ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ಖಂಡಿಸಿ ಬೃಹತ್ ಪ್ರತಿಭಟನೆ

ಅಥಣಿ :ಆ.೨೭: ಪಟ್ಟಣದ ಅಂಜುಮನ್ ಎ ಇಸ್ಲಾಂ ಕಮೀಟಿ ಹಾಗೂ ಜಮೀಯತೆ ಉಲಮಾ ಎ ಹಿಂದ್ ನೇತೃತ್ವದಲ್ಲಿ ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ
ಮಹಾಂತ ರಾಮಗಿರಿ ಮಹಾರಾಜ ತಮ್ಮ ಭಾಷಣದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿ ತಾಲೂಕಿನ ಮುಸ್ಲಿಂ ಸಮುದಾಯವು ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳನ್ನ ಸ್ವಯಂ ಪ್ರೇರಿತ ಬಂದ್ ಮಾಡಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ
ಎ ಕೆ ಹೈಸ್ಕೂಲ್ ದಿಂದ ಅಂಬೇಡ್ಕರ್ ವೃತ್ತದವರೆಗೆ ಕೈಗೆ ಕಪ್ಪು ಬಟ್ಟೆ ಧರಿಸಿ ಶಾಂತ ರೀತಿಯಲ್ಲಿ ಬ್ರಹತ್ ಪ್ರತಿಭಟನಾ ಯಾರ್ಲಿ
ನಡೆಸಿದರು.
ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು. ಮಹಾಂತ ರಾಮಗಿರಿ ಮಹಾರಾಜ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕೇಂದ್ರ ಹಾಗೂ ಮಹಾರಾಷ್ಟ್ರ ರಾಜ್ಯ ಸರ್ಕಾರಕ್ಕೆ ಒಕ್ಕೊರಲಿನಿಂದ ಒತ್ತಾಯಿಸಿದರು
ನಂತರ ಅಂಬೇಡ್ಕರ್ ವೃತ್ತದಲ್ಲಿ ಅಥಣಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಶಹಾಜಹಾನ ಡೊಂಗರಗಾAವ ಮಾತನಾಡಿ ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ ಅವರ ಕುರಿತಾಗಿ ರಾಮಗಿರಿ ಮಹಾರಾಜ ಅವಹೇಳನಕಾರಿ ಭಾಷಣ ಮಾಡಿದ್ದು, ಈ ಸ್ವಾಮೀಜಿ ಮೇಲೆ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಬೇಕು ಎಂದ ಆಗ್ರಹಿಸಿದ ಅವರು ಭಾರತದ ಸಂವಿಧಾನವು ಎಲ್ಲ ಧರ್ಮದವರಿಗೆ ಸಮಾಜ ಬಂಧುಗಳಿಗೆ ಸಮಾನ ರೀತಿಯಲ್ಲಿ ಜೀವನ ನಡೆಸಲು ಅನುವು ಮಾಡಿಕೊಟ್ಟಿದ್ದರೂ ಕೂಡ ಮಹಾಂತ ರಾಮಗಿರಿ ಮಹಾರಾಜ ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರರ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿರುವುದು ಇಸ್ಲಾಂ ಸಮಾಜದ ಬಾಂಧವರಿಗೆ ತೀವ್ರ ನೋವನ್ನುಂಟು ಮಾಡಿದ್ದು, ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಇಂತಹ ಸ್ವಾಮೀಜಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಹಾಗೂ ಈ ರೀತಿ ಬೇರೆ ಯಾರೇ ಆಗಲಿ ಯಾವುದೇ ಧರ್ಮದ ಕುರಿತಾಗಿ ಆಗಲಿ ಅವಹೇಳನಕಾರಿಯಾಗಿ ಮಾತನಾಡಬಾರದು ಇದಕ್ಕಾಗಿ ವಿಶೇಷ ಕಾನೂನು ರಚಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಮುಸ್ಲಿಂ ಸಮಾಜದ ಮುಖಂಡರಾದ ಅಸ್ಲಮ್ ನಾಲಬಂದ. ಯೂನುಸ್ ಮುಲ್ಲಾ ಮಾತನಾಡಿದರು
ಈ ಸಂದರ್ಭದಲ್ಲಿ ನ್ಯಾಯವಾದಿ ಕೆ ಎಚ್ ಅವಟಿ ಮನವಿ ಪತ್ರ ಓದಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮ ಗುರುಗಳಾದ ಮೌಲಾನಾ ಜುಬೇರ್. ಮೌಲಾನಾ ಕಲೀಮುಲ್ಲಾ. ಮೌಲಾನಾ ಆಶೀಫ್ ಪಟಾಯಿತ್. ಮೌಲಾನಾ ಸೊಹೇಲ ಹೇರವಾಡೆ. ಅಂಜುಮನ್ ಕಮೀಟಿ ಅಧ್ಯಕ್ಷ ಸೈಯ್ಯದಅಮೀನ್ ಗದ್ಯಾಳ, ನ್ಯಾಯವಾದಿ ಮೋಹಸಿನ್ ಮುಜಾಹೀದ. ಚಿಕ್ಕೋಡಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ. ಆಸೀಫ್ ತಾಂಬೋಳಿ. ಅಯ್ಯಾಜ ಮಾಸ್ಟರ್. ಬಾಬು ಖೇಮಲಾಪೂರ. ಸೈಯದ್ ಗಡ್ಡೇಕರ. ಯೂನುಸ್ ಮುಲ್ಲಾ. ಮುಸ್ತಾಕ್ ಮುಲ್ಲಾ, ಆಬೀದ್ ಮಾಸ್ಟರ್. ಅಮಾನುಲ್ಲಾ ಮುಲ್ಲಾ. ಜುಬೇರ್ ನಾಲಬಂದ. ಇಮ್ರಾನ್ ಪಟಾಯಿತ್. ಗುಲಾಬ ನಾಲಬಂದ. ಸನಾವುಲ್ಲಾ ಮೊಮೀನ್. ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಹಜರತ್ ಮೊಹಮ್ಮದ್ ಪೈಗಂಬರ್ ಅವರ ಕುರಿತು ಮಹಾಂತ ರಾಮಗಿರಿ ಮಹಾರಾಜರು ನೀಡಿರುವ ಅವಹೇಳನಕಾರಿ ಹೇಳಿಕೆಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಮುಸ್ಲಿಂ ಸಮಾಜವು ಇಂತಹ ಹೇಳಿಕೆಗಳನ್ನ ಸಹಿಸುವುದಿಲ್ಲ ಈ ಹೇಳಿಕೆಗಳು ದೇಶದ ಸಾಮರಸ್ಯ ಹಾಗೂ ಸೌಹಾರ್ದತೆ ಹಾಳು ಮಾಡುತ್ತವೆ ಹೀಗಾಗಿ ಯಾರೇ ಆಗಲಿ ಯಾವುದೇ ಧರ್ಮದವರಾಗಲಿ ಯಾವುದೇ ಧರ್ಮದ ಬಗ್ಗೆ ಆಗಲಿ ಇಂತಹ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಕಾನೂನು ಜಾರಿಗೊಳಿಸಬೇಕು ಹಾಗೂ ಈ ರೀತಿ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮುಫ್ತಿ ಹಬೀಬುಲ್ಲಾ ಕಾಸ್ಮೀ ಮುಸ್ಲಿಂ ಧರ್ಮ ಗುರುಗಳು ಒತ್ತಾಯಿಸಿದ್ದಾರೆ.