಪಟ್ಟರು.