ಗ್ಯಾಲಕ್ಸಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಕೃಷ್ಣಾಷ್ಟಮಿ ಆಚರಣೆ
ಕೋಲಾರ,ಆ.೨೭-ತಾಲೂಕಿನ ವಕ್ಕಲೇರಿ ಗ್ರಾಮದಲ್ಲಿರುವ ಗ್ಯಾಲಕ್ಸಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಕೃಷ್ಣಾಷ್ಟಮಿ ಜಯಂತಿಯನ್ನು ಆಚರಣೆ ಮಾಡಲಾಯಿತು.
ಶಾಲೆಯ ಎಲ್ಲಾ ಮಕ್ಕಳು ಕೃಷ್ಣ ಮತ್ತು ರಾಧೆಯ ವೇಷವನ್ನು ಧರಿಸಿ ಕೃಷ್ಣನ ಹಾಡುಗಳು ನೃತ್ಯ ಮತ್ತು ಹಾಡುಗಳು ಮುಖಾಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಗ್ಯಾಲಕ್ಸಿ ಶಾಲೆಯ ಅಧ್ಯಕ್ಷ ರಾಜಪ್ಪ ಮಾತನಾಡಿ, ಕೃಷ್ಣನ ಮಹತ್ವಗಳನ್ನು ಮಕ್ಕಳೊಂದಿಗೆ ಹಂಚಿಕೊಂಡರು ಕೆಲವು ನಿಮಿಷಗಳ ಕಾಲ ಮಕ್ಕಳ ಜೊತೆಯಲ್ಲಿ ಸಂವಾದ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯನಿ ಧನಲಕ್ಷ್ಮಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪ್ರಿಯಾ, ಭವ್ಯ, ಅಭಿ, ರಫೀಕ್, ತಾಜ್, ದೈಹಿಕ ಶಿಕ್ಷಕ ಡಾ.ದೊಮ್ಮಸಂದ್ರ ನರಸಿಂಹ, ನೃತ್ಯ ಶಿಕ್ಷಕರಾದ ಶ್ರಾವಣ ಮಾಸ್ಟರ್ ಮತ್ತು ಪೋಷಕರು ಭಾಗವಹಿಸಿದ್ದರು.