ಶ್ರೀಕೃಷ್ಣ ಪರಮಾತ್ಮನ ೫೨೫೧ ನೇ ಜನ್ಮದಿನಾಚರಣೆ
ಕೋಲಾರ,ಆ,೨೭- eನಕ್ಕೂ ಅeನಕ್ಕೂ ಮಧ್ಯಭಾಗದಲ್ಲಿರುವ ಅಷ್ಟಮಿ ದಿನದಂದು ಭಗವಂತ ಶ್ರೀಕೃಷ್ಣನ ಜನ್ಮವಾಗಿದೆ ಎಂದು ಪ್ರಬೋಧ ಸೇವಾ ಸಮಿತಿಯ ಪ್ರಮುಖರಾದ ಚಂದ್ರಶೇಖರ್ ಹೇಳಿದರು.
ನಗರದ ಅಂತರಗಂಗೆ ರಸ್ತೆಯ ಕೀಲುಕೋಟೆ ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆ.೨೬ ರಿಂದ ಸೆ.೫ ರವರೆವಿಗೂಗ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಶ್ರೀಕೃಷ್ಣನು ಕ್ರಿಸ್ತಪೂರ್ವ ೩೨೨೮ ನೇ ವರ್ಷ ಜುಲೈ ತಿಂಗಳು ೧೯ ನೇ ದಿನಾಂಕದಂದು ಬಹುಳ ಅಷ್ಟಮಿ ದಿನದಂದು ವೃಷಭ ಲಗ್ನದಲ್ಲಿ ಜನಿಸಿದ್ದು, ಇಂದಿಗೆ ೫೨೫೧ ವರ್ಷಗಳಾಗಿವೆ, ಶ್ರೀಕೃಷ್ಣನ ಜೀವನದೇ ದೊಡ್ಡ eನ ಸಂದೇಶವಾಗಿದೆ ಎಂದು ವಿವರಿಸಿದರು.
ಶ್ರೀಕೃಷ್ಣ ಪರಮಾತ್ಮನು ಪ್ರಪಂಚದೊಳಗೆ eನ ಪ್ರಕಾಶವಂತವಾದ ಪರದಿಂದ ಅeನ ಅಂಧಕಾರವಾದ ಪ್ರಪಂಚದೊಳಗೆ ಬಂದು ಭಗವಂತನಾಗಿ ಹುಟ್ಟಿದ್ದಾನೆ ಎಂದು ತಿಳಿಸಿದರು.
ಪ್ರಬೋಧ ಸೇವಾ ಸಮಿತಿಯ ಮತ್ತೋರ್ವ ಪ್ರಮುಖ ಗಂಗರಾಜು ಮಾತನಾಡಿ, ಭಗವದ್ಗೀತೆ ಹುಟ್ಟಿದ ನಂತರ ಶ್ರೀಕೃಷ್ಣನು ಸಾಮಾನ್ಯನಲ್ಲ ಎಂದು ಕೆಲವು eನಿಗಳು ಗ್ರಹಿಸಿದ್ದಾರೆ, ಕೃಷ್ಣನು ಮರಣಿಸಿದ ಎರಡು ವರ್ಷಗಳ ನಂತರ ಕಲಿಯುಗ ಆರಂಭವಾಗಿದೆ, ಕಲಿಯುವ ಆರಂಭದಲ್ಲಿಯೇ ದೇಶದ ಪ್ರಮುಖ ಹಬ್ಬವಾಗಿ ಮೊಟ್ಟ ಮೊದಲ ಬೀದಿ ಉತ್ಸವವಾಗಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ ಎಂದರು.
ಕೃಷ್ಣಾಜನ್ಮಾಷ್ಠಮಿಯನ್ನು ಭಕ್ತಿಯಿಂದ ನಡೆಸುವ ಪ್ರಾಂತ್ಯಗಳಲ್ಲಿ ಪ್ರಕೃತಿ ವೈಪರೀತ್ಯಗಳು ಕಡಿಮೆ ಆಗುತ್ತವೆ, ಭಗವಂತನ ಭಕ್ತಿ ಹೊಂದಿರುವ ಪ್ರಾಂತ್ಯಗಳಲ್ಲಿ ಮಳೆ ಸಕ್ರಮವಾಗಿ ಸುರಿದು ಸುಭೀಕ್ಷೆ ತಾಂಡವವಾಡುತ್ತದೆ ಎಂದು ವಿವರಿಸಿದರು.
ಆ.೨೬ ರಿಂದ ಸೆ.೫ ರವರೆವಿಗೂ ನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ಪೂಜಾ ಕಾರ್ಯಕ್ರಮ, ಭಗವದ್ಗೀತೆ ಪಾರಾಯಣ, ಆಧ್ಯಾತ್ಮಿಕ ಕಾರ್ಯಕ್ರಮಗಳು, ಗಾಯನ ಕಾರ್ಯಕ್ರಮ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ, ಸೆ.೫ ರಂದು ಗುರುವಾರ ಮಧ್ಯಾಹ್ನ ೧ ಗಂಟೆಗೆ ಮೆರವಣಿಗೆ ಏರ್ಪಡಿಸಲಾಗಿದೆ.
ಈ ಸಂದರ್ಭದಲ್ಲಿ ವೆಂಕಟರಾಯಪ್ಪ, ಕೋದಂಡಪ್ಪ, ಶ್ರೀನಿವಾಸುಲು, ಮುರಳಿ, ರಮೇಶ್, ಬೈಚಪ್ಪ, ಕೋಲಾರ ಹಾಗೂ ಕೀಲುಕೋಟೆ ಗ್ರಾಮಸ್ಥರು ಭಕ್ತರು ಹಾಜರಿದ್ದರು. ಪ್ರಸಾದ ವಿನಿಯೋಗ ಮಾಡಲಾಯಿತು.