ನಗರದಲ್ಲಿ ಅದ್ದೂರಿ ಶ್ರೀ ಕೃಷ್ಣ ಜನ್ಮಾಷ್ಟಮಿ
ಚಿಕ್ಕಬಳ್ಳಾಪುರ.ಆ.೨೭- ಶ್ರಾವಣ ಮಾಸದ ಎಂಟನೇ ದಿನವಾದ ಅಷ್ಟಮಿ ದಿನವನ್ನು ಶ್ರೀಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ಆಚರಿಸುವ ಹಿನ್ನೆಲೆಯಲ್ಲಿ ನಗರದ ಎಂ.ಜಿ ರಸ್ತೆಯಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಅದ್ದೂರಿಯಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯುತ್ತಿದೆ.
ಶ್ರೀ ವೇಣುಗೋಪಾಲ ಸ್ವಾಮಿಗೆ ಬೆಳಗಿನಜಾವವೇ ಪಂಚಾಮೃತ ಅಭಿಷೇಕ ಅಲಂಕಾರಾದಿಗಳು ನಡೆದಿದ್ದು ಮಧ್ಯಾಹ್ನ ಶ್ರೀ ಕೃಷ್ಣನ ಭವ್ಯ ಮೂರ್ತಿಯನ್ನು ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಊರಿನಲ್ಲಿ ಮೆರವಣಿಗೆ ನಡೆಸಲು ಸಕಲ ಸಿದ್ಧತೆಗಳು ಕೈಗೊಳ್ಳಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಜಿಲ್ಲಾ ಯಾದವ ಸಂಘ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಭವ್ಯ ಕಾರ್ಯಕ್ರಮದಲ್ಲಿ ಜನಾಂಗದ ಎಲ್ಲಾ ಬಂಧುಗಳು ಶ್ರೀ ಕೃಷ್ಣ ಭಕ್ತರು ಪಾಲ್ಗೊಂಡು ಭಕ್ತಿ ಭಾವವನ್ನು ತೋರ್ಪಡಿಸಿದ್ದಾರೆ.
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪುಟ್ಟ ಮಕ್ಕಳಿಗೆ ಶ್ರೀರಾದ ಕೃಷ್ಣ ರುಕ್ಮಿಣಿ ವೇಷಗಳನ್ನು ತೊಡಿಸಿ ತಂದೆ ತಾಯಿಗಳು ಸಂಭ್ರಮಿಸುತ್ತಿದ್ದು ಸ್ಟುಡಿಯೋಗಳಿಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಫೋಟೋ ಕ್ಲಿಕ್ಕಿಸುವುದರಲ್ಲಿ ನಿರ್ತರಾಗಿರುವುದು ಸಹ ಕಂಡುಬಂದಿದೆ.
ಯುಗ ಅವತಾರಿ ಶ್ರೀ ಕೃಷ್ಣ ದ್ವಾಪರಯುಗದ ಕಥೆ ನಾಯಕ ಆಗಿದ್ದು ಗೀತೆ ಬೋಧನೆ ಮೂಲಕ ಗೀತಾಚಾರ್ಯ ಎಂದು ಹೆಸರು ಗಳಿಸಿದ್ದಾರೆ ಇವರ ಜೀವನ ಚರಿತ್ರೆ ಮುಂದಿನ ಯುಗಾಂತರಗಳಲ್ಲಿಯೂ ಸಹ ಜನತೆಗೆ ಮಾರ್ಗದರ್ಶನ ಆಗಿದೆ ಮಹಾವಿಷ್ಣುವಿನ ದಶಾವತಾರಗಳಲ್ಲಿ ೮ನೇ ಅವತಾರವಾಗಿ ಜನಿಸಿದವರು ಶ್ರೀ ಕೃಷ್ಣ ಈತನ ಮೂಲ ತಂದೆ ತಾಯಿಗಳು ವಸುದೇವ ದೇವಕಿ ಆಗಿದ್ದರೆ ಈತ ಬೆಳೆದಿದ್ದು ಯಶೋಧ ಮತ್ತು ನಂದಗೋಪನ ಮನೆಯಲ್ಲಿ ಬಾಲ್ಯದಲ್ಲಿಯೇ ಹಲವಾರು ಪವಾಡಗಳನ್ನು ತೋರಿಸುವ ಮೂಲಕ ತಾನು ಯುಗಪುರುಷ ಹಾಗೂ ದೈವತ್ವ ಹೊಂದಿರುವವನು ಎಂದು ತೋರ್ಪಡಿಸಿದ ಕೀರ್ತಿವಂತ ಶ್ರೀ ಕೃಷ್ಣ.
ಬಾಲ್ಯದಲ್ಲಿ ಬಂಡಿಕಾಸುರ ಭೂತನಿ ಮುಷ್ಟಿಕಾಚಾಣೂರ ಕಂಸ ಮುಂತಾದವರನ್ನು ಸಂಹರಿಸಿದ ಶ್ರೀ ಕೃಷ್ಣ ಪರಮಾತ್ಮ ಮುಂದೆ ಪಾಂಡವರ ಸಹಾಯದಿಂದ ಧರ್ಮ ಸಂರಕ್ಷಣೆಗಾಗಿ ಅನೇಕ ಅಧರ್ಮ ಮಾರ್ಗದವರನ್ನು ಸಂಬಂಧಿಸಿ ಧರ್ಮವನ್ನು ರಕ್ಷಿಸಿದ್ದವರು.
ಇವರ ನಾನಾರೋಪದ ಕಥಾನಕಗಳು ರೂಪಕಗಳನ್ನು ಇಂದು ಭಕ್ತರು ನೆನೆಯುತ್ತಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಯನ್ನು ಆಚರಿಸುತ್ತಿದ್ದಾರೆ.