ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ
ತಾಳಿಕೋಟೆ:ಆ.೨೭: ಪಟ್ಟಣದ ಶ್ರೀ ಎಸ್ ಎಸ್ ವಿದ್ಯಾಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಶ್ರೀ ಎಚ್ ಎಸ್ ಪಾಟೀಲ ಇಂಗ್ಲಿಷ್ ಮಾದ್ಯಮ ಪ್ರಾಥಮಿಕ ಶಾಲೆಯಲ್ಲಿ ಸೋಮವಾರರಂದು ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರಾದ ಎಚ್.ಎಸ್.ಪಾಟೀಲ(ಬಾವೂರ) ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಆಡಳಿತಾಧಿಕಾರಿ ನಿವೃತ್ತ ಶಿಕ್ಷಕಿ ಶ್ರೀಮತಿ ಶಾಂತಮ್ಮ. ಎಚ್. ಚೌದರಿ, ಕಾರ್ಯದರ್ಶಿಗಳಾದ ಸಚಿನ.ಎಚ್.ಪಾಟೀಲ ಹಾಗೂ ಕಿರಣ.ಎಚ್.ಪಾಟೀಲ, ಮುಖ್ಯ ಶಿಕ್ಷಕಿ ಶ್ರೀಮತಿ ಮೀರಾ ದೇಶಪಾಂಡೆ ಹಾಗೂ ಶ್ರೀಮತಿ ಲಕ್ಷಿ÷್ಮÃ ದೇಶಪಾಂಡೆ, ಪ್ರಾಚಾರ್ಯರಾದ ಶ್ರೀಮತಿ ಎಮ್.ಎಸ್.ಬಿರಾದಾರ, ಆಗಮಿಸಿದ್ದರು.
ಶ್ರೀಮತಿ ಶ್ರೇಯಾ ದೇಶಪಾಂಡೆ ಭರತ ನಾಟ್ಯ ಕಲೆ ಪ್ರದರ್ಶಿಸಿದರು.
ಇಂಗ್ಲೀಷ ಮಾದ್ಯಮದ ಅನೇಕ ವಿದ್ಯಾರ್ಥಿಗಳು ಕೃಷ್ಣ ಹಾಗೂ ರುಕ್ಮಣಿ ವೇಷಗಳನ್ನು ಧರಿಸಿ ಕಾರ್ಯಕ್ರಮದ ಗಮನ ಸೆಳೆದರು. ಕೃಷ್ಣ ಮತ್ತು ರುಕ್ಮಣಿ ವೇಷದಾರಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ವಿತರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ಮಾತನಾಡಿ ಕೃಷ್ಣ ಹುಟ್ಟಿದ್ದು ೫೨೫೩ ವರ್ಷಗಳ ಹಿಂದೆ, ಶ್ರಾವಣ, ದಿನ ಅಷ್ಷಮಿ, ನಕ್ಷತ್ರ ರೋಹಿಣಿಯ ದಿನದಂದು ಜನ್ಮ ತಾಳಿದ ಶ್ರೀ ಕೃಷ್ಣ ೧೨೬ ವರ್ಷ ೮ ತಿಂಗಳು ೭ ದಿನಗಳ ಕಾಲ ಬದುಕಿದ್ದರೆಂಬುದು ಉಲ್ಲೇಖವಿದೆ ಶ್ರೀಕೃಷ್ಣ ೮೯ ವರ್ಷದವನಿದ್ದಾಗ ಕುರುಕ್ಷೇತ್ರ ಯುದ್ಧ ನಡೆದು ೩೬ ವರ್ಷಗಳ ಬಳಿಕ ಕೃಷ್ಣನು ಮರಣಹೊಂದಿದ್ದರ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಇಂಗ್ಲಿಷ್ ಮಾದ್ಯಮದ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪಾಲಕರು ಹಾಜರಿದ್ದರು.
ಮಹಾಂತೇಶ ಕುಂಬಾರ ನಿರೂಪಿಸಿದರು. ಶಿಕ್ಷಕಿ ನಂದಿನಿ ವಂದಿಸಿದರು.