ಹೈವೇ ದಾಟಲು ವಿದ್ಯಾರ್ಥಿಗಳು, ಗ್ರಾಮಸ್ಥರು, ಮಹಿಳೆಯರು ಹರಸಾಹಸ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಆ.೨೬: ಜೆ.ಎಂ.ಐ.ಟಿ. ಕ್ಯಾಂಪಸ್ ಎದುರುಗಡೆ ಇರುವ ಹೈವೇ ರಸ್ತೆ ದಾಟಲು ವಿದ್ಯಾರ್ಥಿಗಳು, ಗ್ರಾಮಸ್ಥರು, ಮಹಿಳೆಯರು, ಶಿಕ್ಷಕರು ದಿನನಿತ್ಯ ಹರಸಾಹಸ ಪಟ್ಟು, ಐದು ಅಡಿಗಿಂತ ಎತ್ತರ ಇರುವ ತಂತಿ ಬೇಲಿಯನ್ನು ಅಥವಾ ಕಲ್ಲಿನ ಕಾಂಪೌAಡನ್ನು ದಾಟಿ, ರಸ್ತೆಗಳಿದು ಅಲ್ಲಿಂದ ಅವರು ವೇಗವಾಗಿ ಬರುವ ವಾಹನಗಳಿಂದ ಬಚಾವಾಗಿ, ಆ ಕಡೆ ಬದಿಯನ್ನು ಮುಟ್ಟಿದಾಗ ನಿಟ್ಟಿಸಿರು ಬಿಡುತ್ತಿದ್ದಾರೆ. ದಿನನಿತ್ಯ ಸಾವಿನೊಂದಿಗೆ ಹೋರಾಡುತ್ತಿರುವ ಈ ವಿದ್ಯಾರ್ಥಿಗಳನ್ನ, ಗ್ರಾಮಸ್ಥರನ್ನು, ಕಾಪಾಡುವ ದೃಷ್ಟಿ ಯಾವ ಅಧಿಕಾರಿಗಳಿಗೂ ಕಾಣುತ್ತಿಲ್ಲ. ಇಲ್ಲಿಯ ಜನರಿಗೆ ಪ್ಲೆöÊಒವರ್ ಕೊಡಿ ಎಂದು ಬಹಳಷ್ಟು ದಿನಗಳಿಂದ ಬೇಡಿಕೆ ಇದ್ದರೂ ಸಹ ಇತ್ತಕಡೆ ಯಾವುದೇ ಅಧಿಕಾರಿಗಳು ಗಮನ ನೀಡುತ್ತಿಲ್ಲ ಎಂದು ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿಯವರು ಅಪಾದಿಸಿದ್ದಾರೆ.ಏಕೆಂದರೆ ಇವರೆಲ್ಲ ಬಡ ಜನರು, ಗ್ರಾಮಸ್ಥರು, ಹಿಂದುಳಿದವರು, ಬಡ ವಿದ್ಯಾರ್ಥಿಗಳು, ಇವರ ಜೀವ ನಮಗೆ ಲೆಕ್ಕಕ್ಕಿಲ್ಲ ಎಂಬ ಧೋರಣೆಯನ್ನ ಅಧಿಕಾರಿಗಳು ತೋರುತ್ತಿದ್ದಾರೆ. ಜೆಎಂಐಟಿಯ ಹಲವು ಪಿಯು ಕಾಲೇಜ್ಗಳ ವಿದ್ಯಾರ್ಥಿಗಳು, ಗ್ರಾಮಸ್ಥರು, ಮಹಿಳೆಯರು, ದಿನ ನಿತ್ಯ ಕೆಲಸಕ್ಕೆ ಹೋಗುವಂತಹ ಕಾರ್ಮಿಕರು, ಈ ಹೈವೇಯನ್ನು ದಾಟುವುದಾದರೂ ಹೇಗೆ?. ಅಕ್ಕಪಕ್ಕ ಹೋಗಿ ಅಂಡರ್ ಪಾಸ್‌ನಲ್ಲಿ ದಾಟಬೇಕೆಂದರೆ ಕನಿಷ್ಠ ಪಕ್ಷ ಒಂದು ಕಿಲೋಮೀಟರ್ ನಡೆಯಬೇಕು, ಯಾವ ಸಾಧಾರಣ ಮನುಷ್ಯ ಒಂದು ಕಿಲೋಮೀಟರ್ ಅನವಶ್ಯಕವಾಗಿ ನಡೆದು, ರಸ್ತೆದಾಟುವÀಷ್ಟು ಶಕ್ತಿ ಅವನಲ್ಲಿರುತ್ತದೆ. ಇತರದ ಜನಗಳ ಬಗ್ಗೆ ನಾವು ಯೋಚನೆಗಳನ್ನು ಮಾಡಬೇಕಾಗುತ್ತದೆ. ಹಾಗಾಗಿ ಸರ್ಕಾರ, ಜಿಲ್ಲಾಡಳಿತ, ರಾಜ್ಯ ಸರ್ಕಾರದ ಅಧಿಕಾರಿಗಳು, ಇಂಥ ಕಡೆ ಪ್ಲೆöÊಓವರ್ ಗಳನ್ನ ನಿರ್ಮಿಸಿಕೊಟ್ಟು, ಜನರ ಜೀವನವನ್ನ ಕಾಪಾಡಬೇಕಾಗಿದೆ. ದುಡ್ಡಿನ ಲೆಕ್ಕಕಿಂತ ಅಮೂಲ್ಯವಾದ ಜೀವದ ಲೆಕ್ಕವನ್ನು ತೆಗೆದುಕೊಳ್ಳಬೇಕಾಗುತ್ತದೆ. ಯಾರಾದರೂ ಮಕ್ಕಳು ಮತ್ತು ಗ್ರಾಮಸ್ಥರು ಮರಣ ಹೊಂದಿದರೆ, 2ಂ ರಿಂದ 3ಂ ಲಕ್ಷ ಪರಿಹಾರ ನೀಡುವಂತ ಪರಿಸ್ಥಿತಿ ಬರುತ್ತದೆ. ಅದೇ ಹಣದಲ್ಲಿ ಸಾಧಾರಣ ಗುಣಮಟ್ಟದ, ಅದ್ಭುತವಾದ ಪ್ಲೆöÊಓವರ್ ನಿರ್ಮಿಸಬಹುದು. ಕಡಿಮೆ ವೆಚ್ಚದ ಗಟ್ಟಿಮುಟ್ಟಾದ, ಪ್ಲೆöÊಓವರ್ ನಿರ್ಮಿಸುವುದರ ಬಗ್ಗೆ ಇಂಜಿನಿಯರ್‌ಗಳ ಸಲಹೆ ಪಡೆದು, ವಿದ್ಯಾರ್ಥಿಗಳನ್ನು, ಶಿಕ್ಷಕರನ್ನ, ಮಹಿಳೆಯರನ್ನ ಸುರಕ್ಷಿತವಾಗಿ ರಸ್ತೆ ದಾಟುವಂತೆ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ವಿನಂತಿಸಿಕೊAಡಿದ್ದಾರೆ.ಇದೇ ರೀತಿ ಬಸವೇಶ್ವರ ಆಸ್ಪತ್ರೆ ಹತ್ತಿರದಲ್ಲೂ ಸಹ ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು, ಅಕ್ಕಪಕ್ಕದ ನಿವಾಸಿಗಳು, ರಸ್ತೆದಾಡಲು ಹರÀಸಾಹಸÀ ಪಡುತ್ತಾರೆ. ಅವರಿಗೂ ಸಹ ಎಡಬದಿ ಅಥವಾ ಬಲಬದಿಯಲ್ಲಿ ಒಂದು ಕಿಲೋಮೀಟರ್ ದೂರ ನಡೆದಾಗ ಮಾತ್ರ ಅವರಿಗೆ ಅಂಡರ್‌ಪಾಸ್‌ಗಳು ಸಿಗುತ್ತವೆ. ದಿನನಿತ್ಯದ ಸಂಕಷ್ಟಗಳನ್ನ ಬಗೆಹರಿಸಿಕೊಳ್ಳಲು ರಸ್ತೆ ದಾಡಬೇಕಾದಂತ ಜನರಿಗೆ, ಒಂದು ಕಿಲೋಮೀಟರ್‌ನಷ್ಟು ಅನಾವಶ್ಯಕವಾಗಿ ನಡೆದು, ರಸ್ತೆ ದಾಟು ಎಂದರೆ ಯಾವ ವ್ಯಕ್ತಿಯ ಬಳಿ ಅಷ್ಟೊಂದು ಶಕ್ತಿ ಇರುತ್ತದೆ, ವಾಹನ ಇರುವವರು ಹೇಗಾದರೂ ಮಾಡಿ ರಸ್ತೆಯನ್ನು ದಾಟಿಸುತ್ತಾರೆ, ಆದರೆ ನಡೆದು ಹೋಗುವಂತವರಿಗೆ ಕನಿಷ್ಠಪಕ್ಷ ಹತ್ತಿರದಲ್ಲಿ ಸಿಗುವಂತಹ ಪ್ಲೆöÊಓರ‍್ಗಳನ್ನ ನಿರ್ಮಿಸಿ ಕೊಡಬಹುದು. ಇದರ ಬಗ್ಗೆ ಹೈವೇ ಅಧಿಕಾರಿಗಳು, ರಾಜ್ಯ ಸರ್ಕಾರದವರು, ಜಿಲ್ಲಾಡಳಿತದವರು ಗಮನ ಹರಿಸಬೇಕಾಗಿದೆ. ಊರಿನ ಮಧ್ಯೆ ಹೋಗುವ ಹೈವೇಗಳಿಂದ ಜನರ ಜೀವನ ಅಸ್ತವ್ಯಸ್ತಗೊಂಡಿದೆ, ಅವುಗಳನ್ನ ಸರಿಪಡಿಸಬೇಕಾದ್ದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದರು.
