ಸ್ಟಾಪ್ ನರ್ಸ್ ಆತ್ಮಹತ್ಯೆ ಪ್ರಕರಣ:ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿಸಿ, ಎಸ್ಪಿಗೆ ಮನವಿ
ಸಂಜೆವಾಣಿ ವಾರ್ತೆ,
ವಿಜಯಪುರ, ಆ.೨೭:ತಾಳಿಕೋಟೆ ಸ್ಟಾಪ್ ನರ್ಸ್ ಶಶಿಕಾಂತ ಬೆಣ್ಣೂರ ಆತ್ಮಹತ್ಯೆ ಪ್ರಕರಣದಲ್ಲಿನ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಛಲವಾದಿ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಆತ್ಮಹತ್ಯೆಗೀಡಾದ ಶಶಿಕಾಂತ ಡೆತ್ ನೋಟ್ ವಾಟ್ಸಪ್ ಸ್ಟೇಟಸ್ ದಲ್ಲಿ ಹರಿದಾಡಿದ್ದು, ಡೆತ್ ನೋಟ್ ದಲ್ಲಿ ಮೂವರು ಅಧಿಕಾರಿಗಳ ಹೆಸರು ಬರೆದಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಹಿಂಸೆ, ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿಯೂ ಸ್ಟಾಪ್ ನರ್ಸ್ ಡೆತ್ ನೋಟ್ ನಲ್ಲಿ ಬರೆದುಕೊಂಡಿದ್ದಾರೆ. ಆದ್ದರಿಂದ ಮೂವರು ಅಧಿಕಾರಿಗಳ ವಿರುದ್ದ ಕೂಡಲೇ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ನೀಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಕರ್ನಾಟಕ ರಾಜ್ಯ ಛಲವಾದಿ ನೌಕರರ ಸಂಘದ ರಾಜ್ಯಾಧ್ಯಕ್ಷ ಚಿದಾನಂದ ಕಾಂಬಳೆ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ರಾಕೇಶ ಇಂಗಳಗಿ,
ರಾಜ್ಯ ಹಿರಿಯ ಉಪಾಧ್ಯಕ್ಷ ಅರವಿಂದ ಲಂಬು,
ರಾಜ್ಯ ಸಂಘಟನಾ ಕಾರ್ಯದರ್ಶಿ ಹೆಚ್.ಬಿ. ಸಿಂಗ್ಯಾಗೋಳ,
ರಾಜ್ಯ ಸಹ ಕಾರ್ಯದರ್ಶಿ ಡಿ. ಎಮ್. ಚಲವಾದಿ,
ರಾಜ್ಯಸಂಚಾಲಕ ಮೋಹನ ಗುನ್ನಾಪುರ, ರಾಜ್ಯ ಖಜಾಂಚಿ ಸುರೇಶ ದುಲಾರಿ, ಪರಶುರಾಮ ಗರಸಂಗಿ, ಜಯಶ್ರೀ ಬ್ಯಾಕೋಡ, ಶಿವರಣ ಕಾಂಬಳೆ, ಮುದ್ದಣ್ಣ ಭೀಮನಗರ, ಕೆ.ಬಿ. ಕೋರೆ ಮತ್ತಿತರರು ಇದ್ದರು.