ಕೃಷ್ಣ ಜನ್ಮಾಷ್ಟಮಿ: ವಿಜಯಪುರದಲ್ಲಿ ಬೈಕ್ ರ್ಯಾಲಿ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೨೭:೧೧೬ನೇ ಕೃಷ್ಣ ಜನ್ಮ ಮಹೋತ್ಸವದ ನಿಮಿತ್ತವಾಗಿ ವಿಜಯಪುರ ಸತ್ಸಂಗ ಮಂಡಳಿಯವರು ಬೈಕ್ ರ್ಯಾಲಿ ನಡೆಸಿದರು.
ಕನ್ನೂರ ಶಾಂತಿಕುಟೀರ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಹೇತಿ, ಸತೀಶ ಕನ್ನೂರ, ಗೋಕುಲ ಶೇಡಜಿ, ಶಾಂತಿಕುಟೀರದಿAದ ಶ್ರೀ ಕೃಷ್ಣ ಸಂಪಗಾAವಕರ, ಶ್ರೀನಿವಾಸ ಕುಲಕರ್ಣಿ ಹಾಗೂ ಮುಂಬೈ ಭಕ್ತ ಮಂಡಳಿಯವರು ಬೈಕ್ ರ್ಯಾಲಿಗೆ ಚಾಲನೆ ನೀಡಿದರು.ವು
ವಿಜಯಪುರದ ಬಾಲಾಜಿ ಪೆಟ್ರೋಲ್ ಪಂಪ್‌ದಿAದ ಬೈಕ್ ರ‍್ಯಾಲಿ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಯಘೋಷ ಹಾಗೂ ನಾಮಸ್ಮರಣೆಯೊಂದಿಗೆ ಶ್ರೀ ಷಣ್ಮುಖಾರೂಡ ಮಠಕ್ಕೆ ತಲುಪಿತು. ಶ್ರೀ ಮಠದ ಸ್ವಾಮಿಜಿಯವರು ಆಶೀರ್ವಚನ ನೀಡಿದರು. ಅಲ್ಲಿಂದ ಹೊರಟು ಕೊನೆಗೆ ಶ್ರೀ ಗುರುದತ್ತ ಮಂಗಲ ಕಾರ್ಯಾಲಯಕ್ಕೆ ಮುಕ್ತಾಯಗೊಂಡಿತು.
ನಗರದ ಗುರು ಬಂದು ಭಗಿನಿಯರು, ಕನ್ನೂರ, ಲೋಗಾವ, ಬಮ್ಮನಳ್ಳಿ, ಹಾಗೂ ಮುಂಬೈ ಭಕ್ತರು ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.
ಸಂಚಾಲಕರಾದ ವಿವೇಕ ತಿಕೋಟಿ, ಗೋಪಾಲ ಬಾಹೇತಿ, ರಮಾಕಾಂತ ಬಾಹೇತಿ, ಪವನ ಕುಲಕರ್ಣಿ, ಸಾಧನಾ ತಿಕೋಟಿ, ಪ್ರಿತೇಶ, ಚೇತನ ಪವಾರ ,ಕಿರಣ ವೈದ್ಯ, ವಿವೇಕ ಕುಲಕರ್ಣಿ ನೇತೃತ್ವ ವಹಿಸಿದ್ದರು. ನೂರಕ್ಕೂ ಹೆಚ್ಚು ಜನರು ದ್ವಿಚಕ್ರ ವಾಹನದೊಂದಿಗೆ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.