ಅಧರ್ಮದ ಅವನತಿಗೆ,ಧರ್ಮದರಕ್ಷಣೆಗೆ ಧರೆಗಿಳಿದವನೇ ಶ್ರೀ ಕೃಷ್ಣ:- ಶಾಸಕ ಬಿ.ದೇವೇಂದ್ರಪ್ಪ ಅಭಿಮತ
ಸಂಜೆವಾಣಿ ವಾರ್ತೆ; ಜಗಳೂರು.ಆ.೨೭:- ಸಮಾಜದಲ್ಲಿ ಅಧರ್ಮ ತಾಂಡವಾಡು ತ್ತಿರುವಾಗ ಧರ್ಮರಕ್ಷಣೆಗೆ ಧರೆಗಿಳಿದು ಬರುವವನೇ ಅವತಾರ ಪುರುಷ ಶ್ರೀಕೃಷ್ಣ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿ ದ್ದ ಶ್ರೀಕೃಷ್ಣ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ತ್ರೇತಾ, ದ್ವಾಪರ, ಕಲಿಯುಗಾಂತರ ಗಳಲ್ಲಿ ಸನಾತನಧರ್ಮ ದಲ್ಲಿ,ಯುಗಪುರುಷ,ದಾರ್ಶನಿಕ,ಸಾಧುಸಂತ,ಶರಣರು ಜನ್ಮತಾಳಿದ ಇತಿಹಾಸ ಹೊಂದಿದ ಗತವೈಭದ ದೇಶ ಭಾರತ’ಎಂದು ವ್ಯಾಖ್ಯಾನಿಸಿದರು‌.ಮಹಭಾರತದ ಶ್ರೀ ಕೃಷ್ಣನು ಕೇವಲ‌ ಯಾದವ ಸಮಾಜಕ್ಕೆ ಸೀಮಿತವಾಗದೆ ಎಲ್ಲಾವರ್ಗದವರು ಮಹಾಭಾರತ ಗ್ರಂಥವನ್ನು ಅಧ್ಯಯನ ನಡೆಸಬೇಕಿದೆ.ಇದರಿಂದ ಗೀತಾಸಾರ,ಶ್ರೀಕೃಷ್ಣನ ಸಂದೇಶಗಳನ್ನು ಯುವಪೀಳಿಗೆಗೆ ಪಸರಿಸ ಬೇಕಿದೆ .ತಾಲೂಕಿನಲ್ಲಿ ಯಾದವ ಸಮಾಜದವರು ಒಗ್ಗೂಡಿ ಪಕ್ಷಾತೀತ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿ ಅನ್ಯ ಸಮಾಜಕ್ಕೆ ಮಾದರಿಯಾಗಬೇಕು.ಯಾದವ ಸಮಾಜದ ಶ್ರೇಯೋಭಿವೃದ್ದಿಗೆ ಸದಾ ಬದ್ದನಾ ಗಿರುವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜನಪರ ಆಡಳಿತ ನಡೆಸುತ್ತಿದ್ದು.ಹಿಂದುಳಿದ,ಶೋಷಿತ ಸಮುದಾಯಗಳು ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗ ಪಡೆದು ಕೊಂಡು ಮುಖ್ಯವಾಹಿನಿಗೆ ಬರಬೇಕಿದೆ’ ಎಂದು ಕಿವಿಮಾತು ಹೇಳಿದರು.