ಸಂಗನಬಸವ ಅಂತಾರಾಷ್ಟಿçÃಯ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೨೭:ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಂಗವಾದ ಸಂಗನಬಸವ ಅಂತಾರಾಷ್ಟಿçÃಯ ವಸತಿ ಶಾಲೆ ಮತ್ತು ಕಾಲೇಜಿನಲ್ಲಿ ಸೋಮವಾರ ಕೃಷ್ಣ ಜನ್ಮಾಷ್ಟಮಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಮೊಸರು-ಗಡಿಗೆೆ (ಧಹೀ-ಹಂಡೆ) ಒಡೆಯುವ ಸ್ಪರ್ಧೆಯನ್ನು ಆಯೋಜಿಸಿಲಾಗಿತ್ತು. ಈ ಸ್ಪರ್ಧೆಯಲ್ಲಿ ಶಾಲೆಯ ೪ ತಂಡಗಳಿAದ ಬಾಲಕರು-ಬಾಲಕಿಯರು ಪಾಲ್ಗೊಂಡಿದ್ದು, ಅದೇ ರೀತಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಈ ಸ್ಪರ್ಧೆಯಲ್ಲಿ ಬಾಲಕರ ತಂಡದಿAದ ಭಗತ್‌ಸಿಂಗ್ ತಂಡವು – ಪ್ರಥಮ ಸ್ಥಾನ, ಸುಭಾಸ ಚಂದ್ರ ಭೋಸ್ – ದ್ವಿತೀಯ ಸ್ಥಾನ ಮತ್ತು ಕಿತ್ತೂರು ರಾಣಿ ಚನ್ನಮ್ಮ – ತೃತೀಯ ಸ್ಥಾನವನ್ನು ಪಡೆದರೆ, ಬಾಲಕಿಯರ ತಂಡದಿAದ ಕಿತ್ತೂರು ರಾಣಿ ಚನ್ನಮ್ಮ – ಪ್ರಥಮ ಸ್ಥಾನ, ಸುಭಾಸ್ ಚಂದ್ರ ಭೋಸ್ – ದ್ವಿತೀಯ ಸ್ಥಾನ ಹಾಗೂ ಸಂಗೊಳ್ಳಿ ರಾಯಣ್ಣ ತಂಡ- ತೃತೀಯ ಸ್ಥಾನ ಗಳಿಸಿತು ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಹೇಮಂತ್ ಕೃಷ್ಣ ಘೋಷಿಸಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಹೇಮಂತ್ ಕೃಷ್ಣ, ಶಾಲೆಯ ಪ್ರಾಂಶುಪಾಲೆ ಶರ್ಮಿಳಾ ಹೇಮಂತ್, ಉಪಪ್ರಾಂಶುಪಾಲ ಅಣ್ಣಪ್ಪ ಶಿರೂರ ಮತ್ತು ಜ್ಯೂನಿಯರ್ ವಿಂಗ್‌ನ ಉಪಪ್ರಾಚಾರ್ಯೆತಿ ಜ್ಯೋತಿ ಪಡಸಾಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮಕ್ಕೆ ಶಾಲಾ-ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಮೂಹ ಮತ್ತು ವಿದ್ಯಾರ್ಥಿ ವೃಂದ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.