ಸಭಾಂಗಣ ನಿರ್ಮಾಣಕ್ಕೆ ಸಂಸದರ ಅನುದಾನ ಬಳಕೆ
ಮುಳಬಾಗಿಲು.ಆ.೨೭- ಕೃಷಿಕ ಸಮಾಜ ಸರ್ಕಾರದ ಯಾವುದೇ ಅನುದಾನ ಇಲ್ಲದೆ ರೈತರ ಸೇವೆ ಮಾಡುತ್ತಿದ್ದು ತಾಲೂಕು ಕೃಷಿಕ ಸಮಾಜದ ಕಟ್ಟಡದ ಮೇಲ್ಭಾಗದಲ್ಲಿ ಸಭಾಂಗಣ ನಿರ್ಮಾಣಕ್ಕೆ ಸಂಸದರ ಅನುದಾನದಲ್ಲಿ ನೆರವನ್ನು ನೀಡಲಾಗುವುದು ಎಂದು ಸಂಸದ ಎಂ. ಮಲ್ಲೇಶ್ ಬಾಬು ತಿಳಿಸಿದರು.
ನಗರದ ಎಪಿಎಂಸಿ ಪ್ರಾಂಗಣದಲ್ಲಿ ನಿರ್ಮಾಣ ಮಾಡಿರುವ ತಾಲೂಕು ಕೃಷಿಕ ಸಮಾಜದ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿ ರೈತರಿಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳಿಗೆ ಉತ್ತೇಜಿನ ನೀಡಿಕೊಂಡು ಬರುವುದಾಗಿ ಹೇಳಿದರು.
ಶಾಸಕ ಸಮೃದ್ಧಿ ವಿ. ಮಂಜುನಾಥ್ ಮಾತನಾಡಿ, ತಾಲೂಕು ಕೃಷಿಕ ಸಮಾಜ ನೂತನ ಕಟ್ಟಡದಲ್ಲಿ ರೈತರಿಗೆ ತರಬೇತಿ ಕಾರ್ಯಕ್ರಮಗಳು, ಅರಿವು ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನೀಡುವ ಮೂಲಕ ಕೃಷಿ ಬಿಕಟ್ಟಿನ ಬಗ್ಗೆ ಚರ್ಚಿಸಿ ಸರ್ಕಾರ ಮತ್ತು ಸಮಾಜಕ್ಕೆ ರೈತ ಎದುರಿಸುತ್ತಿರುವ ಸಮಸ್ಯೆಗಳ ಚಿತ್ರಣವನ್ನು ತೆರೆದಿಡುವ ಪ್ರಯತ್ನ ಆಗಬೇಕು, ಸಭಾಂಗಣ ನಿರ್ಮಾಣಕ್ಕೆ ಶಾಸಕ ಅನುದಾನದ ಜೊತೆಗೆ ವೈಯಕ್ತಿಕವಾಗಿಯೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕೋಲಾರ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಹಿರಿಯ ವಕೀಲ ಕೆ. ವಿ. ಶಂಕರಪ್ಪ ಮಾತನಾಡಿ ಸಂಪೂರ್ಣವಾಗಿ ಕೃಷಿ ಮಾಡುವ ಕುಟುಂಬಗಳು ದುಸ್ಥಿತಿಯಲ್ಲಿವೆ, ಕೃಷಿಯ ಜೊತೆಗೆ ಬೇರೆ ವ್ಯಾಪಾರ ವ್ಯವಹಾರ, ಕುಟುಂಬದ ಸದಸ್ಯರು ಉದ್ಯೋಗದಲ್ಲಿ ಇರುವಂತ ಕುಟುಂಬ ಗಳು ಒಂದಷ್ಟು ಉಸಿರಾಡಿಕೊಂಡು ಕೃಷಿ ಮಾಡುತ್ತಿದ್ದಾರೆ ಈ ಬಗ್ಗೆ ಆಳುವ ಸರ್ಕಾರಗಳು ಗಮನ ಹರಸದಿದ್ದಲ್ಲಿ ಮುಂದಿನ ೧೦ ವರ್ಷಗಳಲ್ಲಿ ಜನರು ಊಟಕ್ಕೆ ಪರದಾಡಬೇಕಾದ ಪರಿಸ್ಥಿತಿ ದೇಶದಲ್ಲಿ ಉದ್ಭವವಾಗಲಿದೆ ಕಪ್ಪು ಹಣ ಹೊಂದಿರುವ ವ್ಯಕ್ತಿಗಳು ಕೃಷಿ ಭೂಮಿಯನ್ನು ಖರೀದಿಸುತ್ತಿದ್ದಾರೆ.
ಕೃಷಿ ಮಾಡುವವರು ಭೂಮಿ ಖರೀದಿಸಲು ಸಾಧ್ಯವೇ ಇಲ್ಲ ಇದು ಇದೇ ರೀತಿ ಮುಂದುವರೆದರೆ ಆಹಾರ ಅಭಾವ ಉಂಟಾಗಿ ಮನುಷ್ಯ ಮನುಷ್ಯನನ್ನೇ ಕೊಂದು ತಿನ್ನುವ ಪರಿಸ್ಥಿತಿ ಬರೆದಂತೆ ತಡೆಯಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸಬೇಕೆಂದು ಆಗ್ರಹಿಸಿದ್ದರು.
ಸರ್ಕಾರಿ ವಕೀಲರ ಸಂಘದ ಅಧ್ಯಕ್ಷ ತಟ್ಟನಗುಂಟೆ ಅಶ್ವಥನಾರಾಯಣಗೌಡ ಮಾತನಾಡಿದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಡಗೂರು ಡಿ. ಎಲ್. ನಾಗರಾಜ್ ಮಾತನಾಡಿ ಕೃಷಿಕ ಸಮಾಜಕ್ಕೆ ಸರ್ಕಾರ ಅನುದಾನ ನೀಡುವುದಿಲ್ಲ ಆದರೂ ಸೇವಾ ಮನೋಭಾವದಿಂದ ರೈತರ ಪರ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷ ಎಸ್. ಆರ್. ಮಂಜುನಾಥಗೌಡ, ನಿರ್ದೇಶಕ ಹೆಚ್. ಹನುಮಂತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಸಿ. ನೀಲಕಂಠೇಗೌಡ ಮಾತನಾಡಿದರು.
ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ಕೆ. ಎನ್. ನಾಗರಾಜ್, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಆರ್. ಆರ್. ರಾಜೇಂದ್ರ ಗೌಡ, ಉದ್ಯಮಿ ಬೇವಹಳ್ಳಿ ಶಶಿಕಾಂತ್, ಉಪ ಕೃಷಿ ನಿರ್ದೇಶಕ ಎಸ್. ನಾಗರಾಜ, ಸಹಾಯಕ ನಿರ್ದೇಶಕ ಎಸ್. ರವಿಕುಮಾರ್, ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ಟಿ. ಎಸ್. ರವಿಕುಮಾರ್, ಎಪಿಎಂಸಿ ಕಾರ್ಯದರ್ಶಿ ಹೆಚ್. ಹರೀಶ್, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಮೋತಕಪಲ್ಲಿ ಎಂ. ಸುರೇಶ್, ಕೋಲಾರ ಅಧ್ಯಕ್ಷ ಮಂಜುನಾಥಗೌಡ, ಜಿಲ್ಲಾ ನಿರ್ದೇಶಕ ಉಗಿನಿ ಆರ್. ನಾರಾಯಣಗೌಡ, ಉಪಾಧ್ಯಕ್ಷ ಜಿ. ಲಕ್ಷ್ಮಯ್ಯ, ಕಾರ್ಯದರ್ಶಿ ಕೆ. ಮಂಜುನಾಥ್, ಖಜಾಂಚಿ ಕೆ. ವಿ. ಚಾಮೇಗೌಡ, ನಿರ್ದೇಶಕರಾದ ಟಿ. ಎಸ್. ನಾರಾಯಣ ರೆಡ್ಡಿ, ಕೆ. ನಾಗರಾಜ ರೆಡ್ಡಿ, ಪಿ. ಚಲಪತಿ, ಆರ್. ಜಗದೀಶ್, ನಾಗಾರ್ಜುನ, ನಟರಾಜ್, ಶ್ರೀನಿವಾಸ್, ಬಾಲಕೃಷ್ಣ, ಎಂ. ಕೃಷ್ಣಪ್ಪ ಇದ್ದರು.